ಶಿವಮೊಗ್ಗ: ಋತುಚಕ್ರ ಹಾಗೂ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ಜೆಸಿಐ ಸಂಸ್ಥೆಗಳಿಂದ ಪ್ರಯಾಸ ಎಂಬ ವಿಶೇಷ ಜಗೃತಿ ಅಭಿಯಾನ ನಡೆಸಲಾಯಿತು. ವಾಕಾಥಾನ್ ಮೂಲಕ ಸಾರ್ವಜನಿ ಕರಿಗೆ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಋತುಚಕ್ರದ ಜಾಗೃತಿ ಜಥಾವು ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಿಂದ ಬಸ್ ನಿಲ್ದಾಣದವರೆಗೂ ಆಯೋಜಿಸಿದ್ದ ಅಭಿಯಾನದಲ್ಲಿ ಎಲ್ಲ ಜೆಸಿಐ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪzಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ಜಗೃತಿ ನಡೆಸಲಾಯಿತು.
ಡಾ. ಶೀಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಬಲೂನ್ ಹಾರಿಸುವುದರ ಮುಖಾಂತರ ಕಾರ್ಯಕ್ರಮ ಹಾಗೂ ಜಗೃತಿ ಜಥಾಕ್ಕೆ ಚಾಲನೆ ನೀಡಿದರು. ಋತುಚಕ್ರದ ಬಗ್ಗೆ ಮಹಿಳೆಯರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು.
ಜೆಸಿಐ ಸಂಸ್ಥೆಯ ಪೂರ್ಣಿಮಾ ಸುನಿಲ್, ಸುಷ್ಮಾ, ಕಿರಣ್, ಶ್ರೀಧರ್ ಹೆಗಡೆ, ಶೋಭಾ ಸತೀಶ್, ಅಶ್ವಿನಿ, ಕಾರ್ಯಕ್ರಮ ಸಂಯೋಜಕಿ ದಿವ್ಯ, ವಲಯ ಅಧ್ಯಕ್ಷ ಅನುಷ್ ಗೌಡ, ವಲಯ ಉಪಾಧ್ಯಕ್ಷ ಸತೀಶ್ ಚಂದ್ರ, ವೀರೇಶ್, ರೋಟರಿ ಮಾಜಿ ಸಹಾಯಕ ಗವರ್ನರ್ ವಿಜಯ ಕುಮಾರ್, ಪ್ರತಿಮಾ ಡಾಕಪ್ಪ ಗೌಡ, ನರಸಿಂಹ ಶೆಟ್ಟಿ ಶಾರದಾ ಶೇಷಗಿರಿ, ಡಾ. ಅಖಿಲ, ಡಾ. ಲಲಿತಾ ಭರತ್, ಗೌರೀಶ್, ಭಾರ್ಗವ್, ಪ್ರಮೋದ್, ಸಂತೋಷ್, ವಾಣಿ ಜಗದೀಶ್ ಉಪಸ್ಥಿತರಿದ್ದರು.
ಜಾಗೃತಿ ಜಥಾದಲ್ಲಿ ೧೦ ಜೆಸಿಐ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಕರಪತ್ರ ಹಾಗೂ ಪ್ಲೇ ಕಾರ್ಡುಗಳನ್ನು ಹಿಡಿದುಕೊಂಡು ಸಾರ್ವಜನಿಕರಲ್ಲಿ ಜಗೃತಿ ಮೂಡಿಸಿದರು.