ನೀರು, ವಿದ್ಯುತ್, ಸ್ವಚ್ಚತೆಯ ಅವ್ಯವಸ್ಥೆ: ಪಾಲಿಕೆಯಲ್ಲಿ ಕೋಲಾಹಲ…

ಶಿವಮೊಗ್ಗ: ಶಿವಮೊಗ್ಗ ಮಹಾ ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಮಾಮೂಲಿ ಯಂತೆ ಮೂಲಭೂತ ಸೌಲಭ್ಯ ಗಳಾದ ನೀರು, ವಿದ್ಯುತ್ ಮತ್ತು ಸ್ವಚ್ಚತೆಯ ಅವ್ಯವಸ್ಥೆಗೆ ಭಾರಿ ಪ್ರತಿ ಭಟನೆ, ಕೋಲಾಹಲ ನಡೆಯಿತು.
ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಅವರು, ಸಿಟಿ ಸೆಂಟ್ರಲ್ ಮಾಲ್ ವಿಚಾರಕ್ಕೆ ಸಂಬ ಂಧಿಸಿದಂತೆ ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ eನೇಶ್ವರ್ ಅವರು, ಇದು ಮುಗಿದ ಅಧ್ಯಾಯ ಮತ್ತೆ ಮತ್ತೆ ಚರ್ಚೆಬೇಡ ಎಂದಾಗ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿ ಸಿದರು.
ಮೇಯರ್ ಮಧ್ಯ ಪ್ರವೇಶಿಸಿ ಈಗಾಗಲೇ ಮಾಲ್ ಸಂಬಂಧಪಟ್ಟ ಹಾಗೆ ಕಡತ ಜಿಧಿಕಾರಿ ಕಚೇರಿಗೆ ಹೋಗಿದೆ. ಅವರು ನೀಡುವ ವರದಿ ಆಧರಿಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು. ಪ್ರತ್ಯುತ್ತರ ನೀಡಿದ ವಿಪಕ್ಷದವರು ಮೇಯರ್ ಅವರು ಆಡಳಿತ ಪಕ್ಷದ ನಿರ್ದೇಶನದ ಮೇರೆಗೆ ಹೇಳಿಕೆ ಕೊಡುತ್ತಿzರೆ ಎಂದು ಕಟಕಿಯಾಡಿದರು. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸೋ ಉದ್ದೇಶವೇಯಿಲ್ಲ. ನೂರಾರು ಸಮಸ್ಯೆಗಳಿದ್ದರೂ ಕಲಾಪವನ್ನು ವಿನಾಕಾರಣ ವ್ಯರ್ಥಮಾಡುತ್ತಾರೆ ಎಂದು ಮಾಜಿ ಉಪಮೇಯರ್ ಶಂಕರ್‌ಗನ್ನಿ ತೀವ್ರ ವಾಗ್ದಾಳಿ ನಡೆಸಿದರು.
ಇನ್ನೋರ್ವ ಸದಸ್ಯ ವಿಶ್ವನಾಥ್ ಅವರು ಕೂಡ ವಿಪಕ್ಷಗಳ ಬಗ್ಗೆ ಟೀಕಾ ಪ್ರಹಾರ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚಿಸೋಣ ಎಂದರು. ಚನ್ನಬಸಪ್ಪ ಹಾಗೂ ಸುರೇಖಾ ಮುರುಳೀಧರ್ ಮಾತನಾಡಿ, ಕಾಂಗ್ರೆಸ್ ಆಡಳಿತದ ಅವಧಿ ಕಾಲದಲ್ಲಿ ಪಾಲಿಕೆ ಆಸ್ತಿಯನ್ನು ವಕ್ಫ್‌ಬೋರ್ಡಿಗೆ ಖಾತೆಮಾಡಿ ಕೊಡಲಾಗಿದೆ. ಈಗ ದೇವಸ್ಥಾನದ ಆಸ್ತಿಗಳ ಬಗ್ಗೆ ಅಧಿಕಾರಿಗಳು ವಿಳಂಬ ಮಾಡುತ್ತಿzರೆ. ಬಾಪೂಜಿ ನಗರದಲ್ಲಿ ದೇವಾಲ ಯದ ಜಗವನ್ನು ಇನ್ನು ಅಧಿಕಾರಿಗಳು ಅಳತೆಮಾಡಿಕೊಟ್ಟಿಲ್ಲ. ಯಾಕೆ ಈ ರೀತಿಯ ನಿರ್ಲಕ್ಷ್ಯ ಎಂದು ಗೊತ್ತಾಗುತ್ತಿಲ್ಲ ಎಂದಾಗ ವಿಪಕ್ಷಗಳು ಚುನಾವಣೆ ಹತ್ತಿರ ಬಂದಾಗ ನಿಮಗೆ ದೇವಾಲಯಗಳ ಬಗ್ಗೆ ವಿಶೇಷ ಆಸಕ್ತಿ ಬರುತ್ತದೆ ಎಂದು ಟೀಕಿಸಿದರು.

ಪ್ರಮುಖವಾಗಿ ತೀವ್ರ ಬೇಸಿಗೆಯಿಂದ ಜನ ಬಳಲುತ್ತಿದ್ದು, ಪ್ರತಿಯೊಂದು ವಾರ್ಡ್‌ನಲ್ಲೂ ಬೀದಿದೀಪ, ಸ್ವಚ್ಚತೆ ಹಾಗೂ ಪ್ರಮುಖವಾಗಿ ಕುಡಿಯುವ ನೀರಿನ ಅವ್ಯವಸ್ಥೆಯಿದೆ. ಅನೇಕ ವಾರ್ಡ್‌ಗಳಲ್ಲಿ ವಾರಗಟ್ಟಲೆ ನೀರು ಬರುತ್ತಿಲ್ಲ. ಒಡೆದ ಪೈಪ್‌ಗಳನ್ನು ಅಧಿಕಾರಿಗಳು ಸರಿಪಡಿಸುತ್ತಿಲ್ಲ. ಕೆಲವೊಂದು ರಸ್ತೆಯಲ್ಲಿ ಧಾರಕಾರ ವಾಗಿ ನೀರು ಹರಿದು ಹೋಗು ತ್ತಿದ್ದು, ಗಮನಕ್ಕೆ ತಂದರೂ ವಾಟರ್ ಬೋರ್ಡ್ ಅಧಿಕಾರಿಗಳು ಹತ್ತಿರ ಸುಳಿಯುತ್ತಿಲ್ಲ. ಜನರು ಜನಪ್ರತಿನಿಧಿಗಳು ಹಿಗ್ಗಾಮುಗ್ಗಾ ಬೈಯುತ್ತಿದ್ದು ನಾವು ಓಡಾಡು ವುದು ಕಷ್ಟವಾಗಿದೆ ಎಂದು ಧೀರರಾಜ್ ಹೊನ್ನವಿಲೆ ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷಗಳ ಸದಸ್ಯರು ಕೂಡ ಒಕ್ಕೊರಲಿನಿಂದ ಇದಕ್ಕೆ ಧ್ವನಿಗೂಡಿ ಸಿದರು. ವಿಪಕ್ಷ ಸದಸ್ಯ ಹೆಚ್. ಸಿ.ಯೋಗೀಶ್ ಖಾಲಿ ಕೊಡಗಳ ಪ್ರದರ್ಶನ ಮಾಡಿ ಸದನದ ಬಾವಿಗೆ ವಿಪಕ್ಷ ಸದಸ್ಯರೊಂದಿಗೆ ತೆರಳಿ ನೀರಿನ ಅಸಮರ್ಪಕ ವಿತರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದರು.

ನೀರಿನ ಸಮಸ್ಯಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಎ ಸದಸ್ಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಹಲವಾರು ಲೇಔಟ್‌ಗಳು ನಿರ್ಮಾಣವಾಗಿ ಹಸ್ತಾಂತರಗೊಳ್ಳುವ ಸಂದರ್ಭ ದಲ್ಲಿ ಲೇಔಟ್‌ಗಳ ಮಾಲೀಕರು ಬಿಲ್ ಬಾಕಿ ಉಳಿಸಿಕೊಂಡಿರುತ್ತಾರೆ. ಪಾಲಿಕೆ ಹಸ್ತಾಂತರವಾಗುವ ಮುನ್ನವೇ ಮೆಸ್ಕಾಂನವರು ವಿದ್ಯುತ್ ಕಡಿತಗೊಳಿಸುತ್ತಾರೆ. ಲೇಔಟ್‌ಗಳಿಗೆ ಎನ್‌ಒಸಿ ಕೊಡುವ ಮುನ್ನ ಅಧಿಕಾರಿಗಳು ಪರಿಶೀಲನೆ ಮಾಡದೆ ಕೊಡುವುದರಿಂದ ಪಾಲಿಕೆಗೆ ನಷ್ಟ ಅಲ್ಲದೆ ಲೇಔಟ್ ನಿವಾಸಿಗಳು ಕತ್ತಲೆಯಲ್ಲಿ ಇರುವಂ ತಾಗಿದೆ. ಪಾಲಿಕೆ ಸದಸ್ಯರಿಗೆ ಸ್ಥಳೀ ಯರು ಅಧಿಕಾರಿಗಳ ಧೋರಣೆ ಯಿಂದ ಬೈಸಿಕೊಳ್ಳುವಂತಾಗಿದೆ. ಎನ್‌ಒಸಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಧೀರರಾಜ್ ಹೊನ್ನವಿಲೆ ಆಗ್ರಹಿಸಿ ದರು. ಆಯುಕ್ತರು ಈ ಸಂಬಂಧ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಈ ರೀತಿಯ ತಪ್ಪು ಮರುಕಳಿ ಸದಂತೆ ಸೂಚಿಸಿದರು. ಇಂದಿನ ಸಭೆಯಲ್ಲಿ ವ್ಯಾಪಕವಾಗಿ ಎ ಸದಸ್ಯರು ಪಕ್ಷ ಭೇದ ಮರೆತು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿ ರುವುದು ಕಂಡು ಬಂತು. ಸಭೆಯ ಬಹುಪಾಲು ಗದ್ದಲದ ನಡೆ ಯಿತು. ಸಭೆಯ ಅಧ್ಯಕ್ಷತೆಯನ್ನು ಮೇಯರ್ ಶಿವಕುಮಾರ್ ಅವರು ವಹಿಸಿದರು.
ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಆಯುಕ್ತರಾದ ಮಾಯಣ್ಣಗೌಡ ಹಾಗೂ ಪಾಲಿಕೆಯ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.