ಆಧುನಿಕ ಭರಾಟೆಯಲ್ಲಿಂದು ನಶಿಸುತ್ತಿರುವ ಸಂಸ್ಕೃತಿ – ಸಂಸ್ಕಾರ: ನ್ಯಾ| ಕುಮಾರ್ ವಿಷಾದ

ಶಿಕಾರಿಪುರ : ಭಾರತೀಯ ಸನಾತನ ಧರ್ಮ ಅತ್ಯಂತ ಶ್ರೇಷ್ಟವಾಗಿದ್ದು, ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಭವ್ಯ ಇತಿಹಾಸವನ್ನು ಸನಾತನ ಧರ್ಮ ಹೊಂದಿದೆ. ದೈವದ ಬಗ್ಗೆ ಅಪಾರ ನಂಬಿಕೆ ಗುರು ಹಿರಿಯರನ್ನು ಗೌರವಿಸುವ ಪರಂ ಪರೆಯಿಂದಾಗಿ ಸಮಯಕ್ಕೆ ಸರಿ ಯಾಗಿ ಮಳೆ ಬೆಳೆಯಿಂದ ದೇಶ ಸುಭಿಕ್ಷವಾಗಿತ್ತು. ಆದರೀಗ ಆಧುನಿ ಕತೆಯ ಭರಾಟೆಯಲ್ಲಿ ಅದನ್ನೆ ಮರೆಮಾಚುವ ಪ್ರಯತ್ನ ನಡೆಯು ತ್ತಿದೆ ಎಂದು ಇಲ್ಲಿನ ಜೆ.ಎಂ. ಎಫ್.ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಯಶವಂತ್ ಕುಮಾರ್ ವಿಷಾದ ವ್ಯಕ್ತಡಿಸಿದರು.
ಪಟ್ಟಣದ ರಥಬೀದಿಯಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ದೈವೀ ಸ್ನೇಹ ಮಿಲನ ಹಾಗೂ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಗವಂತ ವಿಶ್ವಕ್ಕೆಲ್ಲ ಒಬ್ಬನೇ ಆಗಿದ್ದು ವಿವಿಧ ಪ್ರದೇಶಗಳಲ್ಲಿ ಜನತೆ ಅವರವರ ಭಕುತಿ ಭಾವಕ್ಕೆ ಅನುಗುಣವಾಗಿ ಅವರದ್ದೇ ಶೈಲಿ ಯಲ್ಲಿ ಭಗವಂತನನ್ನು ಪ್ರಾರ್ಥಿಸುತ್ತಾರೆ, ಪ್ರಾರ್ಥಿಸುವ ವಿಧಾನಗಳು ಬದಲಾದರೂ ಎ ಧರ್ಮಗಳ ಸಾರವು ಒಂದೇ ಆಗಿದ್ದು ಭಗವಂತ ಮಾತ್ರ ಒಬ್ಬನೇ ಇರುತ್ತಾನೆ ಎಂಬುದನ್ನು ನಾವು ಮನಗಾಣಬೇಕಾಗಿದೆ. ಸಮಾಜಕ್ಕೆ ನಾವು ಯಾವುದೋ ಒಂದು ರೀತಿಯ ಕೊಡುಗೆ ಕೊಡಬೇಕು ಎಂದು ಕೊಂಡಿದ್ದರೆ ಅದು ಮೊಟ್ಟಮೊದಲು ಹೆತ್ತ ತಂದೆ ತಾಯಿಗಳನ್ನು ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿದಾಗ ಮಾತ್ರ ನಮ್ಮ ಬದುಕು ಬದುಕಿಗೊಂದು ಸಾರ್ಥಕತೆ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಗುರು ಹಿರಿಯರನ್ನು ತಂದೆ-ತಾಯಿಯರನ್ನು ಗೌರವಿಸಿ ಪ್ರೀತಿಸಿದಾಗ ಅದು ನಿಜವಾಗಿಯೂ ಭಗವಂತನ ಸೇವೆಯಾಗುತ್ತದೆ ಎಂದು ತಿಳಿಸಿದರು.


ಸಂಸ್ಕಾರ, ಸಂಸ್ಕೃತಿಯನ್ನು ಹೊಂದಿದ ಪ್ರತಿಯೊಬ್ಬರೂ ಸಮಾಜಕ್ಕೆ ದೊಡ್ಡ ಆಸ್ತಿಯಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ವಿವಿಧ ಧರ್ಮಗಳ, ವಿವಿಧ ದೇಶಗಳ ವಿಧಾನಗಳು ಬೇರೆ ಬೇರೆಯಾಗಿದ್ದರು ಪ್ರಾರ್ಥನೆ ಮಾತ್ರ ಒಂದೇ ಆಗಿರುತ್ತದೆ ಎಲ್ಲ ಧರ್ಮ ಗಳ ಸಾರವು ಮಾನವೀಯ ಮೌಲ್ಯ ಗಳನ್ನು ಪ್ರತಿಪಾದಿಸುತತಿವೆ ಈ ಸತ್ಯವನ್ನು ನಾವು ಅರಿಯ ಬೇಕಾ ಗಿದೆ. ಭಗವಂತನನ್ನು ಪೂಜಿಸುವ ಪ್ರಾರ್ಥಿಸುವ ಆರಾಧಿಸುವ ಕ್ರಮಗಳು ಬೇರೆ ಬೇರೆಯಾಗಿದ್ದರೂ ಸತ್ವ ಮಾತ್ರ ಒಂದೇ ಆಗಿದೆ ಎಂಬು ದನ್ನು ಎಲ್ಲ ಧರ್ಮಗಳು ಸಾರಿ ಹೇಳಿವೆ ಪರಸ್ಪರ ಗೌರವದಿಂದ ಸ್ನೇಹದಿಂದ ಪ್ರೀತಿ ಯಿಂದ ಬದುಕಿ ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣಕ್ಕೆ ಅದು ನಾಂದಿಯಾಗು ತ್ತದೆ. ಬ್ರಹ್ಮಕುಮಾರಿ ವಿವಿ ಈ ನಿಟ್ಟಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಪ್ರಶಂಶನೀಯ ಕಾರ್ಯವಾಗಿದ್ದು ಇಲ್ಲಿ ನಡೆಯುವ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವುದೇ ಭಾಗ್ಯ, ಇಲ್ಲಿ ನಾವು ಮಾಡುವ ಸೇವೆ ಭಗವಂತನ ಕೃಪೆಗೆ ಪಾತ್ರವಾಗುತ್ತದೆ. ಇದರಿಂದಾಗಿ ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸುವ ಕಾರ್ಯ ನಡೆದಾಗ ಮಾತ್ರ ಸಾಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಸೇವೆ ಮಾಡುತ್ತಿರುವ ಬ್ರಹ್ಮಕುಮಾರಿಯ ವಿಶ್ವವಿದ್ಯಾಲಯದ ಅಕ್ಕಂದಿರ, ತಾಯಂದಿರ, ಅಣ್ಣಂದಿರ ಸೇವೆ ಸಾರ್ಥಕವಾಗುತ್ತದೆ ಎಂದರು.
ಸ್ಥಳೀಯ ಪ್ರ.ಬ್ರ ವಿ.ವಿ ದ ಸ್ನೇಹಕ್ಕ ಪ್ರಾಸಾತಿವಿಕವಾಗಿ ಮಾತನಾಡಿದರು.ನ್ಯಾಯಾಧೀ ಶರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಪದ್ಮಕ್ಕ, ಸುಹಾಸಿನಿ, eನೇಶ್ವರಿ ಕಡೂರು,ಜಯಕ್ಕ ಹುನಗುಂದ, ನ್ಯಾಯವಾದಿ ವಸಂತ ಮಾಧವ, ಮಂಜಾಚಾರ್, ಶಿವಕುಮಾರ್. ಕೆ ಎಸ್ ಹುಚ್ರಾಯಪ್ಪ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.