ಒಗ್ಗಟ್ಟಿನಿಂದ ಕೂಡಿ ನಡೆದಾಗ ಸಂಘಟನೆಗಳಿಗೆ ಬಲ: ಕಲ್ಮಠ

ಕುಕುನೂರು: ತಾಲೂಕಿನ ಚಂಡೂರು ಗ್ರಾಮದಲ್ಲಿ ಬೇಡ ಜಂಗಮ ಗ್ರಾಮ ಘಟಕ ಸ್ಥಾಪಿಸಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಚೆಂಡೂರು ಗ್ರಾಮದಲ್ಲಿ ಬೇಡ ಜಂಗಮ ಘಟಕದ ಅಧ್ಯಕ್ಷರಾಗಿ ವಿರೂಪಾಕ್ಷಯ್ಯ ಶಂಕಿನ್, ಉಪಾಧ್ಯಕ್ಷರಾಗಿ ಪ್ರಕಾಶಯ್ಯ ಶಂಕಿನ, ಹಣಕಾಸು ಕಂಟಯ್ಯ ಶಂಕಿನ, ಕಾರ್ಯದರ್ಶಿಯಾಗಿ ಶಿವಲಿಂಗಯ್ಯ ಮಠದ, ಸಹ ಕಾರದರ್ಶಿಯಾಗಿ ಕಪ್ಪತ್ತಮಲ್ಲಯ್ಯ ಶಂಕಿನ, ಗೌರವ ಅಧ್ಯಕ್ಷರು ಬಸಯ್ಯ ಮಹಾದೇವಯ್ಯ ಶಂಕಿನ ಮತ್ತು ದ್ಯಾಮಣ್ಣ ಮಡಿವಾಲರ, ಸದಸ್ಯರು ಜಗದೀಶ್ ಮಹಾಲಿಂಗಯ್ಯ ಶಂಕಿನ್, ಬಸಯ್ಯ ಗುದ್ನೆಯ್ಯ ಶಂಕಿನ್, ನವೀನ್ ಬಸವರಾಜ್ ಶಂಕಿನ್, ಮಂಜುನಾಥ್ ಶರಣಯ್ಯ ಭದ್ರಾಪುರ ಮಠ, ಈರಣ್ಣ ಮಾರ್ಕಂಡಯ್ಯ ಶಂಕಿನ್ ಅವರನ್ನು ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿದ ಜಂಗಮ ಸಮಾಜದ ಅಧ್ಯಕ್ಷ ಮಹೇಶ್ ಕಲ್ಮಠ ಎ ಜಂಗಮ ಬಾಂಧವರು ಹೊಂದಿಕೊಂಡು ಯಾವುದೇ ವಿಷಯವನ್ನಾಗಿ ಕುಳಿತು ಚರ್ಚಿಸಿ ಸರ್ಕಾರದಿಂದ ಬರುವಂತಹ ಸೌಲಭ್ಯಗಳು ಆಗಲಿ ಅಥವಾ ಜಂಗಮ ಸಮಾಜದ ಬಂಧು ಬಾಂಧವರು ಯಾವುದೇ ರೀತಿಯಿಂದ ತುಳತಕ್ಕೆ ಒಳಗಾದಾಗ ಒಗಟಿನಿಂದ ಹೋರಾಡಿದಾಗ ನಮ್ಮ ಸಮಾಜದ ಬಂಧು ಬಾಂಧವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ನಡೆದಾಗ ಮಾತ್ರ ನಮ್ಮ ಸಮಾಜಕ್ಕೆ ಸಿಗಬೇಕಾದ ಮೀಸಲಾತಿಗಳು ಆಗಲಿ ಅಥವಾ ಯಾವುದೇ ಅನ್ಯಾಯಗಳು ನಡೆದಾಗ ಒಗ್ಗಟ್ಟಿನಿಂದ ಕೂಡಿ ನಡೆದಾಗ ಸಂಘಟನೆಗಳಿಗೆ ಬಲ ಸಿಗುತ್ತದೆ ಎಂದರು.
ಶಾಂತವೀರಯ್ಯ, ಸಂಗಯ್ಯ ಪೂಜರ್, ಗುರು ಹಿರೇಮಠ, ಹಾಗೂ ಚಂಡೂರು ಗ್ರಾಮದ ಜಂಗಮ ಸಮಾಜದ ಗುರು ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು,