ಅಬ್ಬಬ್ಬಾ ಇಂದೆಥಾ ಬಿಸಿಲು: ಹೈರಾಣಾದ ಶಿವಮೊಗ್ಗದ ಜನತೆ…

ಶಿವಮೊಗ್ಗ:ಹಸಿರ ಸೊಬಗಿನ ಮಲೆನಾಡಿನಲ್ಲಿ ಬಿಸಿಲ ಝಳ ಏರುತ್ತಿದೆ. ಬೆಳಿಗ್ಗೆ ೯ ಗಂಟೆ ಆಗು ತ್ತಲೇ ಸೂರ್ಯ ಬಿಸಿಲ ಕಿರಣ ವನ್ನು ಪಸರಿಸುತ್ತಾನೆ. ಶಿವಮೊಗ್ಗ ನಗರವಂತೂ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದೆ. ಬೀಸುವ ಗಾಳಿ ಕೂಡ ಬೆಚ್ಚಗಿದ್ದು, ಮಧ್ಯಾಹ್ನದ ವೇಳೆಗೆ ಜನರು ಮನೆಯಿಂದ ಹೊರಗೆ ಬರುವುದೇ ಕಷ್ಟವಾಗತೊ ಡಗಿದೆ.
ಕಳೆದ ಒಂದೆರಡು ದಿನಗಳಿಂದ ೪೦ ಡಿಗ್ರಿಗೆ ತಾಪಮಾನ ಏರಿದೆ. ಕಳೆದ೧೫ ದಿನಗಳಿಂದಲೂ ೩೮, ೩೯, ಡಿಗ್ರಿ ಸೆಲ್ಷಿಯಸ್ ತಾಪಮಾನ ವಿದ್ದು, ಬೆಳಿಗ್ಗೆ ಕೂಡ ೨೩ರಿಂದ ೨೪ ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಬಿಸಿಲ ಝಳ ನೋಡಿದರೆ ನಾವು ಬಳ್ಳಾರಿ ರಾಯಚೂರಿನಲ್ಲಿದ್ದೇವೋ ಎಂಬ ಭಾವ ಮೂಡುತ್ತದೆ. ಜನರು ಬಿಸಿಲ ಝಳದಿಂದ ಬಾ ಯಾರಿಕೆಯಿಂದ ತಂಪುಪಾನೀಯ ಗಳು ಮೊರೆ ಹೋಗಿzರೆ. ಹೀಗಾ ಗಿ ಅವರ ದೈನಂದಿನ ಖರ್ಚು ಹೆ ಚ್ಚಾಗಿ ಜೇಬಿಗೆ ಕತ್ತರಿ ಬೀಳತೊಡ ಗಿದೆ.
ರಾತ್ರಿಯಂತೂ ಸೆಖೆಗೆ ಮತ್ತು ಸೊಳ್ಳೆಗಳ ಕಾಟಕ್ಕೆ ಜನರು ನಿದೆ ಮಾಡುವುದೇ ಕಷ್ಟವಾಗಿದೆ. ಅದರಲ್ಲೂ ಸಣ್ಣ ಮಕ್ಕಳು, ಎಳೆಯ ಕಂದಮ್ಮಗಳು ಹಾಗೂ ವೃದ್ಧರಿಗೆ ಕಿರಿಯಾಗುತ್ತಿದೆ. ವಿದ್ಯುತ್ ಹೋ ದರಂತೂ ದೇವರೇ ಗತಿ. ಜಗರಣೆ ಕಟ್ಟಿಟ್ಟ ಬುತ್ತಿ. ಹೊರಗೂ ಬರಲಾ ಗದೆ ಒಳಗೂ ಇರಲಾರದೆ ಸಂಕಟ ಪಡುವಷ್ಟರ ಮಟ್ಟಿಗೆ ಸೆಖೆ ಕಾಡು ತ್ತದೆ. ಫ್ಯಾನ್ ಇದ್ದರೂ ಕೂಡ ಅದು ಕ್ರಮೇಣ ಬಿಸಿಯಾಗಿ ಮತ್ತಷ್ಟು ಸೆಖೆ ನೀಡುತ್ತದೆ.


ನಗರದಲ್ಲಿ ತಂಪು ಪಾನೀಯ ಗಳ ಮಾರಾಟ ಹೆಚ್ಚಾಗಿಯೇ ಇದೆ. ಕಲ್ಲಂಗಡಿ, ಎಳನೀರು, ಜ್ಯೂಸ್ ಮಜ್ಜಿಗೆ, ಕಬ್ಬಿನ ಹಾಲುಗಳಿಗೆ ಜನರು ಮುಗಿಬಿದ್ದಿzರೆ.
ಇದಲ್ಲದೆ ಪ್ರಾಣಿ, ಪಕ್ಷಿಗಳು ಕೂಡ ನೀರಿಲ್ಲದೆ ಪರದಾಡುವ ಸ್ಥಿತಿ ಇದೆ. ಮರದ ನೆರಳಿಗೆ ಆಶ್ರಯಿ ಸಲು ಬಿಡಾಡಿ ದನಗಳು ಕಾಯು ವಂತಾಗಿದೆ.ಹಲವರು ತಮ್ಮ ಮನೆಗಳ ಮುಂದೆ ತೊಟ್ಟಿಯನ್ನು ಇಟ್ಟು ಪ್ರಾಣಿ ಪಕ್ಷಿಗಳಿಗೆ ನೀರು ತುಂಬಿಸಿ ನೀಡಿzರೆ.
ಇನ್ನು ಈ ಭಯಂಕರ ಬಿಸಿಲಿಗೆ ಸಾಂಕ್ರಾಮಿಕ ರೋಗಗಳ ಭಯ ಜನರನ್ನು ಕಾಡುತ್ತಿದೆ. ಈಗಾಗಲೇ ಆರೋಗ್ಯಾಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ನೀಡಿzರೆ. ಬೇಸಿಗೆ ಯಲ್ಲಿ ಸಾಮಾನ್ಯವಾಗಿ ಬರುವ ಬೇದಿ, ವಾಂತಿ, ಮುಂತಾದವು ಗಳಿಂದ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿzರೆ. ನಗರದ ಹಲವು ಆರೋಗ್ಯ ಕೇಂದ್ರಗಳಲ್ಲಿ ಬಿಸಿಲಿನ ತಾಪಮಾನದಿಂದ ಆಗು ವ ದುಷ್ಪರಿಣಾಮಗಳ ಬಗ್ಗೆ ಸಾರ್ವ ಜನಿಕರಿಲ್ಲಿ ಜಗೃತಿ ಮೂಡಿಸಲು ಶಿಬಿರಳನ್ನು ಹಮ್ಮಿಕೊಂಡಿzರೆ. ಜೀವನ ಶೈಲಿಯನ್ನು ಬದಲಾಯಿ ಸಿಕೊಳ್ಳಲ ಸಲಹೆ ನೀಡುತ್ತಿzರೆ. ಜೊತೆ ನೀರು ಸೇರಿದಂತೆ ದ್ರವ ರೂಪದ ಆಹಾರವನ್ನು ಹೆಚ್ಚು ಹೆಚ್ಚಾಗಿ ಸೇವಿಸುವಂತೆ ಸೂಚನೆ ನೀಡಿzರೆ. ಕರಿದ ಪದಾರ್ಥಗ ಳಿಂದ ದೂರ ಇರುವುದು ಕ್ಷೇಮ ಎನ್ನುತ್ತಾರೆ.


ಸಾಮಾನ್ಯವಾಗಿ ಮೇ ತಿಂಗ ಳಲ್ಲಿ ಬಿಸಿಲು ಕಡಿಮೆ ಇರಬೇಕಿತ್ತು. ಆದರೆ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯಾದರೂ ಬಿಸಿಲು ಮತ್ತು ಸೆಖೆ ತಡೆಯಲಾಗುತ್ತಿಲ್ಲ. ಈಗಾಗಲೇ ರಾಯಚೂರಿನಲ್ಲಿ ೪೩ ಡಿಗ್ರಿ ತಾಪಮಾನ ದಾಖಲಾಗಿದೆ. ಶಿವಮೊಗ್ಗದಲ್ಲಿ ಕೂಡ ೪೦ರ ಗಡಿ ದಾಟಿದೆ. ಸಾರ್ವಜನಿಕರು ಕಚೇರಿ ಗಳಿಗೆ ತೆರಳಲು ಕಷ್ಟವಾಗುತ್ತಿದೆ. ಅನೇಕ ಕಡೆಗಳಲ್ಲಿ ನೀರಿನ ಸೌಲ ಭ್ಯವೂ ಇರುವುದಿಲ್ಲ. ದ್ವಿಚಕ್ತ ಮತ್ತು ಕಾರು ಗಳನ್ನು ನೆರಳಿಗೆ ನಿಲ್ಲಿ ಸುವುದೇ ಸಮಸ್ಯೆಯಾಗಿದೆ. ಇಡೀ ದಿನ ಬಿಸಿಲಿನ ನಿಲ್ಲಿಸಬೇಕಾ ಗಿದೆ. ಈ ಬಿಸಿಲಿಗೆ ಚರ್ಮದ ಕಾಯಿಲೆಗಳು ಸಾಮಾನ್ಯವಾಗಿವೆ. ಬೆವರುಸಾಲೆಯಿಂದ ಹಿಡಿದು ಚರ್ಮ ಕೆಂಪಾಗುವ, ಕಪ್ಪಾಗುವ ಸಾಧ್ಯತೆ ಇದೆ. ಇದಕ್ಕೆ ತಕ್ಷಣವೇ ವೈದ್ಯರ ಬಳಿ ತೆರಳಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಒಟ್ಟಾರೆ ಬಿಸಿಲಿನ ತಾಪ ಹೆಚ್ಚಾ ಗಿದ್ದು, ಇನ್ನೂ ಹೆಚ್ಚುವ ಸಾಧ್ಯತೆ ಇರುವುದರಿಂದ ವಯಸ್ಸಾದವರ ನ್ನು, ಆದಷ್ಟು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಸೂಕ್ತವಾಗಿದೆ. ಮಕ್ಕಳನ್ನು ಮನೆಯ ಒಳಗಡೆಯೇ ಆಡವಾಡಲು ಅನುಕೂಲ ಮಾಡಿ ಕೊಡಬೇಕು ಮತ್ತು ಯುವಕರು ಬಿಸಿಲ ತಾಪ ತಾಳದೆ ಈಜಡಲು ಹೋದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಹಾನಗರ ಪಾಲಿಕೆ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಇನ್ನೇನು ಮುಂಗಾರು ಮಳೆ ಕಾಲಿಡುತ್ತಿದೆ.ಅಲ್ಲಿಯವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಈಗಾಗಲೇ ಸೂಚನೆ ನೀಡಿದೆ.