ಮೆಗ್ಗಾನ್ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ…

ಶಿವಮೊಗ್ಗ: ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆ ಸಿಮ್ಸ್, ಶಿವಮೊಗ್ಗ ವತಿಯಿಂದ ಇಂದು ಅಂತರರಾಷ್ಟ್ರೀಯ ಸುಶ್ರೂಶಾಧಿಕಾರಿಗಳ ದಿನಾಚರಣೆ ಪ್ರಯುಕ್ತ ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು ಹಾಗೂ ಎ ಸಿಬ್ಬಂದಿಯವರಿಂದ ಮೆಗ್ಗಾನ್ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಜಿ ಸರ್ಜನ್ ಸಿದ್ದನಗೌಡ ಪಾಟೀಲ್ ಹಾಗೂ ಮೆಗ್ಗಾನ್‌ನ ಸುಶ್ರೂಶಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ನೀಡಿದರು.