ಕಸ್ತೂರಿ ರಂಗನ್ ವರದಿ ಕುರಿತು ಗೃಹ ಸಚಿವ ಜ್ಞಾನೇಂದ್ರ ಸುಳ್ಳು ಹೇಳಿಕೆ: ರಮೇಶ್ ಹೆಗ್ಡೆ

ಶಿವಮೊಗ್ಗ : ಡಾ.ಕಸ್ತೂರಿ ರಂಗನ್ ವರದಿ ಜರಿಯಾಗು ವುದಿಲ್ಲ ಎಂದು ಗೃಹ ಸಚಿವ ಆರಗ eನೇಂದ್ರ ಸುಳ್ಳು ಹೇಳಿಕೆ ನೀಡಿ ಮಲೆನಾಡಿನ ಜನರ ದಿಕ್ಕು ತಪ್ಪಿಸು ತ್ತಿzರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ನಗರ ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ ಆರೋಪಿ ಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಸಭೆಯಲ್ಲಿ ತಾವು ಮಂಡಿಸಿದ ವಾದದಿಂದಾಗಿ ಕಸ್ತೂರಿ ರಂಗನ್ ವರದಿ ತಡೆ ಹಿಡಿಯಲಾಗಿದೆ ಎಂದು ಇತ್ತೀಚೆಗೆ ತೀರ್ಥಹಳ್ಳಿ ಯಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ಜಿ ಸಮಾವೇಶದಲ್ಲಿ ಆರಗ eನೇಂದ್ರ ಅವರು eನ ಇಲ್ಲದವರಂತೆ ಹೇಳಿಕೆ ನೀಡಿzರೆ. ಚುನಾವಣಾ ಸಂದಭದಲ್ಲಿ ಮಾತ್ರ ಕಸ್ತೂರಿ ರಂಗನ್ ವರದಿ ಹಾಗೂ ಅಡಿಕೆ ಬಗ್ಗೆ ಇವರಿಗೆ ಎಚ್ಚರವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಜಿಯ ೪೭೫ ಹಳ್ಳಿಗಳಲ್ಲಿ ಕಸ್ತೂರಿ ರಂಗನ್ ವರದಿ ಜರಿ ಯಾಗಲಿದೆ. ಆದರೂ ಆರಗ ತಮ್ಮ ವಾದದಿಂದಾಗಿ ಈ ವರದಿ ತಡೆ ಹಿಡಿಯಲಾಗಿದೆ ಎಂದು ಹೇಳುತ್ತಿzರೆ. ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕ್ಷೇತ್ರದ ಜನರ ಅನುಕಂಪ ಪಡೆಯುವ ಸಲುವಾಗಿ ಹೇಳಿಕೆ ನೀಡಿzರೆ. ಹತ್ತು ಜಿಯ ೧೫೭೨ ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾಗಲಿದೆ. ಇದು ಅರಣ್ಯ ಭಾಗದಲ್ಲಿ ವಾಸ ಇರುವವರಿಗೆ ಕಂಟಕವಾಗಲಿದೆ ಎಂದರು.
ಕಸ್ತೂರಿ ರಂಗನ್ ವರದಿ ಜರಿ ಮಾಡುವುದಾಗಿ ನರೇಂದ್ರ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಹಾಕಿದೆ. ಇದು ಗೊತ್ತಿಲ್ಲದವರಂತೆ eನೇಂದ್ರ ಹೇಳಿಕೆ ನೀಡಿದ್ದು, ಈ ವರದಿ ಜರಿಗಾಗಿ ನಾಲ್ಕು ಬಾರಿ ಕರಡು ಅಧಿಸೂಚನೆಯನ್ನು ಹೊರಡಿ ಸಿದ್ದು ಕೇಂದ್ರ ಬಿಜೆಪಿ ಸರ್ಕಾರ. ಇದಕ್ಕೆ ಅಂದು ಸಂಸತ್ ಸದಸ್ಯರಾಗಿದ್ದ ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಪಾಲು ಕೂಡ ಇದೆ. ಇವರು ಪ್ರಬ ಲವಾಗಿ ಸಂಸತ್ತಿನಲ್ಲಿ ವಿರೋಧ ಮಾಡಿಲ್ಲ. ಅವರ ನಿರ್ಲ ಕ್ಷ್ಯದಿಂದಾಗಿ ಈ ವರದಿ ಜರಿಯಾಗುತ್ತಿದೆ ಎಂದರು.
ಡಬಲ್ ಇಂಜಿನ್ ಸರ್ಕಾರ ಮಲೆನಾಡಿನ ನಿವಾಸಿಗಳಿಗೆ ಮೋಸ ಮಾಡಲು ಹೊರಟಿದೆ. ಆರಗ eನೇಂದ್ರ ಗೃಹ ಸಚಿವರಾ ಗಿದ್ದರೂ ಕಾನೂನು eನ ಇಲ್ಲ ದವರಂತೆ ಮಾತನಾಡುತ್ತಿzರೆ. ವರದಿ ಅನುಷ್ಠಾನ ಅಂತಿಮ ಹಂತದಲ್ಲಿದೆ. ಈ ವರದಿ ಜರಿಯಾಗುವುದಿಲ್ಲ ಎಂಬುದನ್ನು ರಾಜ್ಯಕ್ಕೆ ಭೇಟಿ ನೀಡುವ ಮೋದಿಯವರಿಂದಲೇ ಹೇಳಿಕೆ ಕೊಡಿಸಲಿ. ಗೋವಾ ಫೌಂಡೇಷನ್ ಪ್ರಕರಣದಲ್ಲಿ ಇನ್ನು ಜರಿ ಮಾಡು ವುದಿಲ್ಲ ಎಂದು ರಾಷ್ಟ್ರಿ ಯ ಹಸಿರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ರಮೇಶ್ ಇಕ್ಕೇರಿ, ಧರ್ಮರಾಜ್, ಜಿ.ಡಿ. ಮಂಜು ನಾಥ, ದೀಪಕ್ ಸಿಂಗ್, ಖಲೀಂ ಪಾಷಾ ಇದ್ದರು.