ಯುವಪೀಳಿಗೆಯಲ್ಲಿ ನಾಯಕತ್ವ ಗುಣ ಅತ್ಯಂತ ಮುಖ್ಯ : ಡಿಸೋಜ

ಶಿವಮೊಗ್ಗ: ಜೀವನದಲ್ಲಿ ಯಶಸ್ಸು ಸಾಧಿಸಲು ಎಲ್ಲ ಪರಿಸ್ಥಿತಿ ಗಳನ್ನು ಸಮರ್ಥವಾಗಿ ನಿಭಾಯಿ ಸುವ ನಾಯಕತ್ವ ಗುಣ ಅತ್ಯಂತ ಅವಶ್ಯಕ. ಯುವಜನರು ನಾಯ ಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ತರಬೇತು ದಾರ ವಿಲಿಯಂ ಡಿಸೋಜ ಹೇಳಿದರು.
ಶಿವಮೊಗ್ಗ ನಗರದ ಸೂರ್ಯ ನರ್ಸಿಂಗ್ ಕಾಲೇಜಿನಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯಿಂದ ಆಯೋಜಿಸಿದ್ದ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧಕರ ಜೀವನದ ಬಗ್ಗೆ ಅರಿತು ಕೊಂಡು ನಾಯಕತ್ವ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಾಯಕತ್ವವು ಕೇವಲ ಸ್ಥಾನ ಅಥವಾ ಬಿರುದು ಹಿಡಿದಿಟ್ಟುಕೊ ಳ್ಳುವುದಲ್ಲ. ಇದು ಸಾಮಾನ್ಯ ಗುರಿ ಯತ್ತ ಇತರರನ್ನು ಪ್ರೇರೇಪಿಸುವ ಮತ್ತು ಪ್ರಭಾವಿಸುವ ಸಾಮರ್ಥ್ಯ ಆಗಿರುತ್ತದೆ. ಪರಿಣಾಮಕಾರಿ ನಾಯಕರಾಗಲು ಅಗತ್ಯವಾದ eನ, ಕೌಶಲ್ಯ ಮತ್ತು ಸಾಧನಗ ಳೊಂದಿಗೆ ತರಬೇತಿಯು ನಿಮ್ಮನ್ನು ಸಜ್ಜುಗೊಳಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಉಪಾಧ್ಯಕ್ಷ ಮಂಜು ನಾಥ್ ಕದಂ ಮಾತನಾಡಿ, ಜೆಸಿಐ ಅಂತಾರಾಷ್ಟ್ರೀಯ ಸಂಸ್ಥೆಯು ಯುವ ಪೀಳಿಗೆಗೆ ಅನುಕೂಲವಾ ಗುವ ಆರು ತಿಂಗಳ ತರಬೇತಿಯನ್ನು ಒಂದು ಕಾಲೇಜಿನ ವಿದ್ಯಾರ್ಥಿ ಗಳಿಗೆ ಪ್ರತಿ ತಿಂಗಳು ಒಂದು ವಿಷಯದಂತೆ ಹಮ್ಮಿಕೊಂಡಿದ್ದು, ಯುವಜನರಿಗೆ ತರಬೇತಿ ನೀಡು ವುದು ಕಾರ್ಯಕ್ರಮದ ಉದ್ದೇಶ ವಾಗಿದೆ ಎಂದು ಹೇಳಿದರು.


ನಾಯಕತ್ವ ಗುಣಗಳ ಬಗ್ಗೆ ವಿಲಿಯಂ ಡಿಸೋಜ ತರಬೇತಿ ನೀಡುತ್ತಿದ್ದು, ಅವರು ಅಂತ ರಾಷ್ಟ್ರೀಯ ತರಬೇತುದಾರರಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುತ್ತಾರೆ. ಇದರ ಸದುಪಯೋಗವನ್ನು ಎ ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮದೇ ಆದ ಕ್ಷೇತ್ರದಲ್ಲಿ ನಾಯ ಕತ್ವ ಗುಣಗಳೊಂದಿಗೆ ಬೆಳೆಯ ಬೇಕು. ಜೀವನದಲ್ಲಿ ಯಶಸ್ಸು ಖಂಡಿತ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿ ಥಿಯಾಗಿ ಭಾಗವಹಿಸಿದ್ದ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್ ಮಾತ ನಾಡಿ, ಜೆಸಿಐ ಸಂಸ್ಥೆಯು ನಾಯ ಕತ್ವ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ. ಇದೇ ತರಬೇತಿ ಯನ್ನು ಖಾಸಗಿಯಾಗಿ ಪಡೆಯು ವುದು ತುಂಬಾ ವೆಚ್ಚ. ಜೆಸಿಐ ಸಂಸ್ಥೆಯು ಉಚಿತವಾಗಿ ಆರು ತಿಂಗಳ ಕಾಲ ತಿಂಗಳಿಗೆ ಒಂದು ವಿಷಯದಂತೆ ಕಾರ್ಯಗಾರವನ್ನು ಮಾಡುತ್ತಿರುವುದು ತುಂಬಾ ವಿದ್ಯಾರ್ಥಿಗಳಿಗೆ ಅನುಕೂಲ ವಾಗಿರುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯೆ ಶ್ರೀಜ ಅವರು ಎ ವಿದ್ಯಾರ್ಥಿ ಗಳು ಕಾರ್‍ಯಕ್ರಮದ ಸದುಪ ಯೋಗ ಪಡಿಸಿಕೊಂಡು ಯಶಸ್ವಿಯಾಗಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜೆಸಿಐ ವಲಯ ೨೪ರ ವಲಯ ಉಪಾಧ್ಯಕ್ಷ ಸತೀಶ್ ಚಂದ್ರ ಉಪಸಿತರಿದ್ದರು