ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಂದುತ್ವದ ರಕ್ಷಣೆ ಆಧಾರದಲ್ಲಿ ಬಿಜೆಪಿ ಗೆಲುವು ಖಚಿತ:ಚೆನ್ನಿ
ಶಿವಮೊಗ್ಗ :ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಂದು ತ್ವದ ರಕ್ಷಣೆ ಆಧಾರದ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ಖಚಿತ. ಪಕ್ಷದ ಸಿzಂತಗಳನ್ನು ಧ್ಯೇಯಗ ಳನ್ನು ಒಪ್ಪಿಕೊಂಡಿರುವ ಜನತೆ ರಾಜ್ಯದಲ್ಲಿಯೂ ಸಹ ಈ ಭಾರಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲಿ zರೆ ಎಂದು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚೆನ್ನಬಸಪ್ಪ (ಚೆನ್ನಿ) ಹೇಳಿದರು.
ಅವರು ಇಂದು ಬೆಳಗ್ಗೆ ಪತ್ರಿಕಾ ಸಂವಾದದಲ್ಲಿ ಮಾತನಾಡುತ್ತಾ, ಹಿಂದುತ್ವ ಎಂದಾಕ್ಷಣ ಬೇರೆ ಧರ್ಮವನ್ನು ಧ್ವೇಷಿಸುವುದಲ್ಲ. ಅಭಿವೃದ್ಧಿ ಶರೀರ ವಿದ್ದಂತೆ, ಹಿಂದುತ್ವ ಹೃದಯವಿದ್ದಂತೆ. ಕೆಲವರು ಸುಳ್ಳು ಹೇಳುತ್ತಾ, ಸುಖಾಸುಮ್ಮನೆ ಗಲಭೆ, ಗದ್ದಲ, ಗೊಂದಲದ ವಾತಾವರಣನ್ನು ಸೃಷ್ಠಿಸುತ್ತಿzರೆ. ಮತದಾರರು ಸುಳ್ಳು ಹೇಳುವವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದರು.
ಶಿವಮೊಗ್ಗ ಕೋಮುಗ ಲಭೆಯ ನಾಡಲ್ಲ. ಸಾಂಸ್ಕೃತಿಕ ನೆಲೆ ಮಲೆನಾಡಿನ ಹೆಬ್ಬಾಗಿಲು ಮಲೆ ನಾಡಿನ ಜನ ಶಾಂತಿ ಪ್ರಿಯರು. ಆದರೆ ಸುಳ್ಳು ಹೇಳುವ ಮೂಲಕ ಕೋಮುಗಲಭೆ ಎಂದು ಬಿತ್ತರಿಸಿ ಚುನಾವಣಾ ಗಿಮಿಕ್ ಮಾಡಲು ಮುಂದಾಗಿzರೆ. ಹಿಂದೆ ಇಂತಹ ಗಲಾಟೆ ಆದಾಗ ಮುಸ್ಲಿಂ ಸಮು ದಾಯದ ಪ್ರಮುಖರಿಗೆ ನಾವೇ ಹೋಗಿ ಬುದ್ದಿ ಹೇಳಿ ಎಂದಿದ್ದೇವು. ಆದರೆ ಅದನ್ನು ಮಾಡಲಿಲ್ಲ. ಅದು ಕೊಮುಗಲಭೆಯಾಗುತ್ತದೆಯೇ. ನೀವು ಏಕೆ ಅಲ್ಲಿಯ ಘಟನೆಯನ್ನು ಖಂಡಿಸಲಿಲ್ಲ ಎಂದು ಮುಸ್ಲಿಂ ಸ್ನೇಹಿತ ಅನ್ವರ್ ಮಗಳು ಸಂಸ್ಕೃತ ದಲ್ಲಿ ರ್‍ಯಾಂಕ್ ಪಡೆದ ವಿಚಾರವನ್ನು ಹೇಳುತ್ತಾ, ಜತಿ, ಧರ್ಮ ಹೇಳ ದೇ ನಮ್ಮ ಪಕ್ಷದ ಪ್ರಮುಖರನ್ನು ಹಿಡಿದು ಮತ್ತೂರಿನ ಕಾಲೇಜಿನಲ್ಲಿ ಸೀಟು ಕೊಡಿಸಿದ್ದೇ ಎಂದರು.
ಜನಸಂಘ ಹಾಗೂ ನಂತರದ ಬಿಜೆಪಿ ಉದ್ಧೇಶ ಅತ್ಯಂತ ಸ್ಪಷ್ಟ ವಾಗಿದೆ. ಬೇರೆ ಪಕ್ಷಗಳಿಗೆ ವಿಭಿನ್ನ ವಾಗಿ ಗುರುತಿಸಿಕೊಳ್ಳುವ ಬಿಜೆಪಿ ಒಂದು ಕಾರ್ಯಕರ್ತರ ಸಂಘಟನೆ ಯಾಗಿದೆ. ಈ ಹಿನ್ನೆಲೆಯಲ್ಲಿ ನನ್ನನ್ನು ಗುರುತಿಸಿ ಟಿಕೇಟ್ ನೀಡಿ zರೆ. ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿಗೆ ವಿಶೇಷವಾಗಿ ಮೇಲ್ಪಂಕ್ತಿ ಯನ್ನು ಹಾಕಿಕೊಟ್ಟಿzರೆ. ರಾಷ್ಟ್ರೀ ಯ ಸ್ವಯಂ ಸೇವಾ ಸಂಘದಿಂದ ಬೆಳೆದ ನನ್ನನ್ನು ಹಿರಿಯರು ಪಕ್ಷದ ಕಾರ್ಯಕರ್ತರು ಗುರುತಿಸಿ ಈ ಅವಕಾಶ ನೀಡಿzರೆ ಎಂದು ಹೇಳಿ ದರು.
ಈಗ ಕೋಮುಗಲಭೆಯಾ ಯಿತು ಎಂದರೆ ಹಿಂದೆ ಶುಗರ್ ಫ್ಯಾಕ್ಟರಿ ನಿಂತಿದ್ದೇಕೆ. ಶಾಯಿ ಗಾರ್ಮೇಂಟ್ ಬರಲಿಲ್ಲವೇ. ಸುಳ್ಳು ಹೇಳುವುದನ್ನೇ ಮಾಡು ವುದು ಬೇಡ ಈಗಷ್ಟೇ ವಿಮಾನ ನಿಲ್ಧಾಣವಾಗಿದೆ. ವಿಮಾನ ಹಾರಲಿ, ಬೈಪಾಸ್ ರಸ್ತೆ ಸಿದ್ದವಾ ಗಲೀ ಸಾಕಷ್ಟು ಕೈಗಾರಿಕೆಗಳು ಬರುತ್ತವೆ ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಿ ನಗ ರದ ಅಭಿವೃದ್ಧಿ ಮುಂದಿಟ್ಟು ಕೊಂ ಡು ಸೇವೆ ಸಲ್ಲಿಸಿರುವ ಅನುಭವ ವಿದೆ. ಜನಸ್ನೇಹಿ ಆಡಳಿತವಿರುವ ಜೊತೆಗೆ ನಗರದ ನೀರು ದ್ಯೋಗಿ ಗಳಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಾ ಗುವುದು ಎಂದರು.
ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಜಿ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್ಯ ದರ್ಶಿಗಳಾದ ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ ಇದ್ದರು.