ಶ್ರೀ ಆಂಜನೇಯ ಸ್ವಾಮಿ ದೇವಳದಲ್ಲಿ ಶ್ರೀ ಲಕ್ಷ್ಮೀನಸಿಂಹ ಜಯಂತಿ…

ಶಿವಮೊಗ್ಗ: ನಗರದ ಸೋಮಿನಕೊಪ್ಪದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಹಾಗೂ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಲಕ್ಷ್ಮೀ ನಸಿಂಹ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಭಯ ದೇವಳಗಳ ಪ್ರಧಾನ ಅರ್ಚಕ ವೇ.ಬ್ರ.ಶ್ರೀ ರವೀಂದ್ರ ಭಟ್ ತಿಳಿಸಿzರೆ.
ಈ ಕುರಿತು ಮಾಹಿತಿ ನೀಡಿದ ಅವರು, ಮೇ ೪ ರಿಂದ ಎರಡು ದಿನಗಳ ಕಾಲ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಮೇ ೪ ರ ಗುರುವಾರ ಸಂಜೆ ೪ ಗಂಟೆ ಯಿಂದ ಶ್ರೀ ಲಕ್ಷ್ಮೀ ನಸಿಂಹ ಸ್ವಾಮಿಗೆ ಶತವಾರ ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.
ಮೇ ೫ ರ ಶುಕ್ರವಾರ, ಬೆಳಿಗ್ಗೆ ೭ ಗಂಟೆಯಿಂದ ಪವಮಾನ ಅಭಿಷೇಕ, ಶ್ರೀ ಲಕ್ಷ್ಮೀ ನಸಿಂಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ ಅವರು, ಸಂಜೆ ೬.೩೦ ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ ಎಂದು ಅವರು ಹೇಳಿದರು.
ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಭಯ ದೇವಳಗಳಲ್ಲಿ ನಡೆಯುವ ಶ್ರೀ ಲಕ್ಷ್ಮೀ ನಸಿಂಹ ಜಯಂತಿ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿ ಕಪೆಗೆ ಪಾತ್ರರಾಗ ಬೇಕಾಗಿ ರವೀಂದ್ರ ಭಟ್ ಕೋರಿzರೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : ೯೪೪೮೧ ೨೬೮೦೩ ಗೆ ಸಂಪರ್ಕಿಸಬಹುದು.