ಜನರ ಪ್ರೀತಿಗೆ ಹೃದಯ ಮಿಡಿದಿದೆ;ಸೇವೆ ಮಾಡುವ ತುಡಿತ ಮತ್ತಷ್ಟು ಇಮ್ಮಡಿಯಾಗಿದೆ : ನೇತ್ರಾವತಿ …
ಶಿವಮೊಗ್ಗ: ಜನರ ಪ್ರೀತಿಗೆ ಹೃದಯ ಮಿಡಿದಿದೆ. ಸೇವೆ ಮಾಡುವ ತುಡಿತ ಮತ್ತಷ್ಟು ಇಮ್ಮಡಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ನೇತ್ರಾವತಿ ಗೌಡ ಹೇಳಿದರು.
ಅವರು ಇಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪಕ್ಷಕ್ಕಾಗಿ ಕೆಲಸ ಮಾಡುತ್ತಿz. ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ನನ್ನ ಸೇವೆಯನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ಅದನ್ನು ಸಮ ರ್ಥವಾಗಿ ಬಳಸಿಕೊಳ್ಳುವೆ. ಜನರ ಸೇವೆಯೇ ನನ್ನ ಮುಖ್ಯ ಗುರಿ ಎಂದರು.
ಸಾಮಾಜಿಕ ಕೆಲಸ ಮಾಡುತ್ತಾ ಬಂದಿರುವ ನಾನು ನಗರದ ಎ ವಾರ್ಡುಗಳಲ್ಲಿ ಓಡಾಡಿದ್ದೇನೆ ರಾಶಿ ರಾಶಿ ಸಮಸ್ಯೆಗಳನ್ನು ಕಂಡಿ ದ್ದೇನೆ. ಮೂಲಭೂತ ಸೌಲಭ್ಯಗಳೇ ಇಲ್ಲವಾಗಿದೆ. ಆರೋಗ್ಯಕ್ಕೆ ಸಂಬಂ ಧಿಸಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಶಿಕ್ಷಣಕ್ಕೆ ಆದ್ಯತೆ ಇಲ್ಲ. ಇಂಜಿನಿ ಯರ್ ಪದವಿ ಪಡೆದವರು ಕೂಡ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿ zರೆ. ಬಡವರ ಬದುಕು ಮತ್ತಷ್ಟು ದುಸ್ತರವಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನರ ಆಕ್ರೋಶ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಜನರು ಬದ ಲಾವಣೆ ಬಯಸಿzರೆ. ನಮಗೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಜನರ ಪ್ರೀತಿ ಕಂಡು ಮೂಕ ವಿಸ್ಮಿತಳಾಗಿದ್ದೇನೆ. ಬೊಮ್ಮ ನಕಟ್ಟೆಯಂತಹ ಊರಿನಲ್ಲಿ ಕೂಲಿ ಮಾಡುವ ಮಹಿಳೆಯರು ನನ್ನನ್ನು ಕರೆಸಿ ಆಶೀರ್ವದಿಸಿ ಒಂದಿಷ್ಟು ಪ್ರಚಾರಕ್ಕೆ ಇಟ್ಟುಕೊಳ್ಳಿ ಎಂದು ಹಣ ಕೊಟ್ಟಿದ್ದನ್ನು ನಾನು ಮರೆಯಲಾರೆ. ರಾಜಕಾರಣ ಇಂತಹ ಪ್ರೀತಿಯನ್ನು ಕೊಡುತ್ತದೆ ಎಂಬುದೇ ನನಗೆ ಅತ್ಯಂತ ಭರವಸೆ ಮೂಡಿಸಿದೆ ಎಂದರು.
ಉದ್ಯೋಗ ಅವಕಾಶಗಳು ಹೆಚ್ಚಬೇಕು. ಭ್ರಷ್ಟಾಚಾರ ಕೊನೆ ಯಾಗಬೇಕು. ಮಹಿಳೆಯರು ಸ್ವಾವಲಂಬಿಯಾಗಬೇಕು. ಉಚಿತ ಆರೋಗ್ಯ ಎಲ್ಲರಿಗೂ ಸಿಗಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಬೇಕು ಎಂಬುದು ನಮ್ಮ ಪಕ್ಷದ ಮಂತ್ರ ವಾಗಿದೆ. ಜೊತೆಗೆ ಪ್ರವಾಸೋ ದ್ಯಮ, ಕ್ರೀಡೆ, ಮೂಲಭೂತ ಸೌಕರ್ಯಕಗಳು ಹೀಗೆ ಎ ಕ್ಷೇತ್ರಗಳಲ್ಲು ಅಭಿವೃದ್ಧಿಯಾಗ ಬೇಕೆಂಬುದೇ ನಮ್ಮ ಕನಸು ಎಂದರು.
ಪ್ರಚಾರಕ್ಕೆ ಹೋದಾಗ ಸ್ಥಳೀ ಯರು ತಮ್ಮ ಸಂಕಟಗಳನ್ನು ಹೇಳಿ ಕೊಂಡಿzರೆ. ನಮ್ಮ ವಾರ್ಡಿಗೆ ರಾಜಕಾರಣಿಗಳೇ ಬರಬೇಡಿ ಎಂದು ಮುಖಕ್ಕೆ ಹೊಡೆದಂತೆ ಮಾತನಾಡಿzರೆ. ಆನರ ಆಕ್ರೋಶ ನನಗೆ ಗೊತ್ತಾಗಿದೆ. ಹಾಗಾಗಿ ಹಣ, ಹೆಂಡ ಹಂಚದೆ ಸೇವೆಯನ್ನು ನೀಡುತ್ತೇವೆ ಎಂಬ ಕಾರಣ ಮುಂದಿಟ್ಟುಕೊಂಡೇ ಮತದಾರರ ಬಳಿ ಹೋಗುತ್ತಿದ್ದೇವೆ ಎಂದರು.
ಶಿವಮೊಗ್ಗದ ಎ ವಾರ್ಡು ಗಳಲ್ಲಿಯೂ ಸಮಿತಿ ರಚಿಸಿದ್ದೇವೆ. ಚುನಾವಣೆ ಹೇಗೆ ನಡೆಸಬೇಕೆಂಬು ದನ್ನು ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಿದ್ದರಿಂದ ಅನುಭವವಾ ಗಿದೆ. ಪಕ್ಷದ ಕಾರ್ಯಕರ್ತರು ನನ್ನೊಂದಿಗಿzರೆ. ನನ್ನ ಪ್ರಚಾರಕ್ಕೆ ಕೇಂದ್ರ, ರಾಜ್ಯ, ಜಿಯ ಮುಖಂಡರು ಆಗಮಿಸಲಿzರೆ. ಅರವಿಂದ್ ಕೇಜ್ರಿವಾಲ್ ಅವರಿಗೂ ಪ್ರಚಾರಕ್ಕೆ ಬರಲು ಮನವಿ ಮಾಡಿದ್ದೇನೆ ಎಂದರು.