ಮತದಾನ ಪ್ರಜೆಗಳ ಜವಾಬ್ದಾರಿಯುತ ಹೊಣೆಗಾರಿಕೆ..

ಹೌದು ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಮತದಾನ ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಚುನಾವಣೆ ಎಂಬ ಔಪಚಾರಿಕ ವ್ಯವಸ್ಥೆಯಲ್ಲಿ ಮತದಾರ ಭಾಂದವರೇ ಪ್ರಭುಗಳು. ನಾಡಿನ, ರಾಜ್ಯದ, ರಾಷ್ಟ್ರದ ಭವಿಷ್ಯ ನಿರ್ಮಾಣದಲ್ಲಿ ಮತದಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ರಾಷ್ಟ್ರದ ಬೆಳವಣಿಗೆಯೂ ಮತದಾರರಾದ ಪ್ರಜೆಗಳ ಕೈಯಲ್ಲಿರುತ್ತದೆ. ಚುನಾವಣೆ ಪ್ರಜಪ್ರಭುತ್ವದ ಮುಖ್ಯ ಅಂಗವಾಗಿದೆ. ಅಬ್ರಹಾಂ ಲಿಂಕನ್ ವ್ಯಕ್ತಪಡಿಸಿರುವಂತೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿಸಲಾದ ಸರಕಾರವೇ ಪ್ರಜಪ್ರಭುತ್ವ ಸರಕಾರ. ಜನರು ತೀರ್ಮಾನಿಸಿ ಕೊಡುವ ಅಧಿಕಾರ. ಪ್ರಜೆಗಳಿಂದ ಆರಿಸಿ ಬಂದ ಜನಪ್ರತಿನಿಧಿಗಳು ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಂವಿಧಾನ ತಿಳಿಸಿದೆ. ಹಾಗೂ ನಮ್ಮ ವ್ಯವಸ್ಥೆಯಲ್ಲಿ ಚುನಾವಣೆಯೆಂಬುದೊಂದು ಔಪಚಾರಿಕ ವ್ಯವಸ್ಥೆ. ಪ್ರಜತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾಗಿದೆ . ಚುನಾಯಿಸು ಅಂದರೆ ನಿರ್ಧರಿಸುವುದು, ಆಯ್ಕೆಮಾಡುವುದು ಎಂದರ್ಥ.
೧೯೫೨ರ ಏಪ್ರಿಲ್‌ನಲ್ಲಿ ನಡೆದ ಮೊದಲ ಚುನಾವಣೆಯ ನಂತರ ಭಾರತದ ಚುನಾವಣೆಗಳು ಒಂದು ಗಮನಾರ್ಹ ಸಾಂಸ್ಕೃತಿಕ ಅಂಶವೆನಿಸಿಕೊಂಡಿವೆ.
೧೯೮೨ರಿಂದ ೧೮ ವರ್ಷದ ಪ್ರತಿಯೊಬ್ಬ ಪ್ರಜೆಗಳಿಗೊ ಮತದಾನ ಮಾಡುವ ಹಕ್ಕನ್ನು ಚುನಾವಣೆ ನೀಡಿದೆ. ಜತಿ, ಧರ್ಮ, ಬಡವ ಬಲ್ಲಿದ, ಲಿಂಗ ಭೇದಗಳ ತಾರತಮ್ಯಗಳಿಲ್ಲದ ಮತದಾನವು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿರುತ್ತದೆ. ಇಲ್ಲಿ ಈ ಪ್ರಜೆಗಳೇ ಪ್ರಭುಗಳು ಪ್ರಜೆಗಳು ಪ್ರಜೆಗಳಿಗಾಗಿ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ನಡೆಸುವ ಪ್ರಜಸತ್ತಾತ್ಮಕವಾದ ದೇಶ ನಮ್ಮದು. ಪ್ರಜೆಗಳಿಂದ ಆರಿಸಿ ಬಂದ ಪ್ರತಿನಿಧಿಗಳು ಜನಸಾಮಾನ್ಯರ ಬೆಳವಣಿಗೆಗೆ ಪೂರಕವಾದ ಸರಕಾರ ನಡೆಸಬೇಕೆಂಬುವುದೇ ಪ್ರಜತಂತ್ರದ ಆಶಯ. ಜನರಿಗೆ ಬೇಕಾದ ಆಹಾರ, ವಸತಿ, ಉದ್ಯೋಗ, ಶಿಕ್ಷಣ ನೀರಿನ ಸೌಲಭ್ಯ, ಬೆಳಕು, ಆರೋಗ್ಯದ ವ್ಯವಸ್ಥೆಗಳು ಇತ್ಯಾದಿಗಳ ಹಂಚಿಕೆಯೂ ಸಮರ್ಪಕವಾಗಿ ಸರಕಾರದಿಂದಲೇ ನಡೆಯಬೇಕಾಗಿದೆ.
ಮತದಾನ ಏಕೆ ಮುಖ್ಯ?
ನಮ್ಮದು ಪ್ರಜಪ್ರಭುತ್ವ ರಾಷ್ಟ್ರ . ಅದರಲ್ಲೂ ವಿಶ್ವದ ಅತ್ಯಂತ ದೊಡ್ಡ ಪ್ರಜಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರ ಭಾರತ. ಇಂತಹ ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ತರವಾಗಿದೆ.
ಈ ವ್ಯವಸ್ಥೆಯಲ್ಲಿ ಮತದಾರರು ಪಡೆದಿರುವ ಪವಿತ್ರ ಹಕ್ಕಾದ ಮತದಾನದ ಹಕ್ಕು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ನಮ್ಮ ಭಾರತೀಯ ಸಂವಿಧಾನವು ಜನತೆಗೆ ನೀಡಿರುವ ಒಂದು ಬಲವಾದ ಅಸ್ತ್ರವಾಗಿದೆ. ಆ ಹಿನ್ನೆಲೆಯಲ್ಲಿಯೇ ಪ್ರಸಿದ್ಧ ರಾಜಕೀಯ ಚಿಂತಕ ರೂಸೋ ಜನತಾ ವಾಣಿಯೇ ದೈವವಾಣಿ ಎಂದು ಹೇಳಿದ್ದು, ಅಬ್ರಹಾಂ ಲಿಂಕನ್‌ರವರು ಮತಪತ್ರವು ಬಂದೂಕಿನ ಬುಲೆಟ್ಟಿಗಿಂತ ಹೆಚ್ಚು ಶಕ್ತಿಶಾಲಿಯಾದುದು ಎಂದು ಹೇಳಿರುವುದು.
ಪ್ರಜೆಗಳಿಗೆ ಸರ್ಕಾರವನ್ನು ಸ್ಥಾಪಿಸುವ ಹಾಗೂ ಅಧಿಕಾರದಿಂದ ಕೆಳಗಿಳಿಸುವ ಶಕ್ತಿ ಮತದಾರರಿಗಿದೆ. ಹಾಗಾಗಿ ಮತದಾರ ಮತದಾನದ ಪ್ರಾಮುಖ್ಯತೆಯನ್ನು ಅರಿಯಬೇಕು ಹಾಗೂ ಪ್ರಾಮಾಣಿಕ ಮತದಾನದಿಂದ ಮಾತ್ರ ದೇಶದಲ್ಲಿ ಉತ್ತಮ ಬದಲಾವಣೆ ಸಾಧ್ಯ.
ಮತದಾನದಲ್ಲಿ ಯುವಕರ ಪಾತ್ರ:
೧೮ ವರ್ಷ ಪೂರೈಸಿ ಮತದಾನದ ಹಕ್ಕನ್ನು ಪಡೆದಿರುವ ಜನಸಮುದಾಯವನ್ನು ಮತದಾರ ವರ್ಗ ಎಂದು ಪರಿಗಣಿಸುತ್ತೇವೆ ದೇಶದ ಭವಿಷ್ಯ ಅಡಗಿರುವುದು ಈ ಮತದಾರರಲ್ಲಿ. ಅದರಲ್ಲೂ ಯುವಶಕ್ತಿಯಲ್ಲಿ ಅಡಗಿದೆ. ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಯುವಕರ ಪಾತ್ರ ಮಹತ್ವವಾಗಿದೆ. ದೇಶದ ಅಭಿವೃದ್ಧಿಗಾಗಿ ಯುವಕರು ಹಲವು ಹತ್ತು ಸವಾಲುಗಳನ್ನು ಎದುರಿಸಬೇಕಿದೆ. ಇದರಲ್ಲಿ ಮತದಾನವೂ ಒಂದಾಗಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲಲು ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕು .
ಹಾಗಾಗಿ ದೇಶ ಕಟ್ಟುವ ಮತ್ತು ಮುಂದಿನ ಪೀಳಿಗೆಗೆ ಕನಸುಗಳನ್ನು ಸಕಾರಗೊಳಿಸುವ ದೂರದೃಷ್ಟಿಯ ಹಿನ್ನೆಲೆಯಿಂದ ಯುವ ಮತದಾರರನ್ನು ರಾಜಕೀಯ ಪ್ರಕ್ರಿಯೆಗೆ ಸೆಳೆಯಲು ೧೯೮೮೨ಲ್ಲಿ ಚುನಾವಣಾ ಆಯೋಗ ಸಂವಿಧಾನದ ೩೨೬ನೇ ವಿಧಿಗೆ ೬೧ನೇ ತಿದ್ದುಪಡಿ ತರುವುದರ ಮೂಲಕ ಮೊದಲಿದ್ದ ಮತದಾನದ ವಯಸ್ಸಾದ ೨೧ ವರ್ಷದಿಂದ ೧೮ ವರ್ಷಕ್ಕೆ ಇಳಿಸಲಾಯಿತು. ಆದರೆ ದುರದೃಷ್ಟವಶಾತ್ ಮತದಾನ ಪ್ರಕ್ರಿಯೆಯಲ್ಲಿ ಈ ಯುವ ಮತದಾರರ ಸಹಭಾಗಿತ್ವವು ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚಾಗಿ ಮತದಾನವನ್ನು ನಿರ್ಲಕ್ಷಿಸುತ್ತಿರುವುದು ಪ್ರಜಪ್ರಭುತ್ವವು ತನ್ನ ನೈಜ ಚೈತನ್ಯವನ್ನು ತೋರಿಸದಂತೆ ತಡೆಯುತ್ತಿದೆ.
ಇದು ನಮ್ಮ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ (೧೯೫೧-೫೨) ಹಿಡಿದು ಈಗಾಗಲೇ ಮುಗಿದಿರುವ ೧೭ನೇ ಸಾರ್ವತ್ರಿಕ ಚುನಾವಣೆಯವರೆಗೂ ಸಾಬೀತಾಗಿದೆ ಯುವ ಮತದಾರರು ಜವಾಬ್ದಾರಿಯುತವಾಗಿ, ವಿವೇಚನೆಯಿಂದ, ಜಗೃತಿಯಿಂದ ಪ್ರಾಮಾಣಿಕವಾಗಿ ಮತಚಲಾಯಿಸಿದರೆ, ಆಗ ಉತ್ತಮ ಸರ್ಕಾರದ ರಚನೆಯೊಂದಿಗೆ ಪ್ರಜಪ್ರಭುತ್ವದ ಬಲವರ್ಧನೆ ಹಾಗೂ ರಾಷ್ಟ್ರದ ಪ್ರಗತಿ ಸಾಧ್ಯ.
ನಿಮ್ಮ ಮತ ಎಣಿಕೆ :
ಪ್ರತಿ ಮತವೂ ಗಣನೆಗೆ ಬರುತ್ತದೆ. ಮತ ಚಲಾಯಿಸಲು ಜನಸಾಗರವೇ ಹರಿದು ಬಂದಂತೆ ತೋರುತ್ತಿದ್ದರೂ ಪ್ರತಿ ಮತವೂ ಮಹತ್ವzಗಿರುತ್ತದೆ . ನಮ್ಮ ಮತವು ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ಯೋಚಿಸುವುದರಿಂದ ರಾಷ್ಟ್ರೀಯ ಮನೋಭಾವವು ಬದಲಾದಾಗ, ಸಂಖ್ಯೆಗಳು ಹೆಚ್ಚಾಗುತ್ತವೆ ಮತ್ತು ಬಹುಸಂಖ್ಯೆಯ ಜನರು ಮತ ಚಲಾಯಿಸುತ್ತಾರೆ. ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯ ಮೇಲಿರುತ್ತದೆ
ನೋಟಾ ಎಂದರೇನು:
ಭಾರತೀಯ ಸರ್ಕಾರವು ಮತದಾರರು ಯಾವುದೇ ಅಭ್ಯರ್ಥಿಗಳಿಂದ ಅತೃಪ್ತರಾಗಿದ್ದರೂ ಸಹ ಮತ ಚಲಾಯಿಸಲು ಸಾಧ್ಯವಾಗಿಸಿದೆ. ನೋಟಾ ಎಂದರೆ ಮೇಲಿನ ಯಾವುದೂ ಅಲ್ಲ, ಮತ್ತು ಯಾವುದೇ ಅಭ್ಯರ್ಥಿಗಳೊಂದಿಗೆ ತೃಪ್ತರಾಗದ ವ್ಯಕ್ತಿಗಳಿಗೆ ಇದು ನಿರ್ಣಾಯಕ ಮತವಾಗಿದೆ.
ನೋಟಾ ಮತದಾನ ಎಂದರೆ ಯಾವುದೇ ಅಭ್ಯರ್ಥಿಗಳು ಸೂಕ್ತರಲ್ಲ. ನೋಟಾ ಮತಗಳನ್ನು ಎಣಿಸಲಾಗುತ್ತದೆ, ಆದರೆ ಬಹುಪಾಲು ಮತಗಳು ನೋಟಾ ಆಗಿದ್ದರೆ, ಮುಂದಿನ ಬಹುಮತದ ಪಕ್ಷವನ್ನು ಆಯ್ಕೆ ಮಾಡಲಾಗುತ್ತದೆ.
ಮತದಾನದಲ್ಲಿ ನಿರ್ಲಕ್ಷ್ಯ ಬೇಡ :
ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಮತದಾನದಂದು ಪ್ರವಾಸ ಹೊರಡುವುದು, ವೈಯಕ್ತಿಕ ಮೋಜಿನಲ್ಲಿ ತಲ್ಲಿನರಾಗುವುದು, ಕ್ಷುಲ್ಲಕ ಕಾರಣಕ್ಕಾಗಿ ಮತದಾನವನ್ನು ವಿರೋಧಿಸುವುದು, ಮತದಾನವನ್ನು ಒಂದು ಜವಾಬ್ದಾರಿಯುತ ಹೊಣೆಗಾರಿಕೆ ಎಂಬುವುದಾಗಿ ಪರಿಗಣಿಸದಿರುವುದು ಪ್ರeವಂತ ಸಮಾಜದ ಲಕ್ಷಣವಲ್ಲ. ನಮ್ಮ ನಿರ್ಲಕ್ಷ್ಯದಿಂದಲೋ ನಾವು ಚಲಾಯಿಸಿದ ಮತದಿಂದಲೋ, ಅಪ್ರಯೋಜಕ , ಭ್ರಷ್ಟ, ಸಮಾಜ ವಿರೋಧಿ, ಅeನಿ ಪ್ರತಿನಿಧಿಯೊಬ್ಬ ಆರಿಸಿ ಬಂದರೆ ಆದರ ಹೊಣೆಗಾರರು ನಾವಾಗಿರುತ್ತೇವೆ. ನಮ್ಮ ಮತ ನಮ್ಮ ಹಕ್ಕು. ನಾಡಿನ ಭವಿಷ್ಯಕ್ಕಾಗಿ, ನಾಳೆಯ ಸಾಮರಸ್ಯಕ್ಕಾಗಿ ಎಲ್ಲರೂ ಜವಾಬ್ದಾರಿಯುತರಾಗಿ ಮತ ಚಲಾಯಿಸಬೇಕು. ನನ್ನ ಮತ ನನ್ನ ಜವಾಬ್ದಾರಿ ಎಂಬ ಪರಿeನ ನಮಗಿರಬೇಕು.


ಲಿಂಗರಾಜು.ಡಿ, ಶಿವಮೊಗ್ಗ