ಶಿಕಾರಿಪುರ ದೇವನಾಡು; ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿಗಿದೆ: ಸಿಎಂ

ಶಿಕಾರಿಪುರ: ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ ೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾ ಗುವುದು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಉಡುತಡಿ ಯಲ್ಲಿ ಶಿವಶರಣೆ ಅಕ್ಕಮಹಾದೇವಿ ಯ ೫೧ ಅಡಿ ಎತ್ತರದ ಪುತ್ಥಳಿ ಅನಾವರಣ, ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳದ ಉದ್ಘಾಟನೆ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯವನ್ನು ನೇರವೇರಿಸಿ ಮಾತನಾಡಿದರು.
ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಟ್ಟಡಕ್ಕೆ ೧೦ ಕೋಟಿ ರೂ.ಗಳ ಅನುದಾನವನ್ನು ಬಿಡು ಗಡೆ ಮಾಡುವುದಾಗಿ ಭರವಸೆ ನೀಡಿದರಲ್ಲದೇ ಶಿವನಪಾದವನ್ನು ೧೦.ಕೋಟಿ ರೂ.ಗಳ ವೆಚ್ಚದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಮಾದರಿ ತಾಲ್ಲೂಕು ಆಗ ಬೇಕು ಇಂದು ಜನರಿಗೆ ಅಗತ್ಯವಿ ರುವ ಕೆಲಸಗಳು ಆಗಿವೆ. ಶಿಕಾರಿ ಪುರ ದೇವರ ನಾಡು. ಇದನ್ನು ಕೃಷಿ, ಶಿಕ್ಷಣ ಮತ್ತು ಆಧ್ಯಾತ್ಮಿಕ ವಲಯದಲ್ಲಿ ಮಾದರಿ ತಾಲ್ಲೂಕು ಆಗಿಸಬೇಕು ಎಂಬ ಚಿಂತನೆಯಿಂದ ಈ ಎ ಕೆಲಸಗಳನ್ನು ಮಾಡಲಾ ಗುವುದು. ನನಗೆ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿದ್ದು, ಯಡಿಯೂರಪ್ಪ ಅವರು, ತಂದೆ-ಮಕ್ಕಳ ಸಂಭಂದ ನಮ್ಮದು. ಪ್ರೀತಿ, ವಿಶ್ವಾಸ, ರಾಜಕೀಯ ಮೀರಿದ ಸಂಬಂಧಗಳು ಇದು. ಬಿ.ಎಸ್. ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕಾರ್ಯ ಚಿರಸ್ಮರಣೀಯ ಎಂದರು.

ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿಗಿದೆ. ಇಲ್ಲಿಂದ ಹೊರಟ ಶರಣರು, ಕರ್ನಾಟಕದಲ್ಲಿ ಶರಣ ಸಂಸ್ಕೃತಿ, ವಿಚಾರಗಳನ್ನು ಕಾಯಕ ಸಮುದಾ ಯಗಳ ಜಗೃತಿ ಮೂಡಿಸಿ ವಿಚಾರ ಗಳಿಗೆ ತತ್ವಾದರ್ಶ ನೀಡಿರುವ ಕೇಂದ್ರ ಬಸವ ಕಲ್ಯಾಣದ ಅನುಭವ ಮಂಟಪ. ಶಿಕಾರಿಪುರ ದಿಂದ ಬಸವ ಕಲ್ಯಾಣದವರೆಗೆ ನಡೆದು ಬಂದ ದಾರಿ ಇದು. ೧೨ನೇ ಶತಮಾನದಲ್ಲಿ ಬದುಕಿನ ದಾರಿ ತೋರಿದವರು ಶಿವಶರಣರು. ೨೧ನೇ ಶತಮಾನದಲ್ಲಿ ೯ ಶತಮಾನ ಗಳ ನಂತರ ಶಿಕಾರಿಪುರವನ್ನು ಬಸವಕಲ್ಯಾಣಕ್ಕೆ ಜೋಡಿಸಿರುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿzರೆ ಎಂದರ ಲ್ಲದೇ, ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಅವರು ಎಂದೂ ಮುಖ್ಯ ಮಂತ್ರಿಯಾಗ ಬೇಕೆಂದು ಕನಸನ್ನು ಕಂಡವರಲ್ಲ. ಶಿಕಾರಿಪುರದಲ್ಲಿ ನಿರಂತರವಾಗಿ ದಣಿವರಿಯದೆ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದವರು. ಅದಮ್ಯ ಆತ್ಮವಿಶ್ವಾಸ ಮತ್ತು ಧೈರ್ಯ ಅವರ ಮೂಲ ಮಂತ್ರ ಜಗತ್ತನ್ನೇ ಎದುರು ಹಾಕಿಕೊಳ್ಳಬಲ್ಲ ಕನ್ನಡದ ನಾಯಕ ಅವರು. ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದು, ಉಡುತಡಿಯಿಂದ ಅಕ್ಕಮಹಾದೇವಿ ಶ್ರೀ ಶೈಲದ ಮಲ್ಲಿಕಾರ್ಜುನ ನವರೆಗೆ ಸಾರಿದ್ದ ಸಂದೇಶವನ್ನು ಮುಂದಿನ ಜನಾಂಗಕ್ಕೆ ತಿಳಿಹೇಳುವ ಪುಣ್ಯಾತ್ಮ ರಾಗಿ ಯಡಿಯೂರಪ್ಪ ಇzರೆ ಎಂದರು.
ಯಡಿಯೂರಪ್ಪನವರು ಬಸವ ಕಲ್ಯಾಣಕ್ಕೆ ೬೦೦ ಕೋಟಿ ರೂ.ಗಳನ್ನು ಒದಗಿಸಿದರು. ಮುಂದಿನ ೧೦ ಪೀಳಿಗೆ ಅವರನ್ನು ಸ್ಮರಿಸುತ್ತಾರೆ. ೧೨ ನೇ ಶತಮಾನದ ಕ್ರಾಂತಿಯನ್ನುಮುಂದುವರೆಸಿಕೊಂಡು ಹೋಗುವ ಪುಣ್ಯದ ಕೆಲಸವನ್ನು ಕ್ರಾಂತಿ ರೂಪದಲ್ಲಿ ಮಾಡಿದ್ದು ಯಡಿಯೂರಪ್ಪ ಅವರು.
ಎ ವರ್ಗದ ಜನಕ್ಕೆ ನ್ಯಾಯ:
ಕನಕದಾಸರ ಕಾಗಿನೆಲೆಗೆ ೪೫ ಕೋಟಿ ರೂ. ಗಳನ್ನು ಒದಗಿಸಿ ದರು. ಬಾಡಾ ಕ್ಷೇತ್ರದ ಅಭಿವೃದ್ಧಿಗೆ ೧೪ ಕೋಟಿ ರೂ.ಗಳನ್ನು ನೀಡಿ ಕೋಟೆ, ಅರಮನೆಯ ಅಭಿವೃದ್ಧಿ ಮಾಡಿzರೆ. ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನ ಸೇರಿದಂತೆ ಎ ವರ್ಗದ ಜನಕ್ಕೆ ನ್ಯಾಯ ನೀಡುವ ಸಾಮಾಜಿಕ ಪರಿವರ್ತಕ ಯಡಿಯೂರಪ್ಪ ಅವರು. ಕಲ್ಮಶ ಇಲ್ಲದ ಮನಸ್ಸು ಅವರದ್ದು ಎಂದರು.

ನಾಡು ಕಟ್ಟುವ ನಾಯಕರ ಅಗತ್ಯವಿದೆ: ಬಿಎಸ್‌ವೈ ಅವರು ೩೫ ವರ್ಷಗಳ ಕಾಲ ಅಧಿಕಾರ ಇಲ್ಲದೆ ಹೋರಾಡಿದರು. ಕರ್ನಾಟಕ ರಾಜಕಾರಣದಲ್ಲಿ ನಾಯಕ ಸಮೂಹವನ್ನು ಸೃಷ್ಟಿ ಮಾಡಿದ್ದು ರಾಮಕೃಷ್ಣ ಹೆಗಡೆ ಹಾಗೂ ಯಡಿಯೂರಪ್ಪ ಅವರು ಮಾತ್ರ ಎಂದರು.
ಬಿಎಸ್‌ವೈ ಅವರು ನಿವೃತ್ತರಾಗುವ ಪ್ರಶ್ನೆಯೇ ಇಲ್ಲ. ಜನರು ಅವರನ್ನು ನಿವೃತ್ತರಾಗಲು ಬಿಡುವುದಿಲ್ಲ. ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಅವರಿಗಿದೆ. ಅವರ ಸೇವೆ ಈ ರಾಜ್ಯಕ್ಕೆ ವಿವಿಧ ರೂಪದಲ್ಲಿ ಸಿಗಲಿದೆ. ನಾಯಕ ತೀರ್ಮಾನಿಸಬಹುದು, ಆದರೆ ಜನರ ಪ್ರೀತಿಯ ಮುಂದೆ ತಲೆಬಾಗಲೇಬೇಕು. ಅನುಭವಿ ಜನನಾಯಕರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಅವರ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ವಿದೆ. ಸ್ವಾರ್ಥ ರಾಜಕಾರಣ ದಿಂದ ಪ್ರಯೋಜನವಿಲ್ಲ. ಆದರೆ ನಾಡು ಕಟ್ಟುವ ನಾಯಕರ ಅಗತ್ಯವಿದೆ ಎಂದರು.

ಆನಂದಪುರದ ಮುರುಘ ರಾಜೇಂದ್ರ ಸ್ವಾಮೀಜಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಶಾಸಕ ಕುಮಾರ್ ಬಂಗಾರಪ್ಪ, ಎಂ.ಪಿ. ರೇಣುಕಾಚಾರ್ಯ, ಸಂಸದ ಬಿ.ವೈ ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಮೊದಲಾದವರು ಉಪಸ್ಥಿತರಿದ್ದರು.