ಏ.27:ಶಿವಮೊಗ್ಗಕ್ಕೆ ರಾಜ್ಯ ಚುನಾವಣಾ ಸಹಪ್ರಮುಖ್ ಅಣ್ಣಾಮಲೈ ಆಗಮನ..

ಶಿವಮೊಗ್ಗ: ಏ.೨೭ರಂದು ಶಿವಮೊಗ್ಗ ನಗರಕ್ಕೆ ರಾಜ್ಯ ಚುನಾವಣಾ ಸಹಪ್ರಮುಖ್ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅವರು ಆಗಮಿಸಲಿದ್ದು, ಶಿವಮೊಗ್ಗ ನಗರ ಮತ್ತು ಭದ್ರಾ ವತಿಯಲ್ಲಿ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲಿzರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿzರೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಕಡೆ ವಿವಿಧ ಸಮಾಜಗಳ ಸಭೆ ಸಮಾರಂಭ ಗಳನ್ನು ಉದ್ದೇಶಿಸಿ ಅವರು ಮಾತ ನಾಡಲಿzರೆ ಎಂದರು.
ಬೆಳಿಗ್ಗೆ ೯ ಗಂಟೆಗೆ ಭದ್ರಾವತಿ ಯಲ್ಲಿ ವಿವಿಧ ಸಮಾಜದ ಪ್ರಮುಖರ ಸಭೆ ನಡೆಯಲಿದೆ. ೧೧ ಗಂಟೆಗೆ ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ವಿವಿಧ ಸಮಾಜಗಳ ಸಮಾವೇಶ ನಡೆಯಲಿದೆ. ಸಂಜೆ ೫ ಗಂಟೆಗೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಪ್ರಬುದ್ಧರ ಮತ್ತು ಯುವಕರ ಸಭೆಯಲ್ಲಿ ಭಾಗವಹಿ ಸಲಿzರೆ ಎಂದರು.
ಏ.೩೦ರಂದು ರಾಜದ್ಯಂತ ಮನೆಮನೆ ಸಂಪರ್ಕ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಪ್ರತಿ ಮನೆಗೂ ಮಹಾ ಸಂಪರ್ಕ ಅಭಿಯಾನದ ಮೂಲಕ ಕಾರ್ಯಕರ್ತರು ಮತದಾರರನ್ನು ಸಂಪರ್ಕಿಸಲಿzರೆ. ಶಿವಮೊಗ್ಗದ ೩೫ ವಾರ್ಡ್ ೨೮೩ ಬೂತ್‌ಗಳಲ್ಲಿ ೮,೪೯೬ ಪೇಜ್ ಪ್ರಮುಖರು ಪ್ರತಿ ಮನೆಗೆ ಹೋಗಿ ಬಿಜೆಪಿ ಪರವಾಗಿ ಮತ ಕೇಳಲಿದ್ದು, ಜಿದ್ಯಂತ ಈ ಆಭಿಯಾನ ನಡೆಯಲಿದೆ ಎಂದರು.
ಈ ಬಾರಿ ಹಿಂದುತ್ವದ ಕಟ್ಟಾಳು ಎಸ್.ಎನ್. ಚನ್ನಬಸಪ್ಪನವರಿಗೆ ಟಿಕೆಟ್ ಲಭಿಸಿದ್ದು, ಎ ಯವ ಕಾರ್ಯತರ್ಕರಲ್ಲಿ ಸಂತೋಷ ತಂದಿದೆ. ಕಳೆದ ಬಾರಿ ೪೬ಸಾವಿರ ಲೀಡ್‌ನಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ೬೦ಸಾವಿರ ಲೀಡ್‌ನಲ್ಲಿ ಗೆಲ್ಲುವುದು ನಿಶ್ಚಿತ ಎಂದರು.
ಒಬ್ಬ ಪ್ರಾಮಾಣಿಕ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದ ಸಿಂಗಂ ಎಂದು ಹೆಸರು ಪಡೆದ ಅಣ್ಣಾಮಲೈ ಪ್ರಚಾರ ಶಿವಮೊಗ್ಗ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಕಾಂಗ್ರೆಸ್ ಜೆಡಿಎಸ್‌ನವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಬಿಜೆಪಿ ತಳಮಟ್ಟದಿಂದ ಸದೃಢವಾಗಿ ಬೆಳೆದಿದ್ದು ಒಂದು ಸ್ಥಾನದಿಂದ ೧೦೫ ಸ್ಥಾನದ ವರೆಗೆ ಗ್ರಾಫ್ ಏರುತ್ತಾ ಹೋಗಿದೆ. ಇಳಿಯುವ ಪ್ರಶ್ನೆಯೇ ಇಲ್ಲ ಎಂದರು.
ಜಗದೀಶ್ ಶೆಟ್ಟರ್ ಸಿಟ್ಟಿನ ಭರದಲ್ಲಿ ಕಾಂಗ್ರೆಸ್ ಸೇರ್ಪಡೆ ಗೊಂಡಿzರೆ. ಅವರ ದೇಹದಲ್ಲಿ ಹರಿಯುತ್ತಿರುವುದು ಹಿಂದುತ್ವದ ರಕ್ತ ಅವರು ಮಂಡಿಸಿದ ಕಾನೂನು ಗಳನ್ನು ಕಾಂಗ್ರೆಸ್ ಹಿಂಪಡೆಯು ತ್ತದೆ ಎಂದು ಹೇಳಿದೆ. ಹಾಗಾಗಿ ಚುನಾವಣೆ ನಂತರ ಅವರು ಮತ್ತೆ ಬಿಜೆಪಿಗೆ ಹಿಂದಿರುಗಲಿzರೆ ಎಂದರು. ಬಿಜೆಪಿಯ ಮತ ಯಾವುದೇ ಕಾರಣಕ್ಕೂ ವಿಭಜನೆ ಆಗುವುದಿಲ್ಲ. ಜಿಯ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ. ಚಂದ್ರಶೇಖರ್ ಹಾಗೂ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ತನ್ನ ಸಂಗಡಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ಶಿವಾಜಿ, ಚಂದ್ರಶೇಖರ್, ನಾಗರಾಜ್, ಲಕ್ಷ್ಮಣ್, ಅಣ್ಣಪ್ಪ ಮತ್ತಿತರರಿದ್ದರು.