ಕಾಂಗ್ರೆಸ್ ತೊರೆದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಿಂಬಾಲಿಸಿದ ವಿವಿಧ ಘಟಕಗಳ ಪದಾಧಿಕಾರಿಗಳು..
ಶಿವಮೊಗ್ಗ: ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನಾಯಕತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಜೆಡಿಎಸ್ ಸೇರ್ಪಡೆ ಗೊಂಡರು.
ಜಿ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಸಿಂಗ್, ಉತ್ತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಯಾನಂದ್, ಸಾಮಾಜಿಕ ಜಲತಾಣದ ಮುಖ್ಯಸ್ಥ ಮಂಜುನಾಥ್, ಮುಜಿಬು ಜಿ ಕಾಂಗ್ರೆಸ್ ಕಾರ್ಯದರ್ಶಿಗಳಾದ ಗೌಟಿ ಮೆದಲಿಯಾರ್, ಮಂಜು ನಾಥ್, ಕೃಷ್ಣಪ್ಪ, ಡಿ. ಸುನಿಲ್, ಚಂದ್ರಶೇಖರ್, ವೆಂಕಟೇಶ್, ರಿಯಾಜ್, ಜಬೀ, ಶಾಂತಮ್ಮ, ಚೇತನ್ ನಾಯಕ್, ಶ್ರೀನಾಥ್, ಪ್ರದೀಪ್ ರಾಘವೇಂದ್ರ ಭಾರದ್ವಾಜ್, ಧನಂಜಯ ಸೇರಿದಂತೆ ವಿವಿಧ ವಾರ್ಡ್ಗಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್, ಕೆ.ಬಿ.ಪ್ರಸನ್ನ ಕುಮಾರ್ ನಾಯಕತ್ವದಲ್ಲಿ ಮಹಾನಗರ ಪಾಲಿಕೆ ಹಾಗೂ ನಗರಸಭೆ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಶಿವಮೊಗ್ಗ ನಗರ ವಿಧಾನಸಭಾ ಅಭ್ಯರ್ಥಿ ಆಯನೂರು ಮಂಜುನಾಥ್ ಅವರ ಕೈ ಬಲಪಡಿಸಲು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಹಾಗೂ ಜೆಡಿಎಸ್ ಪಕ್ಷಕ್ಕೆ ಬಲ ತುಂಬಲು ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಸ್ವಾಗತಿಸುತ್ತೇನೆ. ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಅವರು ಅತ್ಯಧಿಕ ಮತಗಳನ್ನು ಪಡದು ಗೆಲ್ಲುವ ವಿಶ್ವಾಸವಿದೆ ಎಂದರು.
ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ನಗರದ ಅಭ್ಯುದಯಕ್ಕಾಗಿ, ಶಾಂತಿ ಸ್ಥಾಪಿಸಲು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಲು ಆಯನೂರು ಮಂಜುನಾಥ್ ಶಾಸಕರನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷದ ವಿವಿಧ ಹುzಗಳನ್ನು ತೊರೆದು ಎಲ್ಲರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರು ವುದರಿಂದ ಜೆಡಿಎಸ್ಗೆ ಬಲ ಬಂದಿದೆ. ಸೇರ್ಪಡೆ ಗೊಂಡವರ ಅನುಭವ ಸಹ ಪಕ್ಷಕ್ಕೆ ಅನುಕೂಲವಾಗಲಿದೆ ಎಂದ ಅವರು, ಮುಂದಿನ ದಿನಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಗೊಳ್ಳಲಿzರೆ ಎಂದರು.
ವೇದಿಕೆಯಲ್ಲಿ ಅಭ್ಯರ್ಥಿ ಆಯನೂರು ಮಂಜುನಾಥ್, ಪಕ್ಷದ ಮುಖಂಡರಾದ ಸಿದ್ದಪ್ಪ, ಡಾ. ಶಾಂತಾ ಸುರೇಂದ್ರ, ಎಸ್.ವಿ. ರಾಜಮ್ಮ, ರಾಜಣ್ಣ, ಸಂಗಯ್ಯ, ನಾಗರಾಜ ಕಂಕಾರಿ, ಪಾಲಾಕ್ಷಿ ಇತರರಿದ್ದರು.