ಏ.23: ವಿಶ್ವ ಪುಸ್ತಕ ದಿನಾಚರಣೆ…

ಜಗತ್ತಿನ ಯುವ ಸಮೂಹವನ್ನು ಪುಸ್ತಕಗಳತ್ತ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈeನಿಕ ಮತ್ತು ಸಾಂಸ್ಕೃತಿಕ ಆಯೋಗ) ೧೯೯೫ರಲ್ಲಿ ಪ್ಯಾರಿಸ್‌ನ ಸಾಮಾನ್ಯ ಸಭೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ಆಚರಿಸುವ ನಿರ್ಧಾರವನ್ನು ಮಾಡಿತು. ಇದರೊಂದಿಗೆ ಪ್ರತಿವರ್ಷ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ಯುವಕರು ಹಾಗೂ ಮಕ್ಕಳಿಗೆ ಪ್ರಶಸ್ತಿಯನ್ನು ನೀಡುವ ಪರಿಪಾಠವನ್ನಿಟ್ಟುಕೊಂಡಿದೆ. ಈ ಆಚರಣೆಯಿಂದ ಪುಸ್ತಕ, ಪುಸ್ತಕೋದ್ಯಮದ ಹಾಗೂ ಗ್ರಂಥಸ್ವಾಮ್ಯದ ಬಗ್ಗೆ ವಿಶೇಷವಾಗಿ ತಿಳಿಯಲು ಸಾಧ್ಯವಾಗಿದೆ. ಅಂದಿನಿಂದ ಇಂದಿನವರೆಗೂ ವಿಶ್ವದಾದ್ಯಂತ ನೂರಾರು ದೇಶಗಳಲ್ಲಿ ಈ ದಿನದಂದು ಪುಸ್ತಕಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡುತ್ತಾ ಬಂದಿzರೆ. ಇದು ಮಾನವೀಯತೆಯ ಸಾಮಾಜಿಕ ಮತ್ತು ಸಾಂಸ್ಕೃತಿಕದ ಫಲವಾಗಿದೆ.
ಇದರಿಂದ ಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ ಹೆಚ್ಚಿಸುವ ಹಾಗೂ ಉತ್ತಮ ಲೇಖಕರನ್ನು ಗೌರವಿಸುವ ಹಂಬಲವನ್ನು ಹುಟ್ಟುಹಾಕಿತು. ಅಂದಿನಿಂದ ವಿಶ್ವದಾದ್ಯಂತ ರಾಷ್ಟ್ರಗಳು ಅನೇಕ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಈ ದಿನಾಚರಣೆಯಲ್ಲಿ ಭಾಗವಹಿಸಿ ಪುಸ್ತಕ ಹಾಗೂ ಓದುವಿಕೆಯ ಮಹತ್ವವನ್ನು ಸಾರುತ್ತಾ ಬಂದಿವೆ. ಈ ಜಗದ ಮೇರು ನಾಟಕಕಾರ, ಶೇಕ್ಸ್‌ಪಿಯರ್ ಕವಿ ಹುಟ್ಟಿದ್ದು ಏವನ್ ನದಿ ತೀರದ ಸ್ಟ್ರ್ಯಾಟ್‌ಫರ್ಡ್-ಆನ್-ಏವನ್‌ನಲ್ಲಿ ೧೫೬೪ರ ಏಪ್ರಿಲ್ ತಿಂಗಳ ೨೩ರಂದು. ಅವರ ಪುಣ್ಯತಿಥಿಯೂ ಸಹ ಏಪ್ರಿಲ್ ೨೩.
೧೯೧೯ರಲ್ಲಿ ಪ್ಯಾರೀಸ್‌ನಲ್ಲಿ ಸಿಲ್ವಿಯಾ ಬೀಚ್ ಎಂಬಾಕೆ ಶೇಕ್ಸ್‌ಪಿಯರ್ ಎಂಡ್ ಕಂಪನಿ ಎಂಬ ಹೆಸರಿನಲ್ಲಿ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿದಳು. ಕೆಲವೇ ವರ್ಷಗಳಲ್ಲಿ ಜೇಮ್ಸ್ ಜಯ್ಸ್, ಎಜಪೌಂಡ್, ಹೆಮಿಂಗ್ವೆ, ಫೋರ್ಢ್, ಮ್ಯಾಡಾಕ್ಸ್ ಮೊದಲಾದ ಲೇಖಕರು ಒಂದೆಡೆ ಕುಳಿತು ಪಾನೀಯ ಸೇವಿಸುತ್ತ ಚರ್ಚೆ ನಡೆಸುತ್ತಿರುವ ದಶ್ಯ ಮಾಮಾಲಾಗಿ ಹೋಯಿತು. ಮುಂದೆ ಬ್ಯಾನ ಆದ ಅನೇಕ ಪುಸ್ತಕಗಳು ಈ ಅಂಗಡಿಯಲ್ಲಿ ಸಿಗುವಷ್ಟರಮಟ್ಟಿಗೆ ಖ್ಯಾತಿಯನ್ನು ಪಡೆಯಿತು. ಇಷ್ಟೊಂದು ಹೆಸರಾದ ಪುಸ್ತಕದ ಅಂಗಡಿ ೧೯೪೦ರಲ್ಲಿ ಜರ್ಮನಿಯರ ಆಕ್ರಮಣಕ್ಕೊಳಪಟ್ಟು ಮುಚ್ಚಬೇಕಾಯಿತು.
ಹೀಗೆ ಪ್ರಪಂಚದ ನಾನಾ ದೇಶಗಳಲಿ ಪುಸ್ತಕದ ಅಂಗಡಿಗಳು ತಲೆ ಎತ್ತಿದವು. ನಮ್ಮ ದೇಶ ಹಾಗೂ ನಾಡಿನಾದ್ಯಾಂತ ಪ್ರಕಾಶಕರು, ಲಕ್ಷಾಂತರ ಪುಸ್ತಕ ಮಳಿಗೆಗಳು ಪ್ರಾರಂಭವಾಗಿ ಜನಸಾಮಾನ್ಯರಿಗೆ ಓದಿನ ದಾಹವನ್ನು ತೀರಿಸಿದವು. ಪ್ರತಿಯೊಬ್ಬ ವ್ಯಕ್ತಿಯ eನಾಭಿವದ್ಧಿಗೆ ಪುಸ್ತಕಗಳು ಅವಶ್ಯ. ಕಲ್ಪನಾ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಬದುಕುವ ಕಲೆಯನ್ನು ಪರಿಚಯಿಸುತ್ತವೆ. ಚರಿತ್ರೆಯನ್ನು ಪೀಳಿಗೆಗೆ ತಿಳಿಸುತ್ತವೆ. ಉತ್ತಮ ಸ್ನೇಹಿತರೆನಿಸಿದ ಪುಸ್ತಕಗಳ ಅಧ್ಯಯನದಿಂದ ಕಷ್ಟ, ದುಃಖಗಳನ್ನು ಮರೆತು ಭಾವನಾ ಲೋಕದಲ್ಲಿ ವಿಹರಿಸಬಹುದು. ಭಾಷೆಯ ಬಗ್ಗೆ ತಿಳಿಯುತ್ತಾ, ಓದುವಿಕೆಯನ್ನು ಹೆಚ್ಚಿಸಿಕೊಳ್ಳಲಿಕ್ಕೆ ಪುಸ್ತಕಗಳು ದಾರಿದೀಪವಾಗಿವೆ.
ಜನರಲ್ಲಿ ಓದುವ ಹವ್ಯಾಸ ಹೆಚ್ಚಾಗಿ ವಿವಿಧ ಭಾಷೆ, ವಿಷಯಗಳನ್ನು ಅರಿಯಲು ಪುಸ್ತಕಗಳೇ ಆಧಾರವಾಗಿವೆ. ಭೂಮಿಯ ಮೇಲಿನ ಮಾನವನ ಅಸ್ತಿತ್ವವನ್ನು ಅರಿತು ಹಂಚಿಕೊಳ್ಳಬಹುದು. ಪುಸ್ತಕಗಳನ್ನು ಕೊಂಡು ಓದಿದಾಗ ಬರೆದ ಕವಿಗೆ ಗೌರವ ಕೊಟ್ಟಂತಾಗುತ್ತದೆ. ಪುಸ್ತಕದ ಅಂಗಡಿಯಲ್ಲಿ ಉತ್ತಮ ಪುಸ್ತಕಗಳು ದೊರೆತಾಗ ಒಂದು ಕೊಳ್ಳಲು ಹೋದವರು ನಾಲ್ಕು ಪುಸ್ತಕಗಳನ್ನು ಕೊಳ್ಳುವರು. ಒಮೆಮ್ಮೆ ತಮಗೆ ಬೇಕಾದ ಪುಸ್ತಕ ದೊರೆಯದಿದ್ದರೆ ಬೇಜರಾಗಿ ವಾಪಾಸಾಗುವರು.
ಪ್ರಪಂಚದಲ್ಲಿ ಪುಸ್ತಕಗಳಿಗೆ ಸರಿಸಾಟಿಯಾದುದು ಮತ್ತೊಂದಿಲ್ಲ ಎನ್ನಬಹುದು. ಸ್ವಲ್ಪ ಹಣ ಉಳಿದಿದ್ದರೂ ಅನೇಕ ಮಹಾನುಭಾವರು ಆ ಹಣದಿಂದ ಉತ್ತಮ ಪುಸ್ತಕ ಕೊಂಡಿದ್ದನ್ನು ಅವರ ಜೀವನ ಚರಿತೆಯಲ್ಲಿ ನೋಡುತ್ತೇವೆ.
ನಮ್ಮ ನಾಡು-ನುಡಿಯ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ ಹಿರಿದಾಗಿದೆ. ಪುಸ್ತಕಗಳು ನಮ್ಮ ಸಂಗಾತಿಗಳು, ಸಹಪಾಠಿಗಳು. ಪುಸ್ತಕ ಸಂಸ್ಕೃತಿಯೇ ಮಿಗಿಲಾದದ್ದು ಬೇರೊಂದಿಲ್ಲ ಎನ್ನಬಹುದು. ಹೆಚ್ಚಿನ ಓದುವಿಕೆಯಿಂದ ಉತ್ತಮ ಸಂಸ್ಕೃತಿಗೆ ನಾಂದಿ ಹಾಕಿದ್ದಲ್ಲದೇ ಅಭಿವದ್ಧಿಯ ಪ್ರೇರಕ ಶಕ್ತಿಯಾಗುವುದು.
ಏಕಾಂತಕ್ಕೆ ಹೇಳಿ ಮಾಡಿಸಿದ ಸಂಗಾತಿಗಳೇ ಪುಸ್ತಕಗಳು. ಅವು ನಮೆಂದಿಗೆ ಮಾತನಾಡಿ, ಸ್ಪಂದಿಸುತ್ತವೆ. ಸಂಸ್ಕೃತಿ ಉಳಿಸಿ ನಮ್ಮನ್ನು ಸದಾ ನೆಮ್ಮದಿಯಿಂದರಿಸಲು ಪುಸ್ತಕಗಳು ತುಂಬಾ ಅವಶ್ಯವಾಗಿವೆ. ಇತ್ತೀಚೆಗೆ ಐಟಿ, ಬಿಟಿ ಕಂಪನಿಯ ವಿದ್ಯಾವಂತರೂ ಕೂಡ ಪುಸ್ತಕ ಕೊಳ್ಳಲು ಪುಸ್ತಕ ಮೇಳದತ್ತ ಧಾವಿಸುತ್ತಿರುವುದನ್ನು ನಾವು ಗಮನಿಸಬಹುದು. ಪುಸ್ತಕಗಳು ನಮ್ಮ ಜೀವನವನ್ನು ಹಸನುಗೊಳಿಸುತ್ತವೆ. ನಮ್ಮ ಮನಸ್ಸಿನ ಆತಂಕಕ್ಕೆ ಅಮೂಲ್ಯ ಔಷಧಿಯಾಗಿವೆ.
ನಮ್ಮ ದೇಶದ ಶ್ರೇಷ್ಟ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕಷ್ಣನ್ ನಮೆಂದಿಗೆ ಪುಸ್ತಕಗಳಿದ್ದರೆ ನಾವೆಂದಿಗೂ ಒಬ್ಬಂಟಿರಲ್ಲ ಎಂದಿzರೆ. ಒಂದು ಉತ್ತಮ ಗ್ರಂಥವನ್ನು ನಾಶಪಡಿಸುವುದೆಂದರೆ ಒಬ್ಬ ಸಜ್ಜನ ಮನುಷ್ಯನನ್ನೇ ಕೊಂದಂತೆ ಎಂದು ಜನ್ ವಿಲ್ಟನ್ ಹೇಳುತ್ತಾರೆ.
ಪ್ರಸ್ತುತ ದಿನಗಳಲ್ಲಿ ಮೆಬೈಲ್ ದಾಸರಾದ ನಮ್ಮ ಕಣ್ಣಮುಂದೆ ಸಾವಿರಾರು ಪುಸ್ತಕಗಳಿವೆ. ಆದರೆ ಕೊಳ್ಳುವ ಮನಸ್ಸಾಗಬೇಕಿದೆ. ಒಂದೊಂದು ಪುಸ್ತಕವೂ ಒಂದೊಂದು ಪ್ರಬುದ್ಧ ಮೆದುಳಿನ ಫಲವಾಗಿದೆ. ಈ ಪರಿeನವನ್ನು ಜನತೆ ಅರಿಯಬೇಕಿದೆ. ವಾರಕ್ಕೊಮ್ಮೆ ಉಪವಾಸ ಮಾಡಿದಂತೆ ತಿಂಗಳಿಗೆ ಒಂದು ದಿನವಾದರೂ ಮೆಬೈಲ್ ಬಳಸದಿರುವುದು ಒಳಿತು ಎಂಬಂತಾದರೆ ಮನಸ್ಸಿಗೆ ತುಸು ನೆಮ್ಮದಿ ಸಿಗಬಹುದು.
ಒಟ್ಟಿನಲ್ಲಿ ಈ ವಿಶ್ವ ಪುಸ್ತಕ ದಿನಾಚರಣೆಯ ನೆಪದದರೂ ಯುವ ಜನತೆ ನಮ್ಮ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲಿ. ದಿನಕ್ಕೆ ಎರಡು ಗಂಟೆಯವರೆಗೆ ನಮ್ಮ ಹತ್ತಿರದ ಗ್ರಂಥಾಲಯಗಳ ಸದುಪಯೋಗವಾಗಲಿ ಎಂಬುದೇ ನನ್ನ ಆಶಯ.

  • ಹೆಚ್.ಎಂ.ಗುರುಬಸವರಾಜಯ್ಯ.
    ಉಪನ್ಯಾಸಕರು, ಮೊ:೯೯೮೬೬೨೨೮೦೧