ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆz ಗೆಲ್ಲಿಸುತ್ತಾರೆ : ಯೋಗೀಶ್ ವಿಶ್ವಾಸ…
ಶಿವಮೊಗ್ಗ: ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆz ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ವ್ಯಕ್ತಪಡಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿ ಶಾಖೆ ಮೀಡಿಯಾ ಹೌಸ್ ನಲ್ಲಿ ಆಯೋಜಿ ಸಿದ್ದ ಸಂವಾದ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪಾಲಿಕೆ ಸದಸ್ಯನಾಗಿ ಹಾಗೂ ಕಾಂಗ್ರೆಸ್‌ನ ವಿವಿಧ ಹುzಗಳಲ್ಲಿ ಕೆಲಸ ಮಾಡಿದ ಅನುಭವದ ಆಧಾರವನ್ನಾಗಿಟ್ಟು ಕೊಂಡು ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಜನತೆ ಈ ಬಾರಿ ನನ್ನನ್ನು ಗೆದ್ದೇ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ರಾಜಕಾರಣ ಕುಟುಂಬದಿಂದ ಬಂದ ವನು ನಾನು. ಮಹಾನಗರ ಪಾಲಿಕೆ ಸದಸ್ಯ ನಾಗಿ ರಾಜಕಾರಣಕ್ಕೆ ಪ್ರವೇಶ ಪಡೆದೆ. ೩ ಬಾರಿ ಜನ ನನ್ನನ್ನು ಆಯ್ಕೆ ಮಾಡಿzರೆ. ನನ್ನ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಪೌರ ಕಾರ್ಮಿಕರ ಪರ ಹೋರಾಟ. ಬಸವೇಶ್ವರ ಪುತ್ಥಳಿ, ೧೦೮ ಅಡಿ ಎತ್ತರದ ಧ್ವಜ, ಪಾರ್ಕ್‌ಗಳ ಅಭಿವೃದ್ಧಿ, ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ, ಕ್ರೀಡೆ, ಸಾಂಸ್ಕತಿಕ ಕ್ಷೇತ್ರಕ್ಕೆ ಕೊಡುಗೆ, ದಸರಾ ಹಬ್ಬಕ್ಕೆ ವಿಶೇಷ ಮೆರಗು ನೀಡಿದ್ದು ಇವೆಲ್ಲವನ್ನು ಜನ ಗುರುತಿಸಿzರೆ ಎಂದರು.
ಪಾಲಿಕೆ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇನೆ. ಮುಖ್ಯವಾಗಿ ಬ್ಯಾರೀಸ್ ಸಿಟಿ ಸೆಂಟರ್ ಮಾಲ್, ಲಕ್ಷ ವೃಕ್ಷ ಆಂದೋಲನದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೋರಾಟ, ಪ್ರತಿಭಟನೆ ನಡೆಸುತ್ತಾ ಬಂದಿದ್ದೇನೆ. ಅದಿನ್ನೂ ತಾತ್ವಿಕ ಅಂತ್ಯ ಕಾಣಬೇಕಾಗಿದೆ. ಯಾವುದೇ ರೀತಿಯ ಅನ್ಯಾಯವಾದರೂ ನನ್ನ ಹೋರಾಟ ಪಾಲಿಕೆಯ ಒಳಗೂ ಮತ್ತು ಹೊರಗೂ ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿಕೊಂಡು ಮಾಡಿದ್ದೇನೆ ಎಂದರು.
ವೀರಶೈವ ಸಮಾಜದಿಂದಲೂ ನಾನು ಗುರುತಿಸಿಕೊಂಡಿದ್ದೇನೆ. ಲಂಡನ್ ನಿಂದ ಬಸವೇಶ್ವರ ಪುತ್ಥಳಿ ತರಲು ಶ್ರಮಿಸಿದ್ದೇನೆ. ಇವೆಲ್ಲವೂ ನನಗೆ ಪ್ಲಸ್ ಪಾಯಿಂಟ್ ಆಗಲಿವೆ. ಜೊತೆಗೆ ಎನ್.ಎಸ್.ಯು.ಐ., ಯುವ ಕಾಂಗ್ರೆಸ್ ಘಟಕಗಳಲ್ಲಿ ಕೆಲಸ ಮಾಡಿದ್ದೇನೆ. ಆಡಳಿತದ ಅನುಭವವೂ ನನಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷ ಹೇಳಿದ ಕೆಲಸವನ್ನು ಚಾಚೂ ತಪ್ಪದೇ ಮಾಡಿದ್ದೇನೆ. ಕೊರೋನಾ ಸಂದರ್ಭದಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ. ಯುವಕರು ನನ್ನೊಂದಿಗಿzರೆ ಎಂದರು.
ನನ್ನೊಡನೆ ಅಭ್ಯರ್ಥಿ ಆಕಾಂಕ್ಷಿಗಳಾಗಿ ೧೧ ಜನರು ಅರ್ಜಿ ಹಾಕಿದ್ದರು. ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಬಿಟ್ಟು ಉಳಿದ ಎಲ್ಲರೂ ಈಗ ನನ್ನೊಡನೆ ಇzರೆ. ಮತ ಪ್ರಚಾರವನ್ನು ಕೂಡ ಆರಂಭ ಮಾಡಿದ್ದೇವೆ. ಆಯನೂರು ಮಂಜುನಾಥ್ ಹಾಗೂ ಕೆ.ಬಿ. ಪ್ರಸನ್ನಕುಮಾರ್ ಜೆಡಿಎಸ್ ಗೆ ಬಂದಿದ್ದರಿಂದ ಯಾವ ಪರಿಣಾಮ ಬೀರುವುದಿಲ್ಲ. ಹಾಗೆಯೇ ಎಂ. ಶ್ರೀಕಾಂತ್ ಜೆಡಿಎಸ್ ಕಟ್ಟಿ ಬೆಳೆಸಿದವರು. ಅವರು ಸ್ಪರ್ಧಿಸಿzಗ ಎಷ್ಟು ಮತಗಳು ಬಂದಿದ್ದವೆಂದು ಜನರಿಗೆ ಗೊತ್ತಿದೆ. ಗೆಲ್ಲವು ಅಭ್ಯರ್ಥಿಗೆ ಜನ ಮತ ಹಾಕುತ್ತಾರೆಯೇ ಹೊರತೂ ಕೇವಲ ಅಭಿಮಾನದಿಂದ ಅಲ್ಲ ಎಂದರು.