ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಅ+ ಶ್ರೇಣಿಯ ನ್ಯಾಕ್ ಮಾನ್ಯತೆ

ಶಿಕಾರಿಪುರ : ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಇದೇ ಏ.೧೨ ಮತ್ತು ೧೩ ರಂದು ಎರಡನೇ ಅವಽಗೆ ನ್ಯಾಕ್ ತಂಡವು ಭೇಟಿ ನೀಡಿ ಮಹಾವಿದ್ಯಾಲಯದ ಎಲ್ಲಾ ಚಟುವಟಿಕೆಗಳನ್ನು ಪರಿಶೀ ಲಿಸಿ ಗುಣಾತ್ಮಕತೆಯನ್ನು ಆಧರಿಸಿ ಅ+ ಶ್ರೇಣಿಯನ್ನು ನೀಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಕಾಲೇಜಿನ ಪ್ರಾಚಾರ್‍ಯ ಡಾ.ಶಿವಕುಮಾರ್ ಜಿ.ಎಸ್ ರವರು, ನ್ಯಾಕ್ ಮಾನ್ಯತೆಯು ಕುಮದ್ವತಿ ಶಿಕ್ಷಣ ಮಹಾವಿದ್ಯಾಲ ಯದ ಗುಣಮಟ್ಟವನ್ನು ಸೂಚಿಸು ತ್ತದೆ.ಕಳೆದ ಎರಡೂವರೆ ದಶಕ ಗಳಿಂದ ಗುಣಮಟ್ಟದ ಶಿಕ್ಷಕರ ತರಬೇತಿ ನೀಡುತ್ತಾ ಬಂದು ನ್ಯಾಕ್ ಈ ಶ್ರೇಣಿಯ ಮೂಲಕ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಮಲೆ ನಾಡಿನ ಶಿಕ್ಷಕರ ಶಿಕ್ಷಣ ಕಾಲೇಜು ಗಳಲ್ಲಿ ಮತ್ತಷ್ಟು ಹೆಸರುವಾಸಿ ಯಾಗಿದೆ.ಈ ಮಟ್ಟದ ಸಾಧನೆಗೆ ಸಂಪೂರ್ಣ ಸಹಕಾರ ನೀಡಿದ ಆಡಳಿತ ಮಂಡಳಿಯ ಸರ್ವ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರ ಸತತ ಶ್ರದ್ಧಾಪೂರ್ವಕ ಕೆಲಸವೂ ಕೂಡ ಈ ಪ್ರಮಾಣದ ಶ್ರೇಣಿ ಯನ್ನು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿzರೆ.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಕಿರಣ್ ಕುಮಾರ್ ಕೆ ಎಸ್,ಐದಾರು ವರ್ಷಗಳ ಸತತ ಪರಿಶ್ರಮ ಈ ಮಟ್ಟದ ಫಲಿತಾಂಶ ಬರಲು ಸಾಧ್ಯ ವಾಗಿದೆ.ನ್ಯಾಕ್ ಮಾನದಂಡಗಳಿಗೆ ಅನುಸರಿಸಿ ಕಾಲೇಜಿನಲ್ಲಿ ಎಲ್ಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿ ದ್ದೆವು ಹಾಗೂ ಸಾಮಾಜಿಕವಾಗಿ ಹಲವಾರು ಕಾರ್ಯಕ್ರಮಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ಹಾಗಾಗಿ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ.ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಚೊಚ್ಚಿಲ ಸಂಸ್ಥೆ ಯಾದ ಕುಮದ್ವತಿ ಶಿಕ್ಷಣ ಮಹಾ ವಿದ್ಯಾಲಯ ಎಂದಿಗೂ ಗುಣಾತ್ಮ ಕತೆಯನ್ನು ಕಾಯ್ದುಕೊಂಡು ಬಂ ದಿದೆ,ಅದಕ್ಕೆ ಕಳಸಪ್ರಾಯವೆಂಬಂತೆ ನ್ಯಾಕ್ ನೀಡಿರುವ ಈ ಶ್ರೇಣಿ ಹೆಚ್ಚು ಪುಷ್ಟಿ ನೀಡಿದೆ.ಹಾಗೆಯೇ ಈ ಶ್ರೇಣಿಯ ಫಲಿತಾಂಶ ಪಡೆ ಯಲು ಸಹಕರಿಸಿದ ಆಡಳಿತ ಮಂಡಳಿಗೆ, ಬೋಧಕ- ಬೋಧ ಕೇತರ ಸಿಬ್ಬಂದಿಯವರಿಗೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರಿಗೆ, ಪೋಷಕರಿಗೆ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಧನ್ಯ ವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಅದೇರೀತಿ ಅ+ ಶ್ರೇಣಿಯ ಮಾನ್ಯತೆ ಪಡೆಯಲು ಕಾರಣರಾದ ಎಲ್ಲರಿಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.