ಕಾಂಗ್ರೆಸ್ ರಾಜೀನಾಮೆ ನೀಡಿ ಬಿಜೆಪಿ ಸೋಲಿಸುವ ಶಪಥ ಮಾಡಿದ ಗೌಡರು…

ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜೀ ನಾಮೆ ನೀಡುತ್ತೇನೆ. ಶಿಕಾರಿಪುರ ದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ರುವ ನಾಗರಾಜ ಗೌಡರ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸುವ ಮೂ ಲಕ ಯಡಿಯೂರಪ್ಪ ಕುಟುಂಬ ವನ್ನು ಸೋಲಿಸುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖ ಂಡ ಶಾಂತವೀರಪ್ಪ ಗೌಡ ಹೇಳಿ ದರು.
ಅವರು ಇಂದು ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್. ಯಡಿ ಯೂರಪ್ಪನವರ ಕುತಂತ್ರದಿಂದ ನಾಗರಾಜ ಗೌಡರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ. ಸಿದ್ದರಾಮಯ್ಯ ಈ ರಾಜ್ಯದ ನಾಯಕರು. ಅವರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಂದು ರಾಜಕಾರಣ ಮಾಡಿzರೆ ಎಂದು ದೂರಿದರು.
ನಾನೆಂದೂ ಬಿಜೆಪಿಯನ್ನು ಸೇರುವುದಿಲ್ಲ. ನನ್ನ ದೇಹ ಮಾತ್ರ ಕಾಂಗ್ರೆಸ್‌ನಿಂದ ದೂರವಿದೆಯೇ ಹೊರತು ನನ್ನ ಆತ್ಮವಲ್ಲ, ಶಿಕಾರಿಪುರದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಹಠ ತೊಟ್ಟಿದ್ದೇನೆ ಆ ಕಾರಣದಿಂದಲೇ ಕಾಂಗ್ರೆಸ್‌ನಿಂದ ಬಂಡಾಯವಾಗಿ ಸ್ಪರ್ಧಿಸಿರುವ ನಾಗರಾಜ ಗೌಡರ ಪರ ನಿಂತಿದ್ದೇನೆ ಎಂದರು.
ವರುಣ ಕ್ಷೇತ್ರದಲ್ಲಿ ಮಗನನ್ನು ನಿಲ್ಲಿಸುತ್ತೇನೆ ಎಂಬ ಭೂತ ಬಿಟ್ಟು ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಇವರೇ ಸೂಚಿಸಿದ ಗೋಣೀ ಮಾಲತೇಶ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿzರೆ. ಇದಕ್ಕೆ ನಾವು ಹೆದರುವುದಿಲ್ಲ. ಅವರ ಪುತ್ರ ವಿಜಯೇಂದ್ರನಷ್ಟು ಭ್ರಷ್ಟಾಚಾರಿ ಬೇರೆ ಯಾರೂ ಇಲ್ಲ. ಯಡಿಯೂರಪ್ಪ ಕುಟುಂಬ ಮಲೇಶಿಯಾ ಸೇರಿದಂತೆ ವಿಶ್ವದ ಎಡೆ ಆಸ್ತಿ ಮಾಡಿದೆ ಎಂದು ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಲಿಂಗರಾಜ ಗೌಡ, ಗಣೇಶ ಗೌಡ, ಸಂತೋಷ್, ಹೇಮಂತ ಸ್ವಾಮಿ, ಮಂಜುನಾಥ್, ವಿಶ್ವಾಸ್ ಇದ್ದರು.