KEMPEGOWDA

ಕರ್ನಾಟಕ ಸಾಮ್ರಾಜ್ಯವು ಬಹಳಷ್ಟು ಮಹನೀಯರ ಯಶೋಗಾಥೆಗೆ ಮಂಗಳಕರ ನೆಲೆವೀಡಾಗಿದೆ. ಕರ್ನಾಟಕ ಚರಿತ್ರೆಯಲ್ಲಿ ಮಿನುಗು ತಾರೆಗಳಾಗಿ ಶಾಶ್ವತ ನೆಲೆಯನ್ನು ಪಡೆದವರು ಬಹುತೇಕರಿzರೆ. ನಮ್ಮ ಕನ್ನಡ ತಾಯಿ ಭುವನೇಶ್ವರಿಯು ಸುಸಂಸ್ಕೃತ ಮಡಿಲಲ್ಲಿ ಆಡಿ ಬೆಳೆದ ಕಂದಮ್ಮಗಳು ವೀರರು ಮತ್ತು ಮಗಧೀರರು ಆಗಿzರೆ.
ಈ ನೆಲದ ಸೊಗಡು ಬಹುಮುಖ ಕ್ಷೇತ್ರಗಳಲ್ಲಿ ಸಾಧಕರಿಗೆ ಸ್ಥಳ ನೀಡಿ ಅಜರಾಮರರನ್ನಾಗಿಸಿದೆ. ಇಂದು ಆಧುನಿಕತೆ ಮೈನವಿರೇಳಿಸುವಷ್ಟು ಅಚ್ಚರಿಯಾಗಿ ಬೆಳೆದು ನಿಂತಿದೆ.
ಸಿಲಿಕಾನ್ ವ್ಯಾಲಿ ಎಂದೇ ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಬೆಂಗಳೂರು ಕರ್ನಾಟಕದ ರಾಜಧಾನಿ. ಒಂದೊಮ್ಮೆ ಬೆಂದಕಾಳೂರು ಎಂದು ಕರೆಯಲಾಗತ್ತಿದ್ದ ಇಂದಿನ ಬೆಂಗಳೂರು ನಗರೀಕರಣ, ಕೈಗಾರಿಕೀಕರಣ, ಖಾಸಗೀಕರಣ, ಔದ್ಯೋಗೀಕರಣ, ವಿeನ ಮತ್ತು ತಂತ್ರeನ, ಖಗೋಳ ಮತ್ತು ವೈಮಾನಿಕ, ಸಾಮಾಜಿಕ, ಐತಿಹಾಸಿಕ, ಆರ್ಥಿಕ, ರಾಜಕೀಯ, ಕಲಾ ಪ್ರಪಂಚದ ಸಿನಿಮಾ ಲೋಕ ಮತ್ತು ದೂರದರ್ಶನದ ಜಗತ್ತು, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ಮುಂತಾದ ಕ್ಷೇತ್ರಗಳು ಪ್ರಪಂಚವನ್ನೆ ದಿಗ್ಭ್ರಮೆಗೊಳಿಸುವ ನಿಟ್ಟಿನಲ್ಲಿ ಬೆಳೆದು ನಿಂತಿವೆ.
ಒಂದು ಕ್ಷೇತ್ರವು ಮತ್ತೊಂದು ಕ್ಷೇತ್ರಕ್ಕಿಂತಲೂ ವಿಭಿನ್ನ ಹಾಗೂ ವೈಶಿಷ್ಠ್ಯಪೂರ್ಣವಾದ ವೈವಿಧ್ಯಮಯತೆಯನ್ನು ಹೊಂದಿದೆ.
ಇಂತಹ ಅಭೂತ ಪೂರ್ವ ನಾಡನ್ನು ೧೬ನೇ ಶತಮಾನದಲ್ಲಿ ಕಟ್ಟಿದವರು ನಾಡಪ್ರಭು ಕೆಂಪೇಗೌಡರು. ೧೫೧೦, ಜೂನ್ ೨೭ ರಂದು ಇವರು ಜನಿಸಿದರೆಂಬ ದಾಖಲೆಗಳ ಆಧಾರದ ಮೇಲೆ ಪ್ರತಿವರ್ಷ ಜೂ.೨೭ನ್ನು ಕೆಂಪೇಗೌಡ ಜಯಂತಿ ಎಂಬುದಾಗಿ ಕನಾಟಕದಲ್ಲಿ ಆಚರಿಸಲಾಗುತ್ತಿದೆ. ಪ್ರಸ್ತುತ ಕೆಂಪೇಗೌಡರ ೫೧೫ನೇ ಜನ್ಮ ದಿನವನ್ನು ಆಚರಿಸಲಾಗುತ್ತಿದೆ.
ಸ್ಥಳೀಯವಾಗಿ ನಾಡಪ್ರಭು ಕೆಂಪೇಗೌಡ ಎಂದು ಪೂಜಿಸಲಾಗುವ ಇವರು ಆರಂಭಿಕ -ಆಧುನಿಕ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಿzರೆ.
ಕೆಂಪೇಗೌಡರು ಬೆಂಗಳೂರಿನ ಯಲಹಂಕ ಉಪನಗರದಲ್ಲಿ ಮೊರಸು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಸರಿಸುಮಾರು ೭೦ ವರ್ಷಗಳಿಗೂ ಹೆಚ್ಚು ಕಾಲ ಯಲಹಂಕವನ್ನು ಆಳಿದಂತಹ ಕೆಂಪನಂಜೇಗೌಡರ ಪುತ್ರರಾಗಿzರೆ.
ಕೆಂಪೇಗೌಡರು ತಮ್ಮ ಬಾಲ್ಯದಲ್ಲಿ ನಾಯಕತ್ವದ ಕೌಶಲ್ಯವನ್ನು ಹೊಂದಿದ್ದರೆಂದು ಖ್ಯಾತಿ ಪಡೆದಿದ್ದರು. ಒಂಬತ್ತು ವರ್ಷಗಳ ಕಾಲ ಹೆಸರಘಟ್ಟ ಸಮೀಪದ ಹಳ್ಳಿಯಾದ ಐವರುಕಂದಪುರ ಅಥವಾ ಐಗೊಂಡಾಪುರ ಗುರುಕುಲದಲ್ಲಿ ಶಿಕ್ಷಣ ಪಡೆದರು ಎಂದು ತಿಳಿದುಬರುತ್ತದೆ.
ಮೊರಸು ಒಕ್ಕಲಿಗರು ಯಲಹಂಕದಲ್ಲಿ ವಿಜಯನಗರದ ಸಾಮಂತರಾಗಿ ಆಡಳಿತ ನಡೆಸುತ್ತಿದ್ದರು. ಕೆಂಪೇಗೌಡರು ಯಲಹಂಕ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧರಾಗಿzರೆ. ಇವರು ೧೫೨೩ ರಲ್ಲಿ ತಮ್ಮ ತಂದೆಯಿಂದ ಯಲಹಂಕ ನಾಡಿನ ಅಧಿಕಾರ ಸ್ವೀಕಾರ ಮಾಡಿ ೪೬ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದಂತಿರುವ ಪೆನುಕೊಂಡದಲ್ಲಿ ಕೆಂಪೇಗೌಡರು ಅಧಿಕಾರಕ್ಕೆ ಬರುತ್ತಾರೆ ಎಂಬ ಭಯದಿಂದ ಚನ್ನಪಟ್ಟಣದಲ್ಲಿದ್ದ ಪಕ್ಕದ ಪಾಳೆಗಾರನಾದ ಜಗದೇವರಾಯನು ವಿಜಯನಗರ ಚಕ್ರವರ್ತಿ ಸದಾಶಿವರಾಯರಿಗೆ ದೂರು ನೀಡಿದರು. ಆ ದೂರಿನ ಮೇರೆಗೆ ಕೆಂಪೇಗೌಡರ ಪ್ರದೇಶಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಅವರನ್ನು ಐದು ವರ್ಷಗಳ ಕಾಲ ಕಾರಾಗೃಹದಲ್ಲಿ ಇರಿಸಲಾಯಿತು. ಅಲ್ಲಿಂದ ಬಿಡುಗಡೆ ಹೊಂದಿದ ನಂತರ, ಕೆಂಪೇಗೌಡರು ತಮ್ಮ ಪ್ರದೇಶಗಳಿಗೆ ಮರಳಿದರು. ಆದಾಗ್ಯೂ, ನಂತರದ ವರ್ಷಗಳಲ್ಲಿ, ಅವರ ಚಟುವಟಿಕೆಗಳಿಂದ ಸಂತಸಗೊಂಡ ವಿಜಯನಗರದ ಸಾಮ್ರಾಟರು ಕೆಂಪೇಗೌಡರಿಗೆ ತಮ್ಮ ಪ್ರದೇಶಗಳಿಗೆ ಹೊಂದಿಕೊಂಡಂತಿದ್ದ ಹತ್ತಿರದ ಹಳ್ಳಿಗಳಾದ ಹಲಸೂರು , ಬೇಗೂರು, ವರ್ತೂರು , ಜಿಗಣಿ, ತಲಗಟ್ಟಾಪುರ, ಕುಂಬಳಗೋಡು, ಕೆಂಗೇರಿ ಮತ್ತು ಬಾಣಾವರ ಪ್ರದೇಶಗಳನ್ನು ನೀಡಿದರು.
ಇದು ಕೆಂಪೇಗೌಡರ ಒಳ್ಳೆಯತನಕ್ಕೆ ಸಿಕ್ಕಿದ ಪ್ರತಿಫಲವಾಗಿತ್ತು. ಇವರಿಗೆ ೧೫೨೮ರಲ್ಲಿ ಯುವರಾಜರಾಗಿ ಪಟ್ಟಾಭಿಷೇಕವಾದ ಮೇಲೆ ವಿಜಯನಗರ ಸಾಮ್ರಾಜ್ಯದ ವೈಭವ ನೋಡಿದ್ದರಿಂದ ಅಂತದ್ದೇ ಒಂದು ನಗರವನ್ನು ಸ್ಥಾಪಿಸಬೇಕು ಎಂಬ ಕನಸು ಕಂಡಿದ್ದ ಇವರು ನಂತರದ ವರ್ಷಗಳಲ್ಲಿ ವಿಜಯನಗರದ ಚಕ್ರವರ್ತಿ ಅಚ್ಯುತರಾಯರ ಅನುಮತಿ ಯೊಂದಿಗೆ ಅವರು ೧೫೩೭ರಲ್ಲಿ ಬೆಂಗಳೂರು ಕೋಟೆ ಮತ್ತು ಪಟ್ಟಣವನ್ನು ನಿರ್ಮಿಸಿದರು. ಅದಲ್ಲದೇ ಯಲಹಂಕದಿಂದ ಹೊಸ ಬೆಂಗಳೂರು ಪೇಟೆಗೆ ತಮ್ಮ ರಾಜಧಾನಿಯನ್ನು ಸ್ಥಳಾಂತರಿಸಿದರು ಮತ್ತು ನಗರವನ್ನು ಬೆಳೆಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು.
ಭವಿಷ್ಯದಲ್ಲಿ ಬೆಂಗಳೂರಿಗರು ಆರ್ಥಿಕವಾಗಿ ಕುಗ್ಗಬಾರದು ಎಂದು ದೂರದೃಷ್ಟಿಯನ್ನು ಹೊಂದಿದ್ದರು. ಜೊತೆಗೆ ಜನರ ಅಗತ್ಯತೆಗೆ ಅನುಗುಣವಾಗಿ ನಾಲ್ಕು ದಿಕ್ಕಿಗೆ ನಾಲ್ಕು ಗೋಪುರ, ಪ್ರತಿ ಬಡಾವಣೆಗೆ ಒಂದು ಕೆರೆ, ನೂರಾರು ಜನರ ವೃತ್ತಿಗೆ ಅನುಗುಣವಾಗಿ ರಸ್ತೆಗಳನ್ನು ನಿರ್ಮಿಸಿದ್ದರು.
ನಗರದಲ್ಲಿ ಕುಡಿಯುವ ಮತ್ತು ಕೃಷಿ ಅಗತ್ಯಗಳನ್ನು ಪೂರೈಸಲು ಸುಮಾರು ೧,೦೦೦ ಕೆರೆಗಳನ್ನು ಅಭಿವೃದ್ಧಿಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಸುಮಾರು ೪೬ ವರ್ಷಗಳ ಕಾಲ ಸುಧೀರ್ಘ ಆಡಳಿತ ನಡೆಸಿ ಜನರ ಒಳಿತಿಗಾಗಿ ಶ್ರಮವಹಿಸಿದ್ದರು.
ದೊಡ್ಡಪೇಟೆ, ಚಿಕ್ಕಪೇಟೆ, ನಗರದ-ಪೇಟೆ ಬೀದಿಗಳು, ಸಾಮಾನ್ಯ ಸರಕುಗಳ ಮಾರಾಟಕ್ಕಾಗಿ ಅರಳೆಪೇಟೆ, ತರಗುಪೇಟೆ, ಅಕ್ಕಿ ಪೇಟೆ, ರಾಗಿಪೇಟೆ, ಬಳೆಪೇಟೆ ಮುಂತಾದವು ಕ್ರಮವಾಗಿ ಹತ್ತಿ , ಧಾನ್ಯ , ಅಕ್ಕಿ , ರಾಗಿ ಮತ್ತು ಬಳೆಗಳಂತಹ ಸರಕುಗಳ ಮಾರಾಟಕ್ಕಾಗಿ ನಿರ್ಮಿಸಿದರು.
ಕುರುಬರಪೇಟೆ, ಕುಂಬಾರ -ಪೇಟೆ, ಗಾಣಿಗರಪೇಟೆ, ಉಪ್ಪಾರಪೇಟೆ ಇತ್ಯಾದಿ ಕರಕುಶಲ ವ್ಯಾಪಾರಕ್ಕಾಗಿ ನಿರ್ಮಾಣ ಮಾಡಿಸಿದರು. ಹಲಸೂರುಪೇಟೆ, ಮುತ್ಯಾಲಪೇಟೆ ಹೀಗೆ ವಿಭಿನ್ನ ಮಾದರಿಯ ನಗರ ನಿರ್ಮಾಣಕ್ಕೆ ಯೋಜನೆ ರೂಪಿಸಿ ನಿರ್ಮಿಸಿದರು.
ಪಟ್ಟಣಕ್ಕೆ ನೀರು ಸರಬರಾಜು ಮಾಡಲು, ಕೋಟೆಯ ಸುತ್ತಲಿನ ಕಂದಕಕ್ಕೆ ಮತ್ತು ಬೆಳೆಗಳ ರಕ್ಷಣೆಗೆ ನೀರಾವರಿಗಾಗಿ ತೊಟ್ಟಿಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದರು. ಇದು ಇಂದಿನ ಬೆಂಗಳೂರು ನಗರ ನಿರ್ಮಾಣದ ಅಡಿಪಾಯವಾಗಿದೆ.
ಕರ್ನಾಟಕಕ್ಕೆ ಅದರಲ್ಲೂ ಮುಖ್ಯವಾಗಿ ಬೆಂಗಳೂರಿಗೆ ಕೆಂಪೇಗೌಡರ ಕೊಡುಗೆ ಅಪಾರ. ಬೆಂಗಳೂರು ನಿರ್ಮಾತೃ ಎಂಬ ಹೆಗ್ಗಳಿಕೆಯು ಇವರಿಗಿರುವುದರಿಂದ ಇವರನ್ನು ನಾಡಪ್ರಭು ಕೆಂಪೇಗೌಡ ಎಂದೇ ಕರೆಯಲಾಗಿದೆ.
ಕೆಂಪೇಗೌಡರು ಕಲೆ ಮತ್ತು ಕಲಿಕೆಯ ಪೋಷಕರಾಗಿದ್ದರು. ಸಂಪೂರ್ಣವಾಗಿ ಕನ್ನಡ ಮಾತನಾಡುವ ಸಮುದಾಯಕ್ಕೆ ಸೇರಿದವರಾಗಿದ್ದರೂ ಅವರು ಬಹುಭಾಷಾ ಪಂಡಿತರಾಗಿದ್ದರು ಮತ್ತು ಆ ಕಾಲದ ಆಸ್ಥಾನ ಭಾಷೆಯಾದ ತೆಲುಗು ಭಾಷೆಯಲ್ಲಿ ಗಂಗಾ – ಗೌರಿ ವಿಲಾಸ ಎಂಬ ಯಕ್ಷಗಾನ ನಾಟಕವನ್ನು ರಚಿಸಿದರು.
ಸರಿಸುಮಾರು ೪೬ ವರ್ಷಗಳ ಕಾಲ ಆಳಿದ ಕೆಂಪೇಗೌಡರು ೧೫೬೯ರಲ್ಲಿ ನಿಧನರಾದರು. ಅವರ ಸಮಾಧಿಯ ಮೇಲಿನ ೧೬ನೇ ಶತಮಾನದ ಕನ್ನಡ ಶಿಲಾಶಾಸನವು ಮಾಗಡಿಯ ಕೆಂಪಾಪುರ ಎಂಬ ಹಳ್ಳಿಯಲ್ಲಿ ಅವರು ಕುಣಿಗಲ್‌ನಿಂದ ಹಿಂತಿರುಗುತ್ತಿzಗ ವಿವಾದವನ್ನು ಪರಿಹರಿಸಿದ ನಂತರ ಸ್ಥಳದ ಸಾವನ್ನಪ್ಪಿದರು ಎಂದು ಘೋಷಿಸುತ್ತದೆ ಎಂದು ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ.
೨೦೧೫ರ ಮಾರ್ಚ್ ೭ರಂದು ಕೆಂಪೇಗೌಡರ ಸಮಾಧಿಯು ಕೆಂಪಾಪುರದಲ್ಲಿದ್ದ ಮಾಹಿತಿಯು ಇತಿಹಾಸ ತಜ್ಞ ಪ್ರಶಾಂತ್ ಮಾರೂರ್ ಅವರಿಗೆ ಆಕಸ್ಮಿಕವಾಗಿ ಸಿಕ್ಕಿತು. ಸಮಾಧಿಗೆ ಭೇಟಿ ನೀಡಿದ ಇತಿಹಾಸಕಾರರ ಗುಂಪು ಇದನ್ನು ದೃಢೀಕರಿಸಿತು. ತನ್ನ ತಂದೆಯ ಮರಣದ ನಂತರ ಅವನ ಮಗ ಎರಡನೇ ಕೆಂಪೇಗೌಡರು ಸಮಾಧಿಯನ್ನು ನಿರ್ಮಿಸಿದನೆಂದು ನಂಬಲಾಗಿದೆ.
೧೬೦೯ರಲ್ಲಿ ಶಿವಗಂಗೆಯ ಗಂಗಾಧರೇಶ್ವರ ದೇವಸ್ಥಾನದಲ್ಲಿ ಕೆಂಪೇಗೌಡರ ಲೋಹದ ಪ್ರತಿಮೆಯನ್ನು ಮರಣೋತ್ತರವಾಗಿ ಸ್ಥಾಪಿಸಲಾಯಿತು. ೧೯೬೪ರಲ್ಲಿ ಬೆಂಗಳೂರಿನ ಕಾರ್ಪೊರೇಷನ್ ಕಚೇರಿ ಎದುರು ಮತ್ತೊಂದು ಪ್ರತಿಮೆಯನ್ನು ಸ್ಥಾಪಿಸಲಾಯಿತು.
ಬೆಂಗಳೂರಿಗೆ ನಾಡಪ್ರಭು ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸಲು ರಾಜ್ಯ ಸರ್ಕಾರಗಳು ಪ್ರಮುಖ ಹೆಗ್ಗುರುತುಗಳನ್ನು ಅವರಿಗಾಗಿ ಅರ್ಪಿಸಿವೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಇವುಗಳನ್ನು ನಾವು ಬೆಂಗಳೂರಿನಲ್ಲಿ ಕಾಣಬಹುದು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಅಭಿವೃದ್ಧಿಪಡಿಸಿದೆ. ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ , ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ಕೆಂಪೇಗೌಡ ಕಾಲೇಜ್ ಆಫ್ ನರ್ಸಿಂಗ್ ಮತ್ತು ಕೆಂಪೇಗೌಡ ವಸತಿ ಪಿಯು ಕಾಲೇಜುಗಳಂತಹ ಶಿಕ್ಷಣ ಸಂಸ್ಥೆಗಳಿಗೆ ಕೆಂಪೇಗೌಡರ ಹೆಸರನ್ನು ಇಡಲಾಗಿದೆ.
ಬೆಂಗಳೂರಿನಲ್ಲಿ ಒಂದು ಪೊಲೀಸ್ ಠಾಣೆಗೆ ಮತ್ತು ಉದ್ಯಾನವನಕ್ಕೆ ಅವರ ಸ್ಮರಣಾರ್ಥವಾಗಿ ಹೆಸರಿಸಲಾಗಿದೆ. ನಗರದಲ್ಲಿ ಜನನಿಬಿಡ ರಸ್ತೆಗೆ ಕೆಂಪೇಗೌಡ ರಸ್ತೆ ಎಂದು ಹೆಸರಿಸಲಾಗಿದೆ.
೨೦೧೭ ರಿಂದ, ಕರ್ನಾಟಕ ಸರ್ಕಾರವು ಕೆಂಪೇಗೌಡರ ಜನ್ಮ ವಾರ್ಷಿಕೋತ್ಸವ ಅಥವಾ ಕೆಂಪೇಗೌಡ ಜಯಂತಿಯನ್ನು ಆಚರಿಸಲು ಜೂ.೨೭ನೇ ದಿನಾಂಕವನ್ನು ಗುರುತಿಸಿದೆ ಘೋಷಿಸಿದೆ.
ಬಿಬಿಎಂಪಿ ವಾರ್ಷಿಕವಾಗಿ ನೀಡುವ ನಾಗರಿಕ ಪ್ರಶಸ್ತಿಯಾದ ಕೆಂಪೇಗೌಡ ಪ್ರಶಸ್ತಿಯನ್ನು ಅವರ ನೆನಪಿಗಾಗಿ ಸ್ಥಾಪಿಸಲಾಗಿದೆ. ಇತ್ತೀಚೆಗಷ್ಟೇ ೧೦೮ ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಹೆಬ್ಬಾಗಲಿನ ಅನಾವರಣಗೊಳಿಸಲಾಗಿದೆ.
ನಾಡಪ್ರಭು ಕೆಂಪೇಗೌಡರ ಆಡಳಿತ ವೈಖರಿ, ನಗರ ನಿರ್ಮಾಣ ಯೋಜನೆ, ಸಮಾಜ ಸುಧಾರಣೆ, ಸಾಹಿತ್ಯಕ್ಕೆ ನೀಡಿದ ಕೊಡುಗೆ, ಆರ್ಥಿಕ ಸುಧಾರಣೆ , ನೀರಾವರಿ ವ್ಯವಸ್ಥೆಯ ಸುಧಾರಣೆಗೆ ಮತ್ತು ಬೆಂಗಳೂರು ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಅವರು ಶ್ರಮಿಸಿದ ಪರಿ ಎಲ್ಲವೂ ಸದಾ ಸ್ಮರಣೀಯವಾಗಿವೆ. ಸರ್ವರಿಗೂ ಶ್ರೀ ಕೆಂಪೇಗೌಡರ ೫೧೫ನೇ ಜನ್ಮ ದಿನದ ಶುಭಾಶಯಗಳು.
ಕೆ. ಎನ್. ಚಿದಾನಂದ, ಸಾಹಿತಿ , ಹಾಸನ .