ಬ್ರಾಹ್ಮಣ ಮಹಾಸಭಾದಿಂದ ೩ ದಿನಗಳ ಕಾಲ ಅಧಿಕ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ಉಪನ್ಯಾಸ

ಶಿವಮೊಗ್ಗ : ಜಿಲ್ಲಾ ಬ್ರಾಹ್ಮಣ ಮಹಾ ಸಭಾದಿಂದ ಶ್ರಾವಣ ಅಧಿಕ ಮಾಸದಲ್ಲಿ ಆ.೪ರಿಂದ ೬ರವರೆಗೆ ಬಿ.ಹೆಚ್. ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಪ್ರತಿದಿನ ಸಂಜೆ ೬ ಗಂಟೆಗೆ ಅಧಿಕ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ಎಂಬ ವಿಶೇಷ ಉಪನ್ಯಾಸ ಮಾಲಿಕೆ ಆಯೋಜಿಸ ಲಾಗಿದೆ ಎಂದು ಮಹಾಸಭಾದ ಮಹಾ ಸಭಾದ ಕಾರ್ಯದರ್ಶಿ ಬಿ.ಕೆ. ವೆಂಕಟೇಶಮೂರ್ತಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಶ್ರಾವಣದಲ್ಲಿ ಬರುವ ಅಧಿಕ ಮಾಸ ವಿಶಿಷ್ಟವಾದುದು. ಇದನ್ನು ಗಮನಿಸಿ ಮಹಾಸಭಾ ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ ಮಾಲಿಕೆ ಆಯೋಜಿಸಿದೆ. ಆ.೪ ರಂದು ಆಯನೂರು ಮಧುಸೂ ದನಾಚಾರ್ಯ ಅವರು ಯುವ ಜನಾಂಗ ಮತ್ತು ಸಂಸ್ಕಾರ ಕುರಿತು ಉಪನ್ಯಾಸ ನೀಡುವರು ಆ. ೫ ರಂದು ಪಾಂಡೇಶ್ವರದ ಡಾ. ವಿಜಯಮಂಜ ಜೀವನಧರ್ಮ ಕುರಿತು, ಆ.೬ರಂದು ಡಾ. ಹೆಚ್. ಆರ್. ವಾಸುದೇವ ಅವರು ಚಾತುರ್ವಣ್ಯ ಧರ್ಮ ಕುರಿತು ಮಾತನಾಡುವರು ಎಂದರು.
ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶಾಲಾ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಗಳನ್ನು ಆ.೮ರಂದು ೪.೩೦ಕ್ಕೆ ನಗರದ ಶ್ರೀಮಾತಾ ಮಾಂಗಲ್ಯ ಮಂದಿg ದಲ್ಲಿ ಆಯೋಜಿಸಿದ್ದು, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕ್ರಾಂತಿಕಾರಿಗಳ ಚಿತ್ರ ಬಿಡಿಸುವ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಲಾ ಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವರು ಮತ್ತು ತಂಡಗಳು ಆ.೬ರ ಒಳಗೆ ಹೆಸರು ನೀಡಬೇಕು. ಗೆದ್ದ ತಂಡಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಲಾಗುವುದು ಎಂದರು. ಕ್ರಾಂತಿಕಾರಿಗಳ ಚಿತ್ರ ಬಿಡಿಸುವವರು ಮಹಾಸಭಾ ನಿಗದಿಪಡಿಸಿದ ಝಾನ್ಸಿರಾಣಿ ಲಕ್ಷ್ಮಿಬಾಯಿ, ತಾತ್ಯಾಟೋಪಿ, ಮಂಗಲ ಪಾಂಡೆ, ರಾಜ್‌ಗುರು, ಚಂದ್ರಶೇಖರ ಆಜದ್, ಛಾಪೇ ಕರ್ ಸಹೋದರರು, ಸ್ವಾತಂತ್ರ್ಯ ವೀರ ಸಾವರ್ಕರ್, ಮುದವೀಡು ಕೃಷ್ಣರಾಯರು, ವಾಸದೇವ ಬಲವಂತ ಫಡ್ಕೆ, ಸೇನಾಪತಿ ಬಾಪಟ್, ಬಾಲಗಂಗಾಧರ ತಿಲಕ್, ದುರ್ಗಾವತಿ ದೇವಿ, ಸುಬ್ರಹ್ಮಣ್ಯ ಶಿವ, ಅರವಿಂದ ಘೋಷ್, ಸುಭಾಷ್ ಚಂದ್ರ ಬೋಸ್, ಮದನ ಮೋಹನ ಮಾಳವಿಯ, ಖುದಿರಾಂ ಭೋಸ್, ಬಂಕಿಮ ಚಂದ್ರ ಚಟರ್ಜಿ, ಕಾರ್ನಾಡ್ ಸದಾಶಿವರಾಯ, ಅಲ್ಲೂರಿ ಸೀತಾರಾಮ ರಾಜು, ಕಮಲಾ ದೇವಿ ಚಟ್ಟೋಪಾ ಧ್ಯಾಯ, ಪಿಂಗಳಿ ವೆಂಕಯ್ಯ ಇವರ ಚಿತ್ರಗಳನ್ನು ಬಿಡಿಸಬಹುದು. ವಿವರಗಳಿಗೆ ೭೮೨೯೯ -೦೩೮೦೮, ೯೯೪೫೪- ೬೨೪೯೯, ೯೯೮೦೦- ೪೫೩೧೭ ರಲ್ಲಿ ಸಂಪರ್ಕಿಸಿ.
ಪ್ರಮುಖರಾದ ಸೂರ್ಯ ನಾರಾಯಣ, ಕುಮಾರಸ್ವಾಮಿ, ಡಾ. ನಾಗಮಣಿ, ಕೇಶವಮೂರ್ತಿ, ರವಿಕುಮಾರ್, ಶಂಕರನಾರಾಯಣ ಇದ್ದರು.