ಶ್ರೀ ಮಾಯಾಂಬಿಕಾ ದೇವಿ ದೇವಳಕ್ಕೆ ಯಕ್ಕನಹಳ್ಳಿ ಗ್ರಾಮಸ್ಥರಿಂದ 2 ಲಕ್ಷ ರೂ. ದೇಣಿಗೆ…

ಹೊನ್ನಾಳಿ: ಧರ್ಮ, ನಂಬಿಕೆ, ಭಕ್ತಿ, ಶಾಂತಿಗೆ ವಿಶ್ವದಲ್ಲಿ ದೊಡ್ಡ ಸ್ಥಾನ ಹೊಂದಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿ ನಿದೇರ್ಶಕ ವಿಜಯಕುಮಾರ ನಾಗನಾಳ ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಸವಾಪಟ್ಟಣ ಯೋಜನಾ ವ್ಯಾಪ್ತಿಯ ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಶ್ರೀ ಮಾಯಾಂಬಿಕಾ ದೇವಿ ದೇವ ಸ್ಥಾನದ ಜಿರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಮುಖಂಡರಿಗೆ ೨ ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿ ಅವರು ಮಾತನಾಡಿದರು.
ಭಾರತ ದೇಶ ದೇವಾಲಯಗಳ ತವರೂರು. ಈ ದೇಶದಲ್ಲಿ ನೆಲೆಸುವ ಪ್ರತಿಯೊಬ್ಬರೂ ಭಕ್ತಿ ಭಾವದಿಂದ ನಡೆದುಕೊಳ್ಳುವುದ ರಿಂದ ಉತ್ತಮ ಸಂಸ್ಕಾರ, ಸಂಸ್ಕೃತಿ, ಧಾರ್ಮಿಕ ಮನೋಭಾವನೆಗಳು ಬೆಳೆಯುತ್ತವೆ. ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿ ಎಂದು ಹೇಳಿದರು.
ಶ್ರೀ ಮಾಯಾಂಬಿದೇವಿ ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಿಂಗಪ್ಪ, ಮುಖಂಡರಾದ ದೊಡ್ಡ ರಂಗಪ್ಪ, ದೇವರಮನೆ ರುದ್ರಪ್ಪ, ರೇವಣಸಿದ್ಧಪ್ಪ, ಸಳ್ಳಜ್ಜರ ರಂಗಪ್ಪ, ರುದ್ರಪ್ಪ, ಅಶೋಕ, ಶಿವಕುಮಾರ, ಪರಮೇಶ್ವರಪ್ಪ, ಹನುಮಂತಪ್ಪ, ಸುರೇಶ್ ಸೇರಿದಂತೆ ಶ್ರೀಮಾಯಾಂಬಿಕ ಬಳಗದ ಎ ಮಹಿಳೆಯರು ಇದ್ದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಬಸವಾಪಟ್ಟಣ ಯೋಜನಾಧಿಕಾರಿ ನವೀನ್, ಮೇಲ್ವಿಚಾರಕ ಮಂಜು ನಾಥ್, ಸೇವಾಪ್ರತಿನಿದಿಗಳಾದ ಯಶೋದ ಇದ್ದರು.