ಶಿಕಾರಿಪುರ ಕುಮದ್ವತಿ ಪ್ರೌಢಶಾಲೆಗೆ ಶೇ.100 ಫಲಿತಾಂಶ…

1

ಶಿಕಾರಿಪುರ : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಕುಮದ್ವತಿ ಪ್ರೌಢಶಾಲೆಗೆ ಶೇ.೧೦೦ ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ೪೫ ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿ ಯಲ್ಲಿ ೧೪ ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ ೨೪ ವಿದ್ಯಾರ್ಥಿಗಳು ಮತ್ತು ೭ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿzರೆ.
ಮೇಘನ ಬಿ.ಆರ್ ೬೧೬, ಆರಾಧ್ಯ.ಆರ್ ೬೦೯ ಮತ್ತು ವಿದ್ಯಾಲಕ್ಷ್ಮೀ ತೋಟಗಿ ೬೦೦ ಅಂಕಗಳನ್ನು ಪಡೆಯುವುದರ ಮೂಲಕ ಕ್ರಮವಾಗಿ ಶಾಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಅತ್ಯುತ್ತಮ ಫಲಿತಾಂಶದ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ ಪ್ರತಿಭಾನ್ವಿತ ಎಲ್ಲ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸದಸ್ಯರು ಶಾಲಾ ಪ್ರಾಚಾರ್ಯ ವಿಶ್ವನಾಥ.ಪಿ ಶಿಕ್ಷಕರಾದ ಪ್ರಶಾಂತ ಕುಬಸದ, ರೇಷ್ಮಾ ಭಾನು, ಮಂಜುಳಾ ಪಾಟೀಲ್, ಲಲಿತ,ರೇಖಾ, ಹಾಲಸ್ವಾಮಿ, ಚಂದ್ರಶೇಖರ, ನಂದಿನಿ, ನಳಿನಾ, ಯೋಗೆಂದ್ರಮ್ಮ ಸಹಿತ ಎ ಸಿಬ್ಬಂದಿ ವರ್ಗದವರು ಪೋಷಕರು ಅಭಿನಂದಿಸಿzರೆ.