ಸಾಂಸ್ಕೃತಿಕ ಲೋಕಕ್ಕೆ ಈಶ್ವರಪ್ಪರ ಕೊಡುಗೆ ಅನನ್ಯ: ಸ್ವಾಮೀಜಿ

ಶಿವಮೊಗ್ಗ: ಅಖಿಲ ಭಾರ ತೀಯ ರಜಕ (ದೋಭಿ) ಮಹಾ ಸಭಾ (ಮಡಿವಾಳ) ವತಿಯಿಂದ ಇಂದು ಮಾಜಿ ಡಿಸಿಎಂ ಕೆ.ಎಸ್ . ಈಶ್ವರಪ್ಪ ಅವರಿಗೆ ಅವರ ನಿವಾಸ ದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿಗಳು ಈಶ್ವರಪ್ಪ ಅವರನ್ನು ಅಭಿನಂದಿಸಿ ಮಾತನಾಡಿ, ಈಶ್ವರಪ್ಪ ಅವರು ಕೇವಲ ರಾಜಕಾರಣಿಯಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ.ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ಅನನ್ಯ. ತಮ್ ಶ್ರೀಗಂಧ ಸಂಸ್ಥೆಯ ಮೂಲಕ ಹಲವು ಆಧ್ಯಾತ್ಮಿಕ ಹಾಗೂ ಸಂಗೀತ ಮತ್ತು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂ ಡಿದ್ದಾರೆ. ಅವರಿಗೆ ಸದಾ ಒಳಿತಾಗಲಿ ಎಂದು ಹಾರೈಸಿದರು.
ಸಮಾಜದ ಮುಖಂಡರು ಮಾತನಾಡಿ, ಈಶ್ವರಪ್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿಮಡಿವಾಳ ಗುರುಪೀಠಕ್ಕೆ ಸುಮಾರು ೨ಕೋಟಿ ಅನುದಾನ ನೀಡಿ ಸಮಾಜದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಬಿಜೆಪಿಗೂ ಸಂಘಟನೆ ಮೂಲಕ ಸೇವೆ ಸಲ್ಲಿಸಿ ದ್ದಾರೆ. ಪಕ್ಷ ಇವರ ಸೇವೆ ಗುರುತಿಸಿ ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರಮೋದಿಯವರು ಉನ್ನತ ಹುದ್ದೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಡಿವಾಳ ಮಹಾಸಭಾ ಅಧ್ಯಕ್ಷ ಜೆ. ಎಂಜೇ ರಪ್ಪ, ಜಂಟಿ ಕಾರ್ಯದರ್ಶಿ ವೈ. ಚಂದ್ರ ಶೇಖರ್, ಜಿಲ್ಲಾಧ್ಯಕ್ಷ ಹೆಚ್. ಸದಾಶಿವಪ್ಪ, ಮಧು ಕುಮಾ ರ್, ಚೌಡಪ್ಪ, ಟಿ. ರಂಗಪ್ಪ, ಹೆಚ್.ಡಿ. ಕುಮಾರ್, ಸಿದ್ದಲಿಂಗಪ್ಪ ಸೇರಿದಂತೆ ಹಲವರಿದ್ದರು.