ಸಹಕಾರ ಸಂಘಗಳನ್ನು ಬಾಂಧವ್ಯ – ಬೆಸುಗೆಗಳಿಂದ ಮಾತ್ರ ಬಂಡವಾಳ ಶಾಹಿಗಳ ಹಿಡಿತದಿಂದ ಬಿಡಿಸಲು…

ಶಿವಮೊಗ್ಗ: ಬಾಂಧವ್ಯ ಬೆಸುಗೆ ಗಳಿಂದ ಸಹಕಾರ ಸಂಘಗಳ ಏಳಿಗೆ ಸಾಧ್ಯ ಎಂದು ಶ್ರೀ ಗಂಗಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಎ. ಹಾಲೇಶಪ್ಪ ಹೇಳಿದರು.
ಬಾಪೂಜಿ ನಗರದ ಗಂಗಾಮತ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಶ್ರೀ ಗಂಗಾ ಪರಮೇಶ್ವರಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಸಮಾಜದಲ್ಲಿ ಹಾಸುಹೊಕ್ಕಾಗಿ ಬೆಳೆದಿವೆ. ಬಂಡವಾಳ ಶಾಹಿಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಇವು ಸಹಾಯ ಮಾಡುತ್ತವೆ. ಇವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸದಸ್ಯರಿಗೆ ಸಾಲ ನೀಡಿ ಅವರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತವೆ. ಆದರೆ ಸಾಲ ಪಡೆದ ಸದಸ್ಯರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಬೇಕು. ಇಲ್ಲದಿದ್ದರೆ ಸಹಕಾರ ಸಂಘಗಳೇ ಮುಳುಗಿಹೋಗುವ ಅಪಾಯವಿದೆ. ಮತ್ತು ಸಾಲ ವಸೂ ಲಾತಿಗಾಗಿ ಯಾವ ಮುಲಾಜೂ ನೋಡದೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾ ಗುತ್ತದೆ. ಸಾಲ ಪಡೆದವರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಎಂದರು.
ಈ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದ ಮತ್ತು ಹೆಚ್ಚು ಶೇರು ಗಳನ್ನು ಪಡೆದುಕೊಂಡ ಸದಸ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಜಿ ಗಂಗಾಮತ ಸಂಘದ ಉಪಾಧ್ಯಕ್ಷ ಎಸ್.ಸಿ. ಲೋಕೇಶ್ ಉದ್ಘಾಟಿಸಿದರು. ಸಭೆಯಲ್ಲಿ ಜಿಧ್ಯಕ್ಷ ಡಿ.ಬಿ. ಕೆಂಚಪ್ಪ, ಪ್ರಮುಖರಾದ ಚನ್ನಪ್ಪ, ಮಶಪ್ಪ, ಎಂ. ಸಣ್ಣಯ್ಯ, ಮಶಪ್ಪ ಬೇಡರ ಹೊಸಳ್ಳಿ, ಮಹೇಶ್ ಮತ್ತೂರು, ಬಸವಂತಪ್ಪ ಬಂಗೇರ, ಮೇಘ ರಾಜ್, ಎಲ್.ಪಿ. ರಂಗನಾಥ್, ನಾಗೇಶ್ (ಬಾಬು), ಆರ್. ಜನಾ ರ್ಧನ್, ಜಿ.ಬಿ. ಸುಣಗಾರ್, ಎಸ್.ಸಿ ವಿಶ್ವನಾಥ್, ಜೆ. ವಿಶ್ವ ನಾಥ್, ಹೆಚ್.ಎಸ್. ಚಂದ್ರಶೇ ಖರ್, ಬಿ. ಆನಂದಪ್ಪ ಮುಂತಾದವರಿದ್ದರು.
ಕಾರ್ಯದರ್ಶಿ ಹರೀಶ್ ಸಭೆಯ ನಡವಳಿಕೆ ಓದಿದರು. ಎಸ್.ಬಿ. ಅಶೋಕ್ ಕುಮಾರ್ ಪ್ರಾಸ್ತಾವಿಸಿದರು. ಸೂಗೂರು ಶೇಖರಪ್ಪ ನಿರೂಪಿಸಿದರು.