ಸರ್ಕಾರಕ್ಕೆ ೭೧.೪೫ಲಕ್ಷ ರೂ. ನಷ್ಟ ಉಂಟುಮಾಡಿದವರ ರಕ್ಷಣೆಗೆ ನಿಂತ ಜಿಲ್ಲಾಧಿಕಾರಿಗಳು: ಗಂಭೀರ ಆರೋಪ
ಶಿವಮೊಗ್ಗ: ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆದು ಸರ್ಕಾರದ ಬೊಕ್ಕಸಕ್ಕೆ ೭೧.೪೫ ಲಕ್ಷ ರೂ. ನಷ್ಟ ಉಂಟು ಮಾಡಿದವರನ್ನು ಜಿಧಿಕಾರಿಗಳು ರಕ್ಷಣೆ ಮಾಡುತ್ತಿzರೆ ಎಂದು ಕಾಂಗ್ರೆಸ್ ಮುಖಂಡ ಬಿ. ಜಗದೀಶ್ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಧ್ಯಕ್ಷರಾಗಿರುವ ಶಿವಮೊಗ್ಗದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವೇ ಈ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಅಕ್ರಮವಾಗಿ ಹೂಳು ಸಾಗಿಸಿರುವ ಕುರಿತು ಜಿಪಂನ ಕಾರ್ಯಪಾಲಕ ಇಂಜಿನಿಯರ್ ಅವರು ತನಿಖಾ ವರದಿಯನ್ನು ಜಿಧಿಕಾರಿಗಳಿಗೆ ಸಲ್ಲಿಸಿದ್ದರೂ ಸಹ ಈ ಪ್ರಕರಣವನ್ನು ಜಿಧಿಕಾರಿಗಳು ಮುಚ್ಚಿಹಾಕಲು ಪ್ರಯತ್ನಿಸುತ್ತಿzರೆ. ಕೆರೆಯಲ್ಲಿ ಕಾನೂನುಬಾಹಿರವಾಗಿ ಸುಮಾರು ೧೫ರಿಂದ ೨೦ ಅಡಿ ಆಳದಲ್ಲಿ ಮಣ್ಣನ್ನು ತೆಗೆದು ಖಾಸಗಿ ಲೇಔಟ್‌ಗಳಿಗೆ ಸಾಗಿಸಲಾಗಿದೆ. ರೂ.೫ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರುವ ಶಂಕೆ ಇದೆ. ಕೇವಲ ೫೦೦ ಲೋಡಿಗೆ ಅನುಮತಿ ಪಡೆದು ಅಕ್ರಮವಾಗಿ ಸುಮಾರು ೧೫ ಸಾವಿರಕ್ಕೂ ಹೆಚ್ಚು ಲೋಡ್ ಫಲವತ್ತಾದ ಮಣ್ಣನ್ನು ಸಾಗಿಸಲಾಗಿದೆ ಎಂದು ದೂರಿದರು.
ಕೆರೆಯ ಫಲವತ್ತಾದ ಮಣ್ಣನ್ನು ತೆಗೆದು ತೋಟ ಹಾಗೂ ಜಮೀನು ಗಳಿಗೆ ಸಾಗಿಸಬೇಕಿತ್ತು. ಆದರೆ ಖಾಸಗಿ ಲೇಔಟ್‌ಗಳಿಗೆ ಸಾಗಿಸಿರುವುದು ಕಾನೂನುಬಾಹಿರ ವಾಗಿದೆ. ಕೆರೆಯಲ್ಲಿ ಹೂಳು ತೆಗೆಯಲು ಮೂಲ ಇಲಾಖೆ ಅನುಮತಿ ಪಡೆಯಬೇಕು. ಕೆರೆಗಳಿಂದ ಮೂರು ಅಡಿಗಳಿಗಿಂತ ಆಳದಲ್ಲಿ ಹೆಚ್ಚು ಹೂಳು ತೆಗೆಯಲು ನಿರ್ಬಂಧ ವಿಧಿಸಿರುವ ಕುರಿತು ಶಿವಮೊಗ್ಗ ತಾಪಂ ಇಒ, ಪಿಡಿಒಗಳಿಗೆ ಪತ್ರ ಬರೆದಿದ್ದರು. ಆದರೂ ಅಬ್ಬಲಗೆರೆ ಗ್ರಾಪಂ. ಪಿಡಿಒ ಹಿರಿಯ ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿzರೆ ಎಂದು ಆರೋಪಿಸಿದರು.
ಹಿರಿಯ ಭೂ ವಿeನಿಗಳು ಕೆರೆಯಿಂದ ತೆಗೆದ ಮಣ್ಣಿಗೆ ಕೇವಲ ೪೦ ಸಾವಿರ ರೂ. ರಾಜಧನ ನಿಗದಿ ಮಾಡಿ ಕೆರೆಯಲ್ಲಿ ಮರಳು ಇದೆ ಎಂದು ಭಾವಿಸಿ ೧೬ಸಾವಿರ ರಾಜಧನ ವಸೂಲಿ ಮಾಡಿzರೆ. ಕೆರೆ ಅಂಗಳದಲ್ಲಿ ೭೨,೦೧,೯೨೦ ರಾಜಧನದ ಮೊತ್ತದಷ್ಟು ಹೂಳು ತೆಗೆಯಲಾಗಿದೆ. ಆದರೆ ಕೇವಲ ೫೬ ಸಾವಿರ ಮಾತ್ರ ಪಾವತಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಅಗಾಧ ನಷ್ಟ ಉಂಟುಮಾಡಿದೆ. ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಜಿ ಉಸ್ತುವಾರಿ ಸಚಿವರು ಪಂಚಾಯತ್‌ರಾಜ್ ಇಂಜಿನಿ ಯರ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಆದೇಶ ನೀಡಿದ್ದರೂ ಸಹ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಅಕ್ರಮ ಮಣ್ಣಿಗೆ ಅಷ್ಟೂ ರಾಜಧನವನ್ನು ವಸೂಲಿ ಮಾಡಬೇಕು ಹಾಗೂ ಈ ಅಕ್ರಮಕ್ಕೆ ಸಾಥ್ ನೀಡಿದ ಎ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಈ ಹಗರಣವನ್ನು ಜಿಧಿಕಾರಿಗಳು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದು, ಒಂದುವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಅಲ್ಲದೆ ಸರ್ಕಾರ ಸಿಒಡಿ ತನಿಖೆ ನಡೆಸಲು ಆಗ್ರಹಿಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಚಂದ್ರಶೇಖರ್ ಗೌಡ, ಗೇಮ್ನಾ ನಾಯ್ಕ, ಎಸ್. ಪ್ರಕಾಶ್, ಜಯಣ್ಣ, ಗಿರೀಶ್ ಭಾಗವಹಿಸಿದ್ದರು.