ಸತ್ಯಶೋಧಕರೇ ಶಿವಮೊಗ್ಗದ ನೆಮ್ಮದಿ ಹಾಳು ಮಾಡಬೇಡಿ…
ಶಿವಮೊಗ್ಗ: ಸತ್ಯಶೋಧನಾ ಹೆಸರಲ್ಲಿ ರಾಜಕಾರಣಿಗಳು ಹೊರಗಿನಿಂದ ನಗರದ ರಾಗಿಗುಡ್ಡಕ್ಕೆ ಬಂದು ತಿಳಿಯಾಗಿರುವ ವಾತಾವರಣವನ್ನು ಮಲಿನಗೊಳಿಸುವುದು ಬೇಡ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಪರೋಕ್ಷವಾಗಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಸ್ಥಳೀಯರು ಹಾಗೂ ಎ ಪಕ್ಷದ ನಾಯಕರು ಇಲ್ಲಿ ಸಂಯಮ ಕಾಪಾಡಿಕೊಂಡಿzರೆ. ಹಿಂದೂ-ಮುಸ್ಲಿಂ ಯಾರೂ ಕೂಡ ಘಟನೆಯನ್ನು ಬೆಂಬಲಿಸಿಲ್ಲ. ಆದರೆ, ಸತ್ಯಶೋಧನೆ ಹೆಸರಿನಲ್ಲಿ ಹೊರಗಿನಿಂದ ಇಲ್ಲಿಗೆ ಸಾಂತ್ವನ ಹೇಳಲು ಬಂದವರು ವಾತಾವರಣ ಪ್ರಕ್ಷುಬ್ಧಗೊಳಿಸಿzರೆ ಎಂದು ಆರೋಪಿಸಿದರು.
ಹೊರಗಿನಿಂದ ಬಂದ ಬಿಜೆಪಿ ನಾಯಕರು ಆಯುಧ ಪೂಜೆಗೆ ಶಸ್ತ್ರಗಳನ್ನು ಪೂಜೆ ಮಾಡಿ ಎಂದು ಕರೆ ಕೊಟ್ಟಿzರೆ. ನಮಗೂ ಕತ್ತಿ ಹಿಡಿಯಲು ಬರುತ್ತೆ ಎಂದೆ ಆವೇಶಭರಿತರಾಗಿ ಹೇಳಿದ್ದಲ್ಲದೇ, ಆಯುಧ ಪೂಜೆ ಸಂದರ್ಭದಲ್ಲಿ ಸ್ಪಾನರ್ ಬದಿಗಿಟ್ಟು ತಲ್ವಾರ್ ಪೂಜೆ ಮಾಡಿ ಎಂದು ಕರೆ ನೀಡಿzರೆ. ಇವು ಸಾಂತ್ವಾನದ ಮಾತುಗಳೇ? ಎಂದು ಪ್ರಶ್ನೆ ಮಾಡಿದರು.
ಹೀಗೆ ಮಾತನಾಡಿದವರು ತಮ್ಮ ಮಕ್ಕಳ ಕೈಗೆ ಕತ್ತಿ ಕೊಡಲಿ. ಕಂಡವರ ಮಕ್ಕಳಿಗೆ ಕೊಡುವುದು ಬೇಡ. ರಾಜಕಾರಣಿಗಳು ತಮ್ಮ ಮಕ್ಕಳಿಗೆ ಎಂದೂ ಕತ್ತಿ ಕೊಡುವುದಿಲ್ಲ. ಪ್ರತಿಭಟನೆಗೆ ಕರೆ ತರುವುದಿಲ್ಲ. ಇದಕ್ಕೆ ಬಲಿಯಾಗು ವವರು ಬಡವರ ಮಕ್ಕಳೇ. ಬಡವರ ಮಕ್ಕಳ ಕೈಯಲ್ಲಿ ಕತ್ತಿ ಹಿಡಿಸುತ್ತಾರೆ. ಇಂತಹ ಮಾತುಗಳಿಂದ ಸಾಧನೆಯಾದರೂ ಏನು? ಎಂದು ಪ್ರಶ್ನಿಸಿದರು.
ನಗರದಲ್ಲಿ ೩೫ ವಾರ್ಡ್ ಗಳಿವೆ. ೧೩ -೧೪ ವಾರ್ಡ್‌ಗಳಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇzರೆ. ಅಲ್ಲಿ ಎಲ್ಲೂ ಗಲಾಟೆ ಆಗಿಲ್ಲ. ಅದರಲ್ಲಿ ರಾಗಿಗುಡ್ಡ ವಾರ್ಡ್‌ನ ೮ನೇ ಕ್ರಾಸ್‌ನಲ್ಲಿ ಮಾತ್ರ ಗಲಾಟೆ ಆಗಿದೆ. ಘಟನೆಯನ್ನು ನಾವೆಲ್ಲರೂ ಖಂಡಿಸಲೇಬೇಕು. ಹೊರಗಡೆಯಿಂದ ಬಂದವರು ೮ನೇ ಕ್ರಾಸ್ ಗಲಾಟೆಯನ್ನು ೮೦೦ ಕ್ರಾಸ್‌ಗಳಿಗೆ ಹಬ್ಬಿಸಲು ಪ್ರಯತ್ನ ಮಾಡಬಾರದು ಎಂದರು.
ಎಲ್ಲರೂ ಜವಾಬ್ದಾರಿಯಿಂದ ಮಾತಾಡುವುದು ಕಲಿಯಬೇಕು. ನನಗೆ ಈ ಘಟನೆ ಪೂರ್ವ ನಿಯೋಜಿತ ಸಂಚು ಎನಿಸುವುದಿಲ್ಲ. ಅಂದು ಮೆರವಣಿಗೆಯಲ್ಲಿ ೫೦-೬೦ ಸಾವಿರ ಜನರು ಭಾಗವಹಿಸಿದ್ದರು. ಅಲ್ಲಿ ಎಲ್ಲಿಯೂ ಗಲಾಟೆ ಆಗಿಲ್ಲ. ರಾಗಿಗುಡ್ಡದಲ್ಲಿ ಆಗಿರುವುದು ಪುಂಡ ಪೋಕರಿಗಳ ಗಲಾಟೆ. ಜಿಧಿಕಾರಿ ಮತ್ತು ಜಿ ರಕ್ಷಣಾಧಿಕಾರಿಗಳು ಶಾಂತಿ ಕಾಪಾಡಲು ಪೂರ್ಣ ಶ್ರಮ ಹಾಕಿzರೆ. ಟೀಕೆ ಮಾಡಿ ಅವರ ಮನೋಸ್ಥೈರ್ಯ ಕಳೆಯಬಾರದು ಎಂದರು.
ಇಡಿ ದಾಳಿಗೆ ಖಂಡನೆ:
ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಮನೆ ಮೇಲೆ ಇಡಿ ದಾಳಿ ಆಗಿದೆ. ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ. ಅವರು ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದು ತಪ್ಪು ಎನ್ನುವಂತೆ ಆಗಿದೆ. ಬ್ಯಾಂಕ್‌ನಲ್ಲಿ ನಕಲಿ ಬಂಗಾರ ಹಗರಣ ನಡೆದು ೧೦ ವರ್ಷ ಕಳೆದಿದೆ. ಯಾವುದೇ ಅಧ್ಯಕ್ಷ ಆಡಳಿತ ಮಂಡಳಿ ನಾಯಕ ಮಾತ್ರ ಆಗಿರುತ್ತಾನೆ. ಬ್ಯಾಂಕ್ ಎಂಡಿ ಮೇಲೆ ದಾಳಿ ಆಗಬೇಕಿತ್ತು. ನಿರ್ದೇಶಕರನ್ನೂ ಹೊಣೆ ಮಾಡಬೇಕಿತ್ತು. ಅದು ಯಾವುದೂ ಆಗಿಲ್ಲ ಎಂದು ದೂರಿದ ಆಯನೂರು ಮಂಜುನಾಥ್, ಆರ್‌ಎಂಎಂ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮುಕ್ತಿಯಾರ್ ಅಹಮ್ಮದ್, ಧೀರರಾಜ್ ಹೊನ್ನವಿಲೆ, ವೈ.ಹೆಚ್. ನಾಗರಾಜ್, ರಮೇಶ್ ಶೆಟ್ಟಿ ಶಂಕರಘಟ್ಟ, ಹಿರಣ್ಣಯ್ಯ, ಶಿ.ಜು. ಪಾಷಾ, ಐಡಿಯಲ್ ಗೋಪಿ, ಯೇಸುದಾಸ್, ಅಫ್ರೀದಿ ಮೊದಲಾದವರಿದ್ದರು.