ಶಿಕಾರಿಪುರ: ಹಿಂದೂ ಮಹಾಸಭಾ ಗಣಪತಿ ಸಮಿತಿ ನೂತನ ಅಧ್ಯಕ್ಷರಾಗಿ ಸಂತೋಷ್ ಅವಿರೋಧ ಆಯ್ಕೆ

ಶಿಕಾರಿಪುರ: ಪಟ್ಟಣದ ಪ್ರಸಿದ್ದ ಶ್ರೀ ಹಿಂದೂ ಮಹಾಸಭಾ ಗಣಪತಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಸಂತೋಷ್ ಗುಡ್ಡಳ್ಳಿ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಹಿಂದೂಪರ ಸಂಘಟನೆಗಳ ಮುಖಂಡ ಹಾಗೂ ಗಣಪತಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಕೆ ಮೂರ್ತಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಪಟ್ಟಣದ ಹಿಂದೂ ಮಹಾ ಸಭಾ ಗಣಪತಿಗೆ ಹಲವು ದಶಕದ ಸುದೀರ್ಘ ಇತಿಹಾಸವಿದ್ದು ಸರ್ವ ಧರ್ಮೀಯರು ಆಸಕ್ತಿಯಿಂದ ಪಾಲ್ಗೊಂಡು ವಿಜೃಂಭಣೆಯಿಂದ ಸತತ ೨೧ನಡೆಯುವ ಗಣೇಶೋತ್ಸವದಲ್ಲಿ ರಸಮಂಜರಿ, ನೃತ್ಯ, ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲಾಗು ತ್ತದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಅತ್ಯಂತ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಕ್ರಿಯಾಶೀಲ ವ್ಯಕ್ತಿತ್ವದ ಸಂತೋಷ್ ಗುಡ್ಡಳ್ಳಿರವರನ್ನು ಈ ಬಾರಿ ಅವಿರೋಧವಾಗಿ ಆಯ್ಕೆಗೊಳಿಸಲಾ ಗಿದ್ದು ನೂತನ ಸಮಿತಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದ್ದಾರೆ ಎಂದು ತಿಳಿಸಿದ ಅವರು ಹಿಂದೂಗಳ ಸಂಘಟನೆ ಇತ್ತೀಚಿನ ದಿನದಲ್ಲಿ ಹೆಚ್ಚಿನ ಅನಿವಾರ್ಯತೆ ಯಾಗಿದೆ ಎಂದು ತಿಳಿಸಿದರು.
ರೈತರು, ವ್ಯಾಪಾರಸ್ಥರು, ಸಾರ್ವಜನಿಕರು ಗಣೇಶೋತ್ಸವದ ವಿಜೃಂಭಣೆಯ ಆಚರಣೆಗೆ ತನುಮನಧನ ಮೂಲಕ ಸಹಕರಿಸು ವಂತೆ ಮನವಿ ಮಾಡಿದರು.
ನೂತನ ಅಧ್ಯಕ್ಷ ಸಂತೋಷ್ ಗುಡ್ಡಳ್ಳಿ ಮಾತನಾಡಿ, ಸುದೀರ್ಘ ಕಾಲದಿಂದ ಆನೂಚಾನವಾಗಿ ನಡೆದುಕೊಂಡು ಬಂದ ಗಣೇಶೋತ್ಸವಕ್ಕೆ ಈ ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ ಎಲ್ಲರ ಸಹಕಾರದಿಂದ ಪ್ರತಿ ಬಾರಿಯ ಆಚರಣೆ ರೀತಿಯಲ್ಲಿ ವಿಜೃಂಭಣೆ ಯಿಂದ ನೆರವೇರಿಸಲು ಎಲ್ಲ ರೀತಿಯಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮುಖಂಡ ಸುರೇಶ್ ಬೇವೂರು, ರವಿಸಿಂಗ್ ಮತಿತಿತರರು ಉಪಸ್ಥಿತರಿದ್ದರು.