ವ್ಯಾಪಸ್ಥರ ಮಳಿಗೆಗಳಾಗಿ ಮಾರ್ಪಡುತ್ತಿರುವ ಸ್ಮಾರ್ಟ್ ಸಿಟಿ ಫುಟ್‌ಪಾತ್‌ಗಳು; ಸಾರ್ವಜನಿಕರಿಗೆ ಕಿರಿಕಿರಿ …

ಶಿವಮೊಗ್ಗ: ನಗರದ ಸ್ಮಾರ್ಟ್ ಫುಟ್‌ಪಾತ್‌ಗಳೆಲ್ಲಾ ವ್ಯಾಪಾರಸ್ಥರ ಮಳಿಗೆಗಳಾಗಿ ಮಾರ್ಪಟ್ಟಿದ್ದು, ಪಾದಚಾರಿಗಳು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿಯೇ ಓಡಾಡು ವಂತಹ ಪರಿಸ್ಥಿತಿ ನಿರ್ಮಾಣವಾ ಗಿದೆ. ಇದೆಲ್ಲ ಗೊತ್ತಿದ್ದೂ ಸಂಬಂ ಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದಾರೆ.
ಒಂದು ಕಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳೇ ಕಳಪೆಯಾಗಿ ದ್ದರೆ, ಇನ್ನೊಂಡು ಕಡೆ ಫುಟ್ ಪಾತ್‌ಗಳನ್ನು ಸಣ್ಣ ಸಣ್ಣ ವ್ಯಾಪಾರ ಸ್ಥರಿಂದ ಹಿಡಿದು ಮಾಲ್‌ನಂತಹ ದೊಡ್ಡ ವ್ಯಾಪಾರಿಗಳು ಸಹ ಫುಟ್‌ಪಾತ್ ಆಕ್ರಮಿಸಿಕೊಂಡು ಪಾದಚಾರಿಗಳ ಓಡಾಟದ ಹಕ್ಕನ್ನೇ ಕಸಿದುಕೊಂಡಿದ್ದಾರೆ. ಇಡೀ ನಗರದಲ್ಲಿನ ಫುಟ್‌ಪಾತ್‌ಗಳನ್ನು ವ್ಯಾಪಾರಸ್ಥರು ರಾಜರೋಷ ವಾಗಿ ಆಕ್ರಮಿಸಿಕೊಂಡಿದ್ದಾರೆ. ಮೋರ್, ರಿಲೈಯನ್ಸ್‌ನಂತಹ ಮಾಲೀಕರು ಕೂಡ ತಮ್ಮ ಅಂಗಡಿ ಗಳ ಒಳಗೆ ಬೇಕಾದಷ್ಟು ಜಗ ವಿದ್ದರೂ ಫುಟ್‌ಪಾತ್‌ನಲ್ಲಿಯೇ ತರಕಾರಿ, ಹಣ್ಣು, ಅಕ್ಕಿ, ರಾಗಿ ಮೂಟೆಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ.
ಮಹಾನಗರ ಪಾಲಿಕೆಯಂತೂ ಈ ವಿಷಯದಲ್ಲಿ ಜಣಕು ರುಡುತನ ಪ್ರದರ್ಶಿಸುತ್ತಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ತಮ್ಮ ಕಳಪೆ ಕಾಮಗಾರಿಯನ್ನು ಈ ವ್ಯಾಪಾರಸ್ಥರು ಸ್ವಲ್ಪವಾದರೂ ತಮ್ಮ ಕಳಪೆಯನ್ನು ಮುಚ್ಚಿದ್ದಾರೆ ಎಂದು ಸಮಧಾನದಿಂದ ಇದ್ದಾರೆ. ಉಷಾ ನರ್ಸಿಂಗ್ ಹೋಂನಿಂದ ಆಲ್ಕೊಳ ಸರ್ಕಲ್, ಅಲ್ಲಿಂದ ಗೋಪಾಲಗೌಡ ಬಡಾವಣೆಯ ಎರಡೂ ಬದಿಗೆ ಹೋಟೆಲ್‌ಗಳು, ಮಾಲ್‌ಗಳು, ಚಿಕ್ಕಪುಟ್ಟ ಬೀದಿ ವ್ಯಾಪಾರಸ್ಥರು ಇದ್ದಾರೆ. ಇವರೆಲ್ಲರಿಗೂ ಈ ಫುಟ್‌ಪಾತೇ ಆಶ್ರಯ ತಾಣವಾಗಿದೆ. ಫುಟ್ ಪಾತ್ ಕೂಡ ಅವೈಜನಿಕವಾಗಿ ನಿರ್ಮಾಣವಾಗಿರುವುದರಿಂದ ಮತ್ತು ಈ ಅಂಗಡಿಗಳ ಮುಂದೆ ವಾಹನಗಳ ನಿಲುಗಡೆ ಆಗುವುದ ರಿಂದ ರಸ್ತೆಯೇ ಅತ್ಯಂತ ಚಿಕ್ದಾಗಿ ಪಾದಚಾರಿಗಳು ರಸ್ತೆಯಲ್ಲಿ ಓಡಾ ಡುವುದೇ ಕಷ್ಟವಾಗಿದೆ. ಅನೇಕ ಬಾರಿ ಚಿಕ್ಕಪುಟ್ಟ ಅಪಘಾತಗಳು ನಡೆದ ಉದಾಹರಣೆ ಇದೆ.
ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಒಳಗಡೆ ರಿಲೈ ಯನ್ಸ್ ದೊಡ್ಡ ಮಳಿಗೆಯೊಂದಿದೆ. ಬಸ್ ಸ್ಟ್ಯಾಂಡ್ ಹೇಳಿಕೇಳಿ ಜನನಿಬಿಡ ಸ್ಥಳವಾಗಿದೆ. ಆದರೆ ಈ ಅಂಗಡಿಯ ಗುತ್ತಿಗೆದಾರನು ಕೂಡ ಬಸ್‌ಸ್ಟ್ಯಾಂಡಿನ ಒಳಗೆಯೇ ತರಕಾರಿ ಸೇರಿದಂತೆ ವಿವಿಧ ವಸ್ತು ಗಳನ್ನು ಹೊರಗಡೆಯೇ ಮಾರಾಟ ಮಾಡುತ್ತಿದ್ದಾರೆ. ನಿಲ್ದಾಣವೇ ಇಲ್ಲಿ ಇಕ್ಕಟ್ಟಾದಂತೆ ಕಾಣುತ್ತದೆ. ಅಲ್ಲಿನ ಗುತ್ತಿಗೆದಾರನಿಗೆ ಒಳಗಡೆ ವ್ಯಾಪಾರ ಮಾಡಬೇಕೇ ಹೊರತು ನಿಲ್ದಾಣದಲ್ಲಲ್ಲ. ಒಂದುಪಕ್ಷ ಹೊರಗಡೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದರೆ ಅದು ಕೂಡ ತಪ್ಪಾಗುತ್ತದೆ. ಸಾವಿರಾರುಜನರು ಇಲ್ಲಿ ಓಡಾಡುತ್ತಿದ್ದರೂ ಕೂಡ ಸಂಬಂಧಪಟ್ಟ ಯಾವ ಅಧಿಕಾರಿಗಳೂ ಕೂಡ ಈಬಗ್ಗೆ ಗಮನ ಹರಿಸಿಲ್ಲ. ತಕ್ಷಣವೇ ಈ ಸಮ ಸ್ಯೆಯನ್ನು ಬಗೆಹರಿಸಬೇಕಾಗಿದೆ.
ಸಂಜೆಯಾಗುತ್ತಿದ್ದಂತೆ ಫುಟ್ ಪಾತ್‌ಗಳಲ್ಲಿ ಬೀದಿ ಬದಿ ವ್ಯಾಪಾರಿ ಗಳದ್ದೇ ಕಾರುಬಾರು. ಬಿಹೆಚ್ ರಸ್ತೆ ಮತ್ತು ವಿನೋಬನಗರದ ಪೊಲೀಸ್ ಚೌಕಿಯಿಂದ ಲಕ್ಷ್ಮೀ ಚಿತ್ರಮಂದಿರದವರೆಗೂ ಕೂಡ ಎರಡೂ ಕಡೆ ಫುಟ್ ಪಾತ್‌ಗಳಲ್ಲಿ ಹಣ್ಣಿನ ಅಂಗಡಿ, ತರಕಾರಿ, ಹೋಟೆಲ್ ವ್ಯಾಪಾರಸ್ಥರು, ತಿಂಡಿ ಗಾಡಿಗಳು, ಪಾನಿಪೂರಿ ಹೀಗೆ ಮಾಂಸಹಾರಿ ಗಾಡಿಗಳೂ ಕೂಡ ಎಗ್ಗಿಲ್ಲದೆ ವ್ಯಾಪಾರ ಮಾಡುತ್ತಿವೆ.
ಇದಲ್ಲದೆ ಕನ್ಸರ್ವೆನ್ಸಿಗಳಲ್ಲಿ ಕೂಡ ಮಳಿಗೆಗಳು, ಗ್ಯಾರೇಜು ಗಳು, ವರ್ಕ್‌ಶಾಪ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಸ್ಮಾರ್ಟ್ ಸಿಟಿಯ ಸೊಗಸೇ ಹಾಳಾಗಿದೆ. ಕೆಲವರು ತಮ್ಮ ಮನೆಗಳನ್ನು ಕೂಡ ಒತ್ತುವರಿ ಮಾಡಿಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಂತೂ ಓಡಾಡುವುದೇ ಕಷ್ಟವಾಗಿದೆ. ಲೋಡಿಂಗ್ ಅನ್‌ಲೋಡಿಂಗ್ ವಾಹನಗಳು ರಸ್ತೆಯಲ್ಲಿಯೇ ನಿಲ್ಲು ವುದರಿಂದ (೩ನೇ ಪುಟಕ್ಕೆ)