ಭ್ರಷ್ಠಾಚಾರ ಸೇರಿದಂತೆ ಇತರ ವಿಷಯಗಳ ವಿರುದ್ದ ಕಾನೂನು ಹೋರಾಟಕೆ ಸಿದ್ಧ

Manava-hakkulgala-Foundatio

ಶಿವಮೊಗ್ಗ:ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತಿನ ಶಿವಮೊಗ್ಗ ಶಾಖೆ ಅಸ್ತಿತ್ವಕ್ಕೆ ಬಂದಿದ್ದು, ಮಾನವ ಹಕ್ಕುಗಳ ಉಳಿವಿಗಾಗಿ ಜಾಗೃತ ಕಾರ್ಯಕ್ರಮಗಳನ್ನು ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ಮುಂದುವರೆಸುತ್ತದೆ ಎಂದು ಎನ್‌ಎಸಿಹೆಚ್‌ಆರ್‌ಐನ ಸಂಸ್ಥಾಪಕ ಅಧ್ಯಕ್ಷ ಜಾನ್‌ಜೆ ಸಮುವೆಲ್ ಕೀಮ್ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ನಮ್ಮ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಕಳೆದ ಐದು ವರ್ಷಗಳಿಂದ ಇಡೀ ರಾಜದ್ಯಾದಂತ ನಡೆಸುತ್ತ ಬಂದಿದೆ. ಮುಖ್ಯವಾಗಿ ಮಾನವ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯುವುದು. ಯುವಕರಲ್ಲಿ ಗಾಂಜ ಮುಂತಾದ ಮಾದಕ ವ್ಯಸನಗಳ ಬಿಡಿಸಲು ಕಾರ್ಯಕ್ರಮ ರೂಪಿಸುವುದು. ಕಾಲೇಜುಗಳಲ್ಲಿ, ಜಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಶಿವಮೊಗ್ಗದಲ್ಲಿಯೂ ಕೂಡ ಈ ಸಂಸ್ಥೆ ಕಳೆದ ಮೂರು ತಿಂಗಳಿನಿಂದ ಅಸ್ತಿತ್ವಕ್ಕೆ ಬಂದಿದೆ. ಹೊಸ ಸಮಿತಿ ರಚನೆಯಾಗಿದೆ. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದೇವೆ. ಬಾಲ್ಯ ವಿವಾಹ ತಡೆಯುವುದು, ಬಾಲ್ಯ ಕಾರ್ಮಿಕರ ಬಗ್ಗೆ ಕಾರ್ಯಕ್ರಮ ಏರ್ಪಡಿಸುವುದು. ಬಡವರಿಗೆ ಸಹಾಯ ಮಾಡುವುದು ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದೇವೆ ಎಂದರು.
ಜಿಧ್ಯಕ್ಷ ಅಬ್ದುಲ್ ರಹೀಮ್ ಮಾತನಾಡಿ, ಶಿವಮೊಗ್ಗ ಘಟಕ ಅಸ್ತಿತ್ವಕ್ಕೆ ಬಂದು ಕೆಲವೇ ತಿಂಗಳಾಗಿದೆ. ಇದು ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ಸಂಸ್ಥೆಯಾಗಿದೆ. ಭ್ರಷ್ಟಾಚಾರ ಮತ್ತು ಇತರೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಿನ ಹೋರಾಟಕ್ಕೂ ನಾವು ಸಿದ್ಧವಾಗಿದ್ದೇವೆ. ಇತ್ತೀಚೆಗೆ ರಿಪ್ಪನ್‌ಪೇಟೆಯ ಮಹಿಳೆಯೊಬ್ಬರು ರೈಲ್ವೆ ಇಲಾಖೆಯ ಕೆಲಸ ಕೊಡಿಸುವುದಾಗಿ ಹೇಳಿ ಭ್ರಷ್ಟಾಚಾರ ಮಾಡಿದ ಬಗ್ಗೆ ಬಯಲಿಗೆಳೆದಿದ್ದೆವು. ಮುಂದಿನ ದಿನಗಳಲ್ಲಿ ಕೂಡ ಮಾನವ ಹಕ್ಕುಗಳ ರಕ್ಷಣೆಗಾಗಿ ನಾವು ಕೆಲಸ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆಜಿಯ ಮನಿಯ, ರಾಜೇಶ್ ರೆಡ್ಡಿ, ಶ್ರೀಕಾಂತ್, ಕೌಸರ್‌ಬಾನು, ಲತೀಫ್, ಚೇತನ್, ಹಿಂಬ್ರನ್, ಸೈಯ್ಯದ್ ಜಮಾದ್, ಜಬ್ರುಲ್, ಶ್ವೇತ, ಗೌಸ್‌ಖಾನ್, ಗಂಧಂ ಶ್ರೀನಿವಾಸುಲು, ಸಿಖಂದರ್ ಮುಂತಾದವರು ಇದ್ದರು.