ಬಿಜೆಪಿ ಅಭ್ಯರ್ಥಿ ಗೆಲ್ತಾರೆ; ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವೂ ಸಿಗಲ್ಲ: ಈಶ್ವರಪ್ಪ…
ಶಿವಮೊಗ್ಗ: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅತ್ಯಂತ ಅಧಿಕ ಮತಗಳಿಂದ ಜಯಶೀಲರಾಗುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಸೈನ್ಸ್ ಮೈದಾನದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬೂತ್ ನಂ. ೧೬೩ರಲ್ಲಿ ಮತ ಚಲಾಯಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಮೊಗ್ಗ ಹಿಂದುತ್ವದ ಕೇಂದ್ರವಾಗಿದೆ. ಜೊತೆಗೆ ಅಭಿವೃದ್ಧಿಯೂ ಆಗಿದೆ. ಎಲ್ಲ ವರ್ಗದವರ ವಿಶ್ವಾಸ ಬಿಜೆಪಿಗಿದೆ. ಜೊತೆಗೆ ಕಾರ್ಯಕರ್ತರ ಸಂಘಟನೆಯ ಶ್ರಮವಿದೆ. ಹೀಗಾಗಿ ಅತಿಹೆಚ್ಚು ಮತಗಳಿಂದ ಚನ್ನಬಸಪ್ಪ ಅವರು ಗೆಲ್ಲುತ್ತಾರೆ. ಕಳೆದ ಬಾರಿ ನಾನು ಕೂಡ ಅತಿಹೆಚ್ಚು ಅಂತರದ ಮತಗಳಿಂದ ಗೆಲುವು ಸಾಧಿಸಿz. ಈ ಬಾರಿ ಚನ್ನಬಸಪ್ಪನವರು ಕೂಡ ೬೦ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿzರೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಕೂಡಬಿಜೆಪಿ ೧೪೦ ಕ್ಷೇತ್ರಗಳಲ್ಲಿ ನಿಚ್ಚಳ ಬಹುಮತ ಪಡೆದು ಮತ್ತೆ ಅಧಿಕಾರ ಹಿಡಿಯಲಿದೆ. ಈ ಬಾರಿ ಕಾಂಗ್ರೆಸ್ ವಿರೋಧ ಪಕ್ಷವಾಗಿಯೂ ಇರುವುದಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಈಗ ಹಿಂದುಗಳು ನೆನಪಾಗುತ್ತಿzರೆ. ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಒಟ್ಟಾಗಿ ಹೋಗಿ ಪೂಜೆ ಸಲ್ಲಿಸಿzರೆ. ದೇವಿಗೆ ಅವರು ಎಷ್ಟು ಹಿಂದು ಭಕ್ತರು ಎಂಬುದು ಅರ್ಥವಾಗುತ್ತದೆ ಎಂದರು.