ತಂತ್ರeನದ ನೆರವಿನಿಂದಲೇ ಜನಪದ ಮಹತ್ವ ವೃದ್ಧಿ ಸಾಧ್ಯ…

ಶಿವಮೊಗ್ಗ: ಮೊಬೈಲ್, ಟಿವಿಗಳ ಬಳಕೆಯಿಂದ ಜನಪದ ಸಂಸ್ಕೃತಿ ಮರೆಯಾಗುತ್ತಿದ್ದು, ಇಂದಿನ ಯುವಜನತೆ ಆಧುನಿಕ ತಂತ್ರeನದ ನೆರವಿನಿಂದ ಜನಪದ ಸಂಸ್ಕೃತಿ ಪರಂಪರೆಯ ಶ್ರೇಷ್ಠತೆಯನ್ನು ಹೆಚ್ಚಿಸಬೇಕಿದೆ ಎಂದು ಜಿ ಕನ್ನಡ ಜನಪದ ಪರಿಷತ್ ಅಧ್ಯಕ್ಷ, ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇ ಜಿನ ಪ್ರಾಚಾರ್ಯ ಡಾ. ಎಂ. ವೆಂಕಟೇಶ್ ಹೇಳಿದರು.
ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಎಟಿಎನ್‌ಸಿಸಿ ಕಾಲೇಜಿನ ಐಕ್ಯೂಎಸಿ, ಎನ್‌ಎಸ್ ಎಸ್ ವಿಭಾಗ ಹಾಗೂ ಜಿ ಕನ್ನಡ ಜನಪದ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜನಪದ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಜನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಪೂರ್ಣ ಸಾಮಾರ್ಥ್ಯ ಇಂದಿನ ಯುವ ಸಮೂಹಕ್ಕಿದೆ. ಜನಪದ ಸಂಸ್ಕೃತಿ ಪರಂಪರೆಗಳನ್ನು ಯ್ಯೂ ಟೂಬ್ ಸೇರಿದಂತೆ ಹೊಸ ಹೊಸ ಸಾಮಾಜಿಕ ಜಲತಾಣಗಳಲ್ಲಿ ದಾಖಲಿಸಬೇಕು. ಯುವಜನರಿಗೆ ಜನಪದ ಶ್ರೇಷ್ಠತೆಯನ್ನು ವಿಶ್ವ ಸಮೂಹಕ್ಕೆ ತಲುಪಿಸಬಹುದಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್‍ಯದರ್ಶಿ ವಿಜಯ್‌ಕುಮಾರ್ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿ ಅಬ್ಬರದಲ್ಲಿ ಪ್ರಾದೇಶಿಕ ಮಲ್ಯ ಕಣ್ಮರೆಯಾಗುತ್ತಿದೆ. ಜನಪದ ಗೀತೆಗಳು ಬದುಕಿನ ಮಲ್ಯಗಳನ್ನು ಕಲಿಸಿಕೊಡುತ್ತದೆ. ಮಳೆಗಾಲ, ಬರಗಾಲ, ಮನೆ ಕಾರ್ಯಕ್ರಮ ಹೀಗೆ ಪ್ರತಿಯೊಂದು ಸನ್ನಿವೇಶಕ್ಕೂ ಜನಪದ ಹಾಡುಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಕಾರ್ಯ ಕ್ರಮಾಧಿಕಾರಿ ಪ್ರೊ. ಕೆ.ಎಂ. ನಾಗರಾಜು ಮಾತನಾಡಿ, ಪ್ರತಿ ವರ್ಷ ಜನಪದ ಗೀತ ಗಾಯನ ಸ್ಪರ್ಧೆ ಹಮ್ಮಿಕೊಳ್ಳುತ್ತಿದ್ದು, ಜನ ಪದ ಕಲೆ, ಗೀತೆಗಳ ಮಹತ್ವ ಅರಿವು ಮೂಡಿಸುವುದು ಪ್ರಮುಖ ಆಶಯ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಿಯ ಕಲೆಗಳ ಪ್ರತಿಯೊಂದು ಪ್ರಕಾರಗಳನ್ನು ಹೆಚ್ಚು ಹೆಚ್ಚು ಅಧ್ಯಯನ ನಡೆಸಬೇಕು. ಮುಂದಿನ ಪೀಳಿಗೆಗೆ ಜನಪದ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂದರು. ಜನಪದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರೊ. ಪ್ರವೀಣ್ ಬಿ.ಎನ್., ಪ್ರೊ. ಶ್ರೀಲಲಿತಾ, ಪ್ರೊ. ರವಿಕುಮಾರ.ಜಿ., ಡಿವಿಎಸ್ ಕಾಲೇಜಿನ ಶಿವರುದ್ರಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು, ಸಿಬ್ಬಂದಿ, ಸ್ಪರ್ಧೆಯ ತೀರ್ಪುಗಾರರು, ಸ್ವಯಂ ಸೇವಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು