ಜ.೮: ಜೆಸಿಐ ಶಿವಮೊಗ್ಗ ರಾಯಲ್ಸ್ ವಲಯ ನೂತನ ಪದಾಧಿಕಾರಿಗಳ ಪದಗ್ರಹಣ…

2

ಶಿವಮೊಗ್ಗ: ಜೆಸಿಐ ಶಿವಮೊಗ್ಗ ರಾಯಲ್ಸ್ ವಲಯ ೨೪ರ ಘಟಕದ ೨೦೨೨ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.೮ರ ಸಂಜೆ ೬.೩೦ಕ್ಕೆ ಬಸವನಗುಡಿಯ ಆಫೀಸರ್‍ಸ್ ಕ್ವಾಟರ್‍ಸ್ ರಸ್ತೆಯ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ನಡೆಯಲಿದೆ ಎಂದು ಜೆಸಿಐ ಶಿವಮೊಗ್ಗ ರಾಯಲ್ಸ್‌ನ ೨೦೨೪ರ ನಿಯೋಜಿತ ಅಧ್ಯಕ್ಷ ಸುದರ್ಶನ್ ತಾಯಿಮನೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕಳೆದ ವರ್ಷ ಸ್ಥಾಪನೆಗೊಂಡ ಶಿವಮೊಗ್ಗ ರಾಯಲ್ಸ್‌ನ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸು ತ್ತಿದ್ದು, ಸುಮಾರು ೫೧ ಸದಸ್ಯರನ್ನು ಒಳಗೊಂಡಿದೆ. ೧೮ರಿಂದ ೪೦ ವರ್ಷ ದವರು ಸದಸ್ಯರಾಗಬಹುದು ಎಂದರು.
ಶಿವಮೊಗ್ಗ ರಾಯಲ್ಸ್‌ನಿಂದ ಯುವಕರಿಗೆ ಸೇವಾ ಕಾರ್ಯಗಳ ಬಗ್ಗೆ ತರಬೇತಿ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಯೋಜಿಸಲಾಗಿದ್ದು, ಈಗಾಗಲೇ ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರಿನ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದು, ಆ ಶಾಲೆಯನ್ನು ಮಾದರಿ ಶಾಲೆಯ ನ್ನಾಗಿಸುವ ಗುರಿ ಹೊಂದಲಾಗಿದೆ. ಈ ವರ್ಷದ ಮುಂದಿನ ಯೋಜನೆಗಳನ್ನು ಈಗಾಗಲೇ ರೂಪಿಸಿ ಕಾರ್ಯಗತ ಗೊಳಿಸಲು ಉದ್ದೇಶಿಸಿದೆ ಎಂದರು.
ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಜೆ.ಎಫ್.ನ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಶರ್ಮಾ ಆಗಮಿಸಲಿದ್ದು, ಅತಿಥಿಗಳಾಗಿ ವಲಯ -೨೪ರ ಅಧ್ಯಕ್ಷ ಚನ್ನವಿರೇಶ್ ಹಾವಣಗಿ, ಸಮಾಜ ಸೇವಕ ಎಂ. ಶ್ರೀಕಾಂತ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ರಾಯಲ್ಸ್‌ನ ೨೦೨೩ರ ಅಧ್ಯಕ್ಷೆ ಕವಿತಾ ಸಾಗರ್ ವಹಿಸಲಿದ್ದಾರೆ. ಜೆಸಿಐ ಭಾರತ ರೀಜನ್ ಡಿ. ವಲಯ ಉಪಾಧ್ಯಕ್ಷೆ ಸುಷ್ಮಾ ಬಿ. ಹಿರೇಮಠ್ ಉಪಸ್ಥಿತರಿರುವರು ಎಂದರು.
ಸ್ಮಿತಾ ಮೋಹನ್, ಎಂ.ಡಿ. ಯಾಹ್ಯಾ, ತನ್‌ಜೀಲ್, ಮಂಜು ನಾಥ್ ನಲವೆದ ದಿವ್ಯಪ್ರವೀಣ್, ಶೋಭಾ ಸತೀಶ್ ಉಪಸ್ಥಿತರಿದ್ದರು.