ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ರೇಷ್ಠ ಕಾರ್ಯ: ಅಶ್ವತ್ಥ್ ನಾರಾಯಣ ಶೆಟ್ಟಿ

ಶಿವಮೊಗ್ಗ : ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಸಂಸ್ಥೆಗಳು ಸುದೀರ್ಘ ಅವಧಿ ಸೇವೆ ಒದಗಿಸಲು ಸಾಧ್ಯ. ಕೋಟಕ್ ಸಂಸ್ಥೆಯು ಐವತ್ತು ವರ್ಷಗಳ ಸೇವೆ ಮುಂದುವರೆಸುತ್ತಿರುವುದು ಅಭಿನಂದನೀಯ ಸಂಗತಿ ಎಂದು ಉದ್ಯಮಿ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ ಹೇಳಿದರು.
ಶಿವಮೊಗ್ಗ ನಗರದ ಶ್ರೀನಿಧಿ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಇರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯ ೫೦ ನೇ ವರ್ಷದ ಸಂಭ್ರ ಮ ಆಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋಟಕ್ ಸಂಸ್ಥೆಯು ಶಿವಮೊಗ್ಗ ನಗರದಲ್ಲಿ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುತ್ತಿದ್ದು, ಮುಂದಿನ ವರ್ಷಗಳಲ್ಲಿ ಜನರಿಗೆ ಉಪಯುಕ್ತ ಆಗುವಂತೆ ಅಧಿಕ ಸೇವೆಗಳನ್ನು ಒದಗಿಸುವಂತಾಗಲಿ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಶಾಖೆಯು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಮಾತನಾಡಿ, ಬ್ಯಾಂಕ್ ಸದೃಢ ಆಗಿದ್ದರೆ ಸಮಾಜ ಕೂಡ ಆರ್ಥಿಕ ವಾಗಿ ಬಲಿಷ್ಠಗೊಳ್ಳುತ್ತದೆ. ಸಿಬ್ಬಂದಿ ಉತ್ತಮವಾಗಿ ಸ್ಪಂದಿಸುವ ಮನೋಭಾವ ಹೊಂದಿzರೆ. ಬ್ಯಾಂಕ್ ಶಾಖೆಯು ಶತಮಾನ ಆಚ ರಿಸುವಂತಾಗಲಿ ಎಂದರು.
ಕೋಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಶಶಿಧರ್.ಎಸ್ ಮಾತನಾಡಿ, ನಮ್ಮ ಶಾಖೆಯು ಐವತ್ತನೇ ವರ್ಷದ ಸಂಭ್ರಮ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸು ತ್ತಿದೆ. ಮುಂದೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತೇವೆ ಎಂದು ತಿಳಿಸಿದರು.
ಕೋಟಕ್ ಬ್ಯಾಂಕ್ ಉದ್ಯೋ ಗಿಗಳ ಸಂಘದ ಅಧ್ಯಕ್ಷ, ನಿವೃತ್ತ ಉದ್ಯೋಗಿ ವಿ.ನಾಗರಾಜ್ ಸಂಸ್ಥೆ ನಡೆದು ಬಂದ ಹಾದಿ ಹಾಗೂ ಸಂಸ್ಥೆಯ ಸದೃಢವಾಗಿ ಬೆಳೆದ ಬಗ್ಗೆ ವಿವರಿಸಿದರು.
ಹಿರಿಯರಾದ ಭೂಪಾಳಂ ವಿಶ್ವೇಂದ್ರ ಅವರು ಐವತ್ತನೇ ವರ್ಷದ ಸಂಭ್ರಮ ಆಚರಣೆಗೆ ಶುಭ ಹಾರೈಸಿದರು. ಕೋಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕಿ ಸೌಮ್ಯ ಸಾಕ್ರೆ, ಹನುಮಂತ, ಇನಾಯತ್.ಎನ್.ಎಸ್., ಕಿಶನ್ , ಮಲ್ಲಿಕಾರ್ಜುನ ಕಾನೂರು, ಮತ್ತು ಬ್ಯಾಂಕ್ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.