ಆರ್‌ಎಎಫ್ ಘಟಕಕ್ಕೆ ಅಭಿನಂದನೆ ಸಲ್ಲಿಸಿದ ಬಿವೈಆರ್….

ಭದ್ರಾವತಿ:ದೇಶದ ಭದ್ರತೆ ರಕ್ಷಣೆಯ ವಿಚಾರದಲ್ಲಿ ಆರ್‌ಎ ಎಫ್ ಘಟಕವು ಅವಿಸ್ಮರಣೀಯ ವಾದ ಸೇವೆ ಸಲ್ಲಿಸುತ್ತಿರುವುದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ಸಲ್ಲಿಸಿದರು.
ಅವರು ವಿಕಾಸ ಯಾತೆಯ ಅಂಗವಾಗಿ ನಗರದ ಮಿಲ್ಟ್ರಿಕ್ಯಾಂಪ್ ನಲ್ಲಿರುವ ಆರ್‌ಎಎಫ್ ಘಟಕ್ಕೆ ಭೇಟಿ ನೀಡಿ ಅವರಿಂದ ಗೌರವ ರಕ್ಷೆ ಸ್ವೀಕರಿಸಿ ನಂತರ ಏರ್ಪಡಿಸಿದ್ದ ಸಭೆ ಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಏನೇ ಘಟನೆ ಗಳು ಆನಾಹುತ, ಪ್ರಕೃತಿ ವಿಕೋಪ, ನೆರೆ ಪೀಡಿತ, ಗಲಭೆ ಇತ್ಯಾದಿಗಳು ನಡೆದಾಗ ಅಲ್ಲಿಗೆ ತಕ್ಷಣ ಈ ಸಿಬ್ಬಂದಿಗಳು ಧಾವಿಸಿ ತ್ವರಿತ ರೀತಿಯಲ್ಲಿ ತಮ್ಮ ಜೀವದ ಹಂಗು ತೊರೆದು ರಕ್ಷಣಾ ಪರಿಹಾ ರವನ್ನು ಕೈಗೊಳ್ಳುತ್ತಾರೆ. ಗಲಭೆ ಪೀಡಿತ ಸ್ಥಳದಲ್ಲಿ ಶಾಂತಿ ನೆಲೆಸು ವಂತೆ ಮಾಡುವಲ್ಲಿ ಇವರ ಸೇವೆ ಸಾರ್ಥಕ ಎಂದು ಶ್ಲಾಘೀಸಿದರು.
ನೂತನವಾಗಿ ಪ್ರಾರಂಭಗೊಂ ಡಿರುವ ಇಲ್ಲಿನ ಆರ್‌ಎಎಫ್ ಘಟಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಹಾಗು ಅಭಿವೃಧ್ಧಿ ಕಾರ್ಯಗಳಿಗೆ ಕೇಂದ್ರದ ಅಗತ್ಯ ವಾದ ಅನುದಾನದ ನೆರವನ್ನು ಕೊಡಿಸುವ ಬಗ್ಗೆ ಭರಸವೆ ನೀಡಿ ದರು.
ಇದೇ ಸಮಯದಲ್ಲಿ ಘಟಕದ ಕಮಾಂಡೆಂಟ್ ಕಮಲೇಶ್ ಕುಮಾ ರ್ ರವರು ಘಟಕದ ಅಗತ್ಯವಾದ ನೀಲಿ ನಕ್ಷೆಯ ಮಾಹಿತಿಯನ್ನು ನೀಡಿದರು. ಹಾಗು ಇಲ್ಲಿ ಒಟ್ಟು ಮೂರು ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಒಟ್ಟು ೬೬೦ ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿzರೆ ಎಂದರು.
ಡೆಪ್ಯೂಟಿ ಕಮಾಂಡೆಂಟ್ ಬಿ.ಸಿ.ರಾಯ್, ಸಹಾಯಕ ಕಾಮಾ ಂಡೆಂಟ್ ಪ್ರದೀಪ್ ಕುಮಾರ್ ಸೇರಿದಂತೆ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.