ಪ್ರತಿಭಾ ಕಾರಂಜಿ ವಿವಿಧ ಸ್ಪರ್ಧೆಯಲ್ಲಿ ೫ ವಿದ್ಯಾರ್ಥಿಗಳು ಆಯ್ಕೆ : ನಾಯಕ್
ಹೊನ್ನಾಳಿ: ಇತ್ತೀಚೆಗೆ ಬೆನಕನ ಹಳ್ಳಿ ಕ್ಲಸ್ಟರ್ನ ಕಮ್ಮಾರಘಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯ ಕ್ರಮದಲ್ಲಿ ಶಾಲೆ ಪ್ರಾರಂಭವಾದ ಮೊದಲನೇ ವರ್ಷದ ಸ್ಪರ್ಧೆಯಲ್ಲಿ ಕಮ್ಮಾರಘಟ್ಟೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾಗಿzರೆ ಎಂದು ಪೋದಾರ್ ಲರ್ನ್ ಸ್ಕೂಲ್ನ ಪ್ರಾಂಶುಪಾಲ ತಿಪ್ಪೇಸ್ವಾಮಿ ನಾಯಕ್ ತಿಳಿಸಿದರು.
ಅವರು ಕಮ್ಮಾರಘಟ್ಟೆಯ ಪೋದಾರ್ ಲರ್ನ್ ಸ್ಕೂಲ್ನಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳ ಲಾಗಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿ ಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಆದ್ಯತೆ ನೀಡುತ್ತಾ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾಯೋಗಿಕ ಕಲಿಕೆಗಳಿಗೂ ವಿಶೇಷ ಒತ್ತು ನೀಡುವುದರ ಜೊತೆಗೆ ಪಠ್ಯದ ಬಗ್ಗೆ ಆಯಾ ವಾರದ ಸಿಲೆಬಸ್ನ್ನು ಮೊದಲೇ ಯೋಜನೆ ಹಾಕಿಕೊಂಡು ಸತತ ಪ್ರಯತ್ನದ ಮೂಲಕ ನುರಿತ ಶಿಕ್ಷಕ ವರ್ಗದವರ ಸಂಯೋಜನೆಯಿಂದ ಅತ್ಯುತ್ತಮ ಮಗುವಿಗೆ ಕಲಿಕಾ ಸಹಕಾರಿ ವಾತಾವರಣವನ್ನು ನಿರ್ಮಿಸಲಾಗಿದೆ ಎಂದರು.
೫ನೇ ತರಗತಿಯ ಮಹಮ್ಮದ್ ಸಾದ್ ಧಾರ್ಮಿಕ ಪಠಣ ವಿಭಾಗ ದಲ್ಲಿ ಪ್ರಥಮ, ೩ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಹಾಸಿಮ್ ಧಾರ್ಮಿಕ ಪಠಣದಲ್ಲಿ ಪ್ರಥಮ, ೨ನೇ ತರಗತಿಯ ವಿದ್ಯಾರ್ಥಿನಿ ಪ್ರಗ್ನಾ ಛದ್ಮವೇಶದಲ್ಲಿ ಪ್ರಥಮ,೪ನೇ ತರಗತಿಯ ವಿದ್ಯಾರ್ಥಿನಿ ಛಾಯಾ ಪಟೇಲ್ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ೩ನೇ ತರಗತಿಯ ವಿದ್ಯಾರ್ಥಿನಿ ಕುಸುಮಾ ಭಕ್ತಿ ಗೀತೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ಈ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿ ತಂದಿzರೆ ಎಂದು ತಿಳಿಸಿದರು.
ಶಾಲೆಯ ಆಡಳಿತ ಮಂಡ ಳಿಯ ಎಂ.ಪಿ.ಸುನಿಲ್, ವಸಂತ್, ನವೀನ್ ಶಾಲೆಯ ಮಾರ್ಕೇಟಿಂಗ್ ಮ್ಯಾನೇಜರ್ ಕೀರ್ತಿ, ಅಡ್ಮಿನ್ ಮಾನೇಜರ್ ಯಶ್ವಂತ್, ಮುಖ್ಯ ಶಿಕ್ಷಕಿ ಲೀನಾ ರಾಬರ್ಟ್, ಶಿಕ್ಷಕಿ ಯರಾದ ರಶ್ಮಿ, ಜ್ಯೋತಿ, ನೇತ್ರಾ ವತಿ, ನೇತ್ರಾ, ಪೂಜ, ಶಾಂತಾ ದೇವಿ ಹಿರೇ ಮಠ್, ಶಿಕ್ಷಕರಾದ ಅಭಿಷೇಕ್, ಧನಂಜಯ್, ಮಾರು ತಿ, ರಾಜೇಶ್ ಉಪಸ್ಥಿತರಿದ್ದರು.