ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಡಿಸಿ ಸೂಚನೆ…

18-DC-2

ಶಿವಮೊಗ: ನ.೧ ರಂದು ನಗರದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ವನ್ನು ಏರ್ಪಡಿಸಲಾಗಿದ್ದು, ಸಮಾರಂಭಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಧಿಕಾರಿ ಗುರುದತ್ತ ಹೆಗಡೆ ಸೂಚನೆಗಳನ್ನು ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಸಿದ್ದತೆ ಕುರಿತು ಜಿ ಮಟ್ಟದ ಅಧಿಕಾರಿ ಗಳೊಂದಿಗೆ ಚರ್ಚಿಸಲು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಸಲಹೆ- ಸೂಚನೆಗಳನ್ನು ನೀಡಿದರು.
ಅಪರ ಜಿಧಿಕಾರಿಗಳು, ಜಿ.ಪಂ. ಉಪ ಕಾರ್ಯದರ್ಶಿ, ಪಾಲಿಕೆ ಆಯುಕ್ತರು ಹಾಗೂ ಶಿವಮೊಗ್ಗ ತಹಶೀಲ್ದಾರರು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಯನ್ನು ಮುದ್ರಿಸಿ, ಮುದ್ರಣ ಗೊಂಡ ಆಹ್ವಾನ ಪತ್ರಿಕೆಗಳನ್ನು ಸಮಾರಂಭದ ಅತಿಥಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು, ಸಂಘಸಂಸ್ಥೆಗಳು, ಕನ್ನಡ ಸಂಘಟನೆಗಳು ಹಾಗೂ ನಾಗರೀಕರಿಗೆ ಜರಿ ಮಾಡಲು ಸೂಚಿಸಿದರು.


ನ.೧ರ ಬೆಳಿಗ್ಗೆ ೮ರಿಂದ ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ಹೊರಡುವುದು. ಮೆರವಣಿಗೆಯಲ್ಲಿ ಪೊಲೀಸ್, ಗೃಹರಕ್ಷಕ ದಳ, ಸೇವಾದಳ, ಎನ್‌ಸಿಸಿ ಬ್ಯಾಂಡ್, ಡೊಳ್ಳುಕುಣಿತ, ವೀರಗಾಸೆ, ಕೋಲಾಟ, ಭಜನೆ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಲು ಸೂಕ್ತ ವ್ಯವಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ, ಜಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಪಂನ ತಲಾ ಎರಡು ಕಲಾ ತಂಡಗಳನ್ನು ಕಳುಹಿಸಿಕೊಂಡುವಂತೆ ತಿಳಿಸಿದರು.
ಭುವನೇಶ್ವರಿ ದೇವಿ ಪ್ರತಿಮೆ ಅಲಂಕಾರ ಮತ್ತು ವಾಹನ ವ್ಯವಸ್ಥೆಯನ್ನು ಪಾಲಿಕೆ ಆಯುಕ್ತರು ಮಾಡಬೇಕು. ಧ್ವಜರೋಹಣಕ್ಕೆ ಅಗತ್ಯ ವ್ಯವಸ್ಥೆಗಳಾದ ಧ್ವಜ, ಧ್ವಜಸ್ತಂಭ, ವೇದಿಕೆ ಅಲಂಕಾರ ಇತ್ಯಾದಿ ವ್ಯವಸ್ಥೆಯನ್ನು ಪಾಲಿಕೆ ಆಯುಕ್ತರು, ತೋಟಗಾರಿಕೆ ಇಲಾಖೆ ಹಾಗೂ ಜಿ ಪೊಲೀಸ್ ಕಚೇರಿ ವತಿಯಿಂದ ಕೈಗೊಳ್ಳಬೇಕು. ಸ್ವಾಗತ ಕಮಾನು, ಹೂವಿನ ತೋರಣ, ಅತಿಥಿ ಸತ್ಕಾರ, ಪೂರ್ವ ಸಿದ್ದತೆಯನ್ನು ಸಾರಿಗೆ ಉಪ ಆಯುಕ್ತರು, ನಿರ್ಮಿತಿ ಕೇಂದ್ರ ಮತ್ತು ಜಿ ಯುವಜನ ಸಬಲೀಕರಣ ಇಲಾಖೆಯವರು ನಿರ್ವಹಿಸಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ, ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪ್ರವಾಸೋದ್ಯಮ, ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ, ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ, ಕೆಎಸ್‌ಆರ್‌ಟಿಸಿ, ಆರೋಗ್ಯ ಇಲಾಖೆಯವರು ಟ್ಯಾಬ್ಲೋಗಳನ್ನು ತಯಾರಿಸಿ ಪ್ರದರ್ಶಿಸುವಂತೆ ಸೂಚಿಸಿದರು.
ಶಾಲಾ ಮಕ್ಕಳನ್ನು ಮೆರವಣಿಗೆ ಯಲ್ಲಿ ಕರೆತರಲು ಶಿಕ್ಷಣ ಇಲಾಖೆ ಉಪನಿರ್ದೇಶಕರು, ರೂಟ್ ಮ್ಯಾಪ್ ತಯಾರಿಸಿ ನಿರ್ವಹಿಸ ಬೇಕು ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಮೈದಾನದಲ್ಲಿ ಶಾಮಿಯಾನ, ಉತ್ತಮ ಸೌಂಡ್ ಸಿಸ್ಟಂ ಇತರೆ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ, ಆಸನ ವ್ಯವಸ್ಥೆಯನ್ನು ತಹಶೀಲ್ದಾರರು, ಪಾಲಿಕೆಯವರು ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪಾಲನೆ ಮತ್ತು ನಿರ್ವಹಣೆ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಿ ಹಂಚಿಕೆಯನ್ನು ಶಿಮುಲ್, ಪಾಲಿಕೆ, ಡಿಡಿಪಿಐ ನೋಡಿಕೊಳ್ಳು ವಂತೆ ತಿಳಿಸಿದರು.
ಪ್ರಮುಖ ರಸ್ತೆಯ ವೃತ್ತಗಳಿಗೆ ವಿದ್ಯುತ್ ಅಲಂಕಾರವನ್ನು ಮೆಸ್ಕಾಂ, ಪಾಲಿಕೆ ಆಯುಕ್ತರು, ಸೂಡಾ ಆಯುಕ್ತರು ಹಾಗೂ ಧ್ವನಿ ವರ್ಧಕದ ಮೂಲಕ ಕನ್ನಡ -ದೇಶ ಭಕ್ತಿ ಗೀತೆಗಳನ್ನು ಪ್ರಸಾರ ಮಾಡುವ ವವಸ್ಥೆಯನ್ನು ಅಬಕಾರಿ ಇಲಾಖೆ, ನೋಂದಣಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯವರು ನೋಡಿಕೊಳ್ಳಬೇಕೆಂದು ತಿಳಿಸಿದರು.
ಸಂಜೆಯ ಸಾಂಸ್ಕೃತಿಕ ಕಾರ್ಯ ಕ್ರಮಗಳು ಕುವೆಂಪು ರಂಗಮಂದಿರ ದಲ್ಲಿ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ, ಪಾಲಿಕೆ ಆಯುಕ್ತರು ನಿರ್ವಹಿಸಬೇಕು. ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನ ವ್ಯವಸ್ಥೆಯನ್ನು ಜಿ ಸರ್ಜನ್‌ರು ಹಾಗೂ ಜಿ ಅಗ್ನಿ ಶಾಮಕ ಅಧಿಕಾರಿ ನಿರ್ವಹಿಸುವಂತೆ ಸೂಚಿಸಿದ ಅವರು ಎ ಜಿ ಮಟ್ಟದ ಅಧಿಕಾರಿಗಳು, ಕಚೇರಿ ಸಿಬ್ಬಂದಿ ವರ್ಗದವರು ಸಮಾರಂಭಕ್ಕೆ ಹಾಜರಾಗುವಂತೆ ಸೂಚಿಸಿದರು.
ಸಭೆಯಲ್ಲಿ ಜಿ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಅಪರ ಜಿಧಿಕಾರಿ ಸಿದ್ದಲಿಂಗ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಜಿ ಮಟ್ಟದ ಅಧಿಕಾರಿಗಳು ಹಾಜರಿದ್ದರು.