ಓಪಿಎಸ್ ಜಾರಿ ಮಾಡುವಂತೆ ಆಯ್ನೂರ್ ಆಗ್ರಹ…

AYNOOR

ಶಿವಮೊಗ್ಗ: ಸರ್ಕಾರಿ ನೌಕರರ ಎನ್‌ಪಿಎಸ್ (ಹೊಸ ನಿವೃತ್ತಿ ಪಿಂಚಣಿ ಯೋಜನೆ) ರದ್ದುಗೊಳಿಸಿ ಓಪಿಎಸ್ (ಹಳೆ ನಿವೃತ್ತಿ ಪಿಂಚಣಿ ಯೋಜನೆ)ನ್ನು ಜರಿಗೊಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸುಮಾರು ೬ ಲಕ್ಷ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರು ಈಗ ಆತಂಕದಲ್ಲಿದ್ದಾರೆ. ೨೦೦೬ಕ್ಕೂ ಮೊದಲು ಉದ್ಯೋಗ ಪಡೆದ ನೌಕರರು ಹಳೇ ಪಿಂಚಣಿ ವ್ಯವಸ್ಥೆಯಲ್ಲಿ ಮುಂದುವರೇದಿ ದ್ದಾರೆ. ಆದರೆ ಆನಂತರ ಉದ್ಯೋಗ ಪಡೆದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಗೆ ಒಳಪಟ್ಟು ಮಾನಸಿಕ ಕ್ಷೆಭೆಗೆ ಒಳಗಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್‌ನ್ನು ರದ್ದುಪಡಿಸಿ ಓಪಿಎಸ್‌ನ್ನು ನೀಡುವ ಬಗ್ಗೆ ಭರವಸೆ ಕೊಟ್ಟಿತ್ತು. ಆದರೆ, ಓಪಿಎಸ್‌ನ್ನು ಜರಿ ಮಾಡಲು ಅನೇಕ ಕಾನೂನು ತೊಡಕುಗಳಿವೆ. ಇದು ಕೇಂದ್ರ ಸರ್ಕಾರದ ಯೋಜನೆಯಾ ಗಿದ್ದು, ೨೦೦೩ರಲ್ಲಿ ಪ್ರಸ್ತಾಪವಾಗಿ ೨೦೦೪ರಲ್ಲಿ ಜರಿ ಯಾಯಿತು. ತಮ್ಮ ವೇತನದಲ್ಲಿ ಶೇ.೧೦ರಷ್ಟನ್ನು ಕಡಿತ ಗೊಳಿಸಿ ಮತ್ತು ಅದಕ್ಕೆ ಸರ್ಕಾರ ಶೇ.೧೦ರಷ್ಟನ್ನು ನೀಡಿ, ಒಟ್ಟು ಶೇ.೨೦ರಷ್ಟು ಇವರ ಹಣವನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಸೆಕ್ಯೂರಿಟಿ ಡಿಪಾಸಿಟ್ ಗೆ ಜಮಾ ಮಾಡಬೇಕಾಗಿತ್ತು ಎಂದರು.ಹೀಗೆ ಕಡಿತಗೊಂಡ ಹಣ ಕೇಂದ್ರ ಸರ್ಕಾರದ ಸೆಂಟ್ರಲ್ ಏಜೆನ್ಸಿಗೆ ಹೋಗುತ್ತಿತ್ತು. ಆ ಏಜೆನ್ಸಿಯವರು ಇದನ್ನು ಶೇರು ಮಾರುಕಟ್ಟೆಗೆ ತೊಡಗಿಸಿ ಅದರಲ್ಲಿ ಬಂದ ಲಾಭಾಂಶ ವನ್ನು ಪಿಂಚಣಿ ರೂಪದಲ್ಲಿ ಕೊಡುತ್ತಿದ್ದರು. ಆದರೆ, ಶೇರು ಮಾರ್ಕೆಟ್ ಆಗಿರುವುದರಿ ಂದ ನಷ್ಟಗೊಂಡರೆ ಆ ಹಣವು ಸಿಗುತ್ತಿರಲಿಲ್ಲ. ಮತ್ತು ನಿವೃತ್ತಿದಾರ ರಿಗೆ ತಮ್ಮ ಹಣವನ್ನು ಎಲ್ಲಿ ವಿನಿ ಯೋಗ ಮಾಡಿದ್ದಾರೆ ಎಂದೇ ಗೊತ್ತಾಗುತ್ತಿರಲಿಲ್ಲ. ಆ ಮಾಹಿತಿಯೂ ನೀಡಿಲ್ಲ. ಶೇರು ಮಾರುಕಟ್ಟಿನ ಲಾಭ ನಷ್ಟಗಳ ಮೇಲೆ ಪಿಂಚಣಿ ನಿರ್ಧಾರ ವಾಗುತ್ತಿತ್ತು. ಇದು ಸರ್ಕಾರಿ ನೌಕರರಿಗೆ ಅನ್ಯಾಯವಾಗುತ್ತಿತ್ತು ಎಂದರು.
ಕೇಂದ್ರ ಸರ್ಕಾರದ ಅಧೀನ ದಲ್ಲಿಯೇ ಇರುವ ಎನ್‌ಎಸ್‌ಪಿಎಗೆ ವರ್ಗವಾದ ಹಣವನ್ನು ವಾಪಾಸು ತೆಗೆದುಕೊಳ್ಳಲು ಬರುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರಗಳು ಹಳೆ ಪಿಂಚಣಿ ವ್ಯವಸ್ಥೆ ಜರಿಮಾಡಬೇಕು ಎಂದರೆ, ನಿವೃತ್ತಿ ನೌಕರರ ಕಡಿತ ಗೊಂಡ ಹಣ ರಾಜ್ಯ ಸರ್ಕಾರಕ್ಕೆ ವಾಪಾಸ್ಸು ಬರಬೇಕು. ಇದುವ ರೆಗೂ ಈ ಹಣವೇ ೧,೨೯,೬೦೦ ಕೋಟಿ ಆಗುತ್ತದೆ ಎಂದರು.
ಕಾಯ್ದೆ ತಿದ್ದುಪಡಿಗೆ ರಾಜ್ಯದ ಸಂಸದರು ಕೂಡ ಮುಂಬರುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಒತ್ತಾಯಿಸಬೇಕು ಎಂದರು.
ಎನ್‌ಪಿಎಸ್ ನೌಕರರ ಹೋರಾಟಕ್ಕೆ ನಾನು ಮೊದಲಿ ನಿಂದಲೂ ಸಿದ್ದನಿದ್ದೇನೆ. ಅವರಿಗೆ ನನ್ನ ಬೆಂಬಲವಿದೆ ಎಂದರು.
ಪ್ರಮುಖರಾದ ವೈ.ಹೆಚ್. ನಾಗರಾಜ್, ಧೀರರಾಜ್ ಹೊನ್ನವಿ ಲೆ, ಐಡಿಯಲ್ ಗೋಪಿ, ಶಿ.ಜು. ಪಾಶ, ಕೃಷ್ಣ, ಜಗದೀಶ್ ಗೌಡ, ಎಸ್.ವಿ.ಪಾಟಿಲ್, ಹಿರಣ್ಣಯ್ಯ, ಸಂತೋಷ್ ಆಯನೂರು ಇದ್ದರು.